Advertisement
ಜನಸಂಚಾರ ನಿಭಾಯಿಸುವುದು ಕಷ್ಟಮಂಗಳೂರು ದಸರಾದ ಈ ಬಾರಿಯ ಶೋಭಾಯಾತ್ರೆ ವೈಭವವನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತಾದರೂ, ಜನಸಾಗರ ಹಾಗೂ ಟ್ಯಾಬ್ಲೋಗಳ ಒತ್ತಡದಿಂದ ಮೆರವಣಿಗೆ ನಿರೀಕ್ಷಿತ ಸಮಯದಲ್ಲಿ ಮುಗಿಸಲು ಈ ಬಾರಿಯೂ ಸಾಧ್ಯವಾಗಿಲ್ಲ. ಈ ಬಾರಿ ಮೆರವಣಿಗೆ ಅವಧಿ 12 ಗಂಟೆಗೆ ಸೀಮಿತಗೊಳಿಸಿದ್ದರೂ, ಶುಕ್ರವಾರ ಸಂಜೆ 4ಗಂಟೆಗೆ ಹೊರಟ ಮೆರವಣಿಗೆ ಶನಿವಾರ ಬೆಳಗ್ಗಿನ ಜಾವ 6.30ರ ವರೆಗೆ ನಡೆಯುವ ಮೂಲಕ 14.30 ಗಂಟೆ ಸಮಯ ತಗುಲಿತು. ಅದರಲ್ಲೂ 1 ಕಿಲೋ ಮೀಟರ್ ಮೆರವಣಿಗೆ ತಲುಪಲು 8 ಗಂಟೆ ಅವಧಿ ತಲುಪಿದೆ. ಟ್ಯಾಬ್ಲೋ, ವಾಹನ, ಜನಸಂಚಾರವನ್ನು ನಿಭಾಯಿಸುವುದೇ ಪೊಲೀಸರಿಗೆ, ಸಂಘಕಟರಿಕೆಗೆ ದೊಡ್ಡ ತಲೆನೋವಾಗಿತ್ತು.
Related Articles
ಮಂಗಳೂರು ದಸರಾ ಈಗಾಗಲೇ ಜನಪ್ರಿಯಗೊಂಡಿದ್ದು, ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದಾರೆ. ಈ ಮೆರವಣಿಗೆಯನ್ನು ಮತ್ತಷ್ಟು ಕ್ರೀಯಾತ್ಮಕವನ್ನಾಗಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ಕ್ರಿಯಾಶೀಲ ಸ್ತಬ್ದಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನಮ್ಮ ನೆಲದ ಸಂಸ್ಕೃತಿ, ಕಂಪನ್ನು ಪಸರಿಸುವ ತಂಡಗಳಿಗೆ ಮಾತ್ರ ಕಲಾಪ್ರರ್ಶನಕ್ಕೆ ಅವಕಾಶ. ಡಿಜೆ ಹಾಡು, ನೃತ್ಯ, ಎಲ್‌ಇಡಿ ಸ್ಕ್ರೀನ್ ಬಳಸಿದ ಟ್ಯಾಬ್ಲೋಗಳಿಗೆ ಅವಕಾಶ ನೀಡುವುದಿಲ್ಲ.
- ಪದ್ಮರಾಜ್ ಆರ್.,
ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ
Advertisement