ಮಂಡ್ಯ: ಜಿಲ್ಲೆಯ ಉಸ್ತುವಾರಿ ಬದಲಾವಣೆಗೆಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು,ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಬದ ಲಾ ವ ಣೆಯಾಗುವ ಸಾಧ್ಯತೆ ಇದೆಎನ್ನಲಾಗುತ್ತಿದೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಉರುಳಿಸಲುಕೆ.ಸಿ. ನಾರಾಯಣ ಗೌಡಒಬ್ಬರು. ನಂತರ ನಡೆದಕೆ.ಆರ್. ಪೇಟೆ ಉಪ ಚು® ಾವಣೆಯಲ್ಲಿ ಇತಿಹಾಸ ದಲ್ಲಿಯೇ ಮಂಡ್ಯದಲ್ಲಿ ಕಮಲಅರಳಿಸುವ ಮೂಲಕ 3ನೇಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ನಂತರಮಂಡ್ಯ ಜಿಲ್ಲಾ ಉಸ್ತುವಾರಿಯಾದ ಕೆ.ಸಿ.ನಾರಾಯಣಗೌಡ ಅವರು, ಬಿಜೆಪಿಸರ್ಕಾರದ ಅವ ಯಲ್ಲಿ ಮೊದಲು ತೋಟಗಾರಿಕೆ,ರೇಷ್ಮೆ ಸಚಿವರಾಗಿ ಅ ಧಿಕಾರ ವಹಿಸಿಕೊಂಡ ಅವರುಜಿಲ್ಲಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದರು.2021ರ ಜ.21ರಂದು ಸಚಿವ ಸ್ಥಾನದ ಖಾತೆಬದಲಾಗಿದ್ದು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಸಚಿವರಾದರು. ಸಚಿವರಾಗಿಸುಮಾರು 13 ತಿಂಗಳು ಮಂಡ್ಯ ಜಿಲ್ಲಾ ಉಸ್ತುವಾರಿಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೆ.ಗೋಪಾಲಯ್ಯಗೆ ಉಸ್ತುವಾರಿ?: ಅಬಕಾರಿಸಚಿವರಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಆಗಿರುವ ಕೆ.ಗೋಪಾಲಯ್ಯಗೆ ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸುವ ಸಾಧ್ಯತೆ ಹೆಚ್ಚಿದೆ. ಜತೆಗೆ ಸಚಿವಸಿ.ಪಿ.ಯೋಗೇಶ್ವರ್ ಹೆಸರೂ ಕೇಳಿ ಬರುತ್ತಿದೆ.ಈಗಾಗಲೇ ಬಿಜೆಪಿ ಹೈಕಮಾಂಡ್ ಸ್ಥಳೀಯ ಸಚಿವರು ರಾಜ್ಯ ಮಟ್ಟದಲ್ಲೂ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿಗಳನ್ನುಬದಲಿಸಲು ಮುಂದಾಗಿದೆ.
ಅದರಂತೆ ಸಚಿವಕೆ.ಗೋಪಾಲಯ್ಯಗೆ ಮಂಡ್ಯ ಉಸ್ತುವಾರಿ ನೀಡಿದರೆ, ಕೆ.ಸಿ.ನಾರಾಯಣಗೌಡಗೆ ಚಾಮರಾಜನಗರಉಸ್ತುವಾರಿ ನೀಡುವ ಸಾಧ್ಯತೆ ಇದೆ.ಶೀಘ್ರ ಬದಲಾವಣೆ: ಇತ್ತೀಚೆಗೆ ನಡೆದ ಪಕ್ಷದ ಶಾಸಕರಸಭೆಯಲ್ಲಿ ಹಲವು ಸಚಿವರ ಕಾರ್ಯ ವೈಖರಿ ಬಗ್ಗೆಸಿಎಂಗೆ ದೂರು ಬಂದಿದ್ದವು. ಈ ವಿಚಾರ ಬಿಜೆಪಿ ಹೈಕಮಾಂಡ್‌ಗೂ ತಲುಪಿತ್ತು. ಇದರಿಂದ ಅಂತಿಮ ವಾಗಿಜಿಲ್ಲೆಗಳ ಉಸ್ತುವಾರಿ ಗಳನ್ನು ಬದಲಾಯಿಸಿ ಅವ ರುಪ್ರತಿನಿಧಿ ಸುವ ಜಿಲ್ಲೆ ಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ಜವಾಬ್ದಾರಿ ವಹಿಸುವುದು ಅಗತ್ಯ ಎಂಬುದನ್ನುಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಸಲಹೆನೀಡಿರುವ ಹಿನ್ನೆಲೆ ಯಲ್ಲಿ ಒಂದೆರಡು ದಿನ ಗಳಲ್ಲೇಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡುವಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ಎಚ್.ಶಿವರಾಜು