Advertisement

104ರಿಂದ ಬದಲಾಯಿತು 108 ಮಂದಿಯ ಮನಸ್ಸು

01:13 AM Dec 09, 2019 | Sriram |

ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2013ರಲ್ಲಿ ಆರಂಭಿಸಿದ ಆರೋಗ್ಯವಾಣಿ (104)ಯಿಂದ ರಾಜ್ಯಾದ್ಯಂತ 1,670 ಮಂದಿ ಕೈಗೊಂಡ ಆತ್ಮಹತ್ಯೆಯ ನಿರ್ಧಾರ ಬದಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ 108 ಮಂದಿ ನಿರ್ಧಾರ ಬದಲಿಸಿ ಬದುಕು ಮುನ್ನಡೆಸುತ್ತಿದ್ದಾರೆ.

Advertisement

ಆತ್ಮಹತ್ಯೆಗೆ ನಾನಾ ಕಾರಣಗಳಿವೆ. ಜಗತ್ತಿನಲ್ಲಿ ಪ್ರತಿವರ್ಷ 8 ಲಕ್ಷ ಮಂದಿ, ಭಾರತದಲ್ಲಿ ಒಂದು ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

ಪುರುಷರೇ ಅಧಿಕ
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಆರೋಗ್ಯವಾಣಿಗೆ ಬಂದ 3,58,259 ಕರೆಗಳಲ್ಲಿ 24,804 ಮಹಿಳೆಯರು, 3,33,455 ಮಂದಿ ಪುರುಷರದ್ದು. ಆತ್ಮಹತ್ಯೆ
ನಿರ್ಧಾರದ 1,670 ಕರೆಗಳಲ್ಲಿ 250 ಮಹಿಳೆಯರದು ಮತ್ತು 1,420 ಪುರುಷರ ಕರೆಗಳಿವೆ. ಇವರಲ್ಲಿ 15ರಿಂದ 24 ವಯಸ್ಸಿನವರು ಶೇ.70 ಮಂದಿಯಿದ್ದು, ಪ್ರೇಮ ವೈಫ‌ಲ್ಯ, ಕೀಳರಿಮೆ ಸಹಿತ ಸಣ್ಣಪುಟ್ಟ ಕಾರಣಗಳಿದ್ದ ವರು. ಮಾನಸಿಕ ಖನ್ನತೆಗೆ ಸಂಬಂಧಿಸಿ ನಿತ್ಯ 300ಕ್ಕೂ ಅಧಿಕ ಕರೆಗಳು ಬರುತ್ತಿದ್ದು, 20ಕ್ಕೂ ಅಧಿಕ ಪರಿಣತರ ತಂಡ ಆಪ್ತ ಸಮಾಲೋಚನೆಯಲ್ಲಿ ನಿರತವಾಗಿದೆ.


ಮಾನಸಿಕ ಆರೋಗ್ಯದ ಬಗ್ಗೆ ಹಲವಾರು ಮಂದಿಗೆ ಈಗಾಗಲೇ ಆಪ್ತ ಸಮಾಲೋಚನೆ ಮೂಲಕ ಆತ್ಮವಿಶ್ವಾಸ ತುಂಬಿ ಪ್ರೇರಣೆ ನೀಡಲಾಗಿದೆ. ಆತ್ಮಹತ್ಯೆ ಮಾಡಿದ 1,670 ಜನರ ಜೀವ ಉಳಿಸಿದ್ದು, ಪ್ರತೀ ವಾರ ಕರೆ ಮಾಡಿ ನಿಗಾ ವಹಿಸಲಾಗುತ್ತಿದೆ.
-ಡಾ| ಸೆಲ್ವರಾಜ್‌
ಉಪನಿರ್ದೇಶಕರು, ಎಂಆರ್‌ಐ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next