Advertisement

ಶಿಕ್ಷಣದಿಂದ ಸಮಾಜದ ಬದಲಾವಣೆ: ಸ್ವಾಮೀಜಿ

12:13 PM Aug 29, 2017 | |

ಪಿರಿಯಾಪಟ್ಟಣ: ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯ ಎಂದು ಕಪ್ಪಡಿ ಕ್ಷೇತ್ರದ ಶ್ರೀಕಂಠ ಸಿದ್ದಲಿಂಗ ರಾಜೇಅರಸ್‌ ಸ್ವಾಮೀಜಿ ತಿಳಿಸಿದರು. ತಾಲೂಕಿನ ರಾವಂದೂರು ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನಾ ಪ್ರತಿಷ್ಠಾನ ವತಿಯಿಂದ 3.26 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Advertisement

ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಲು ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಅನೇಕ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯದಿಂದ  ಅಭಿವೃದ್ಧಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಯುವ ತಂಡ ಮುಂದಾಗಿದ್ದು ಮಠದ ವತಿಯಿಂದ ಒಂದು ಕೊಠಡಿ ನಿರ್ಮಾಣಕ್ಕೆ ಸಂಪೂರ್ಣ ಧನ ಸಹಾಯ ನೀಡುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಕರೀಗೌಡ, ರಾವಂದೂರಿನ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದ್ದು ಸರ್ಕಾರದ ಸಂಸ್ಥೆಗಳನ್ನು ಹಿರಿಯ ವಿದ್ಯಾರ್ಥಿಗಳೂ ಖಾಸಗಿ ಸಂಘ ಸಂಸ್ಥೆಗಳು ಒಗ್ಗೂಡಿ ಅಭಿವೃದ್ಧಿಪಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಈ ಕೆಲಸ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿ ಕಾರ್ಯಕ್ರಮ ಆರಂಭವಾಗಲಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೌಲಭ್ಯಗಳು ದೊರೆಯುವಂತಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆ ಪ್ರತಿಷ್ಠಾನದ ಸಂಸ್ಥಾಪಕ ನಾಗರಾಜು, ಜೀವನದಲ್ಲಿ ಸಮಾಜ ಮುಖೀ ಸಕಾರಾತ್ಮಕ ಚಿಂತನೆಗಳಿದ್ದಾಗ ಮಾತ್ರ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯ. ಒಬ್ಬ ವ್ಯಕ್ತಿಗೆ ನೀಡುವ ಶಿಕ್ಷಣ ಸೇವೆಯಿಂದ ಮಾತ್ರ ಸಾರ್ಥಕತೆ ಕಾಣುತ್ತದೆ. ಈ ನಿಟ್ಟಿನಲ್ಲಿ  ರಾವಂದೂರು ಗ್ರಾಮಸ್ಥರ ಸಹಕಾರ ಮತ್ತು ಇತರೆ ಸಂಘಸಂಸ್ಥೆಗಳ ಸಹಯೋಗದಲ್ಲಿ 3.26 ಕೋಟಿ ವೆಚ್ಚದಲ್ಲಿ ಉತ್ತಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ರಾಧಾ, ಅಂಗನವಾಡಿಯನ್ನು ಸರ್ಕಾರಿ ಶಾಲೆ ಬಲವರ್ಧನಾ ಟ್ರಸ್ಟ್‌ ಮೂಲಕ ಅಭಿವೃದ್ದಿ ಪಡಿಸಿರುವುದು ಹೆಮ್ಮೆಯ ವಿಚಾರ. ಸರ್ಕಾರದೊಂದಿಗೆ ಸಮುದಾಯದ ಸಹಭಾಗಿತ್ವದಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತಿಳಿಸಿದರು. ಪರಿಸರ ಹೋರಾಟಗಾರ ಕೆ.ಎನ್‌.ಸೋಮಶೇಖರ್‌, ಸರ್ಕಾರಿ ಶಾಲೆಗಳಲ್ಲಿ ಅನೇಕ ನ್ಯೂನತೆಗಳಿದ್ದು ಅವುಗಳೆಲ್ಲವನ್ನೂ ಸರಿಪಡಿಸಬೇಕು ಎಂದು ನುಡಿದರು. 

 ತಾಪಂ ಅಧ್ಯಕ್ಷೆ ಕೆ.ಆರ್‌.ನಿರೂಪ, ಚಿಕ್ಕವೀರಪ್ಪ, ನಿವೃತ್ತ ಉಪನ್ಯಾಸಕ ಆರ್‌.ಎಸ್‌.ದೊಡ್ಡಣ್ಣ, ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ರಾಮಚಂದ್ರಗುರೂಜಿ ಮಾತನಾಡಿದರು. ಈ ವೇಳೆ ಅಗಸ್ತ ಫೌಂಡೇಶನ್‌ ವತಿಯಿಂದ ಮಕ್ಕಳಿಗೆ ವಿಜಾnನ ವಸ್ತು ಪ್ರದರ್ಶನ ನಡೆಯಿತು.

ಜಿಪಂ ಸದಸ್ಯೆ ಸಿ.ಮಣಿ, ಗ್ರಾಪಂ ಅಧ್ಯಕ್ಷೆ ಬಿ.ಎಸ್‌.ಶಶಿಕಲಾ, ಸರ್ಕಾರಿ ಶಾಲೆಗಳ ಬಲವರ್ಧನ ಸಂವೃದ್ಧೀಕರಣ ಪ್ರತಿಷ್ಠಾನದ ಅಧ್ಯಕ್ಷ ಷಣ್ಮುಕಾರಾಧ್ಯ, ಸ್ವಾಮಿ, ರಾಜು, ಮುಕುಂದ, ಅಮರ್‌, ಶ್ರೀಕಾಂತ್‌, ಎಸ್‌ಡಿಎಂಸಿ ಅಧ್ಯಕ್ಷ ಜೆ.ಕುಮಾರ್‌, ಮಾನಸ ಸಂಘದ ಅಧ್ಯಕ್ಷ ಆರ್‌.ವಿ.ವಿಶ್ವನಾಥ್‌ ಮತ್ತಿತರರಿದ್ದರು.

ಸರ್ಕಾರಿ ಶಾಲೆಗೆ ದೇಣಿಗೆ ಕೊಟ್ಟವರು
ಕಪ್ಪಡಿ ಕ್ಷೇತ್ರದ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್‌ ಸ್ವಾಮೀಜಿ ಒಂದು ಕೊಠಡಿಗೆ ಮುಂಗಡವಾಗಿ 25 ಸಾವಿರ ರೂ ದೇಣಿಗೆ ನೀಡಿದರು. ರಾಜಮ್ಮ ಚಂದ್ರಶೇಖರ್‌ 1 ಲಕ್ಷರೂ ನೀಡಿದರು. ನವನಿಧಿ ಡೆವಲಪರ್ ಮತ್ತು ಬಾಷ್‌ ಎಂಪ್ಲಾಯ್‌ಮೆಂಟ್‌ ಅಂಡ್‌ ವೆಲ್‌ಪೇರ್‌ ಅಸೋಸಿಯೇಷನ್‌ ಜಯಶಂಕರ್‌ ಮತ್ತು ಮೋಹತ್‌ರಾವ್‌ 2 ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ರಾಮಚಂದ್ರಗುರೂಜೀ ಮತ್ತು ಶಿವಾನಂದಪ್ಪ ಗುರೂಜಿ ತಲಾ 10 ಸಾವಿರ ಹಣ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next