Advertisement

2020ರ ಹೊಸ ವರ್ಷಕ್ಕೆ ದುಬೈ ಮೆಟ್ರೋದಲ್ಲಿ ಬದಲಾವಣೆ  

10:08 AM Dec 21, 2019 | Sriram |

ದುಬೈ: ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸಡಗರಕ್ಕೆ ಸಿದ್ಧತೆ ಪೂರ್ಣಗೊಳ್ಳುತ್ತಿದೆ. ದುಬೈನಲ್ಲಿ ಹೊಸ ವರ್ಷಕ್ಕೆ ಮೆಟ್ರೋ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ.

Advertisement

ಮಾತ್ರವಲ್ಲದೇ ಪ್ರಯಾಣಿಕರು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಮಿರೇಟ್ಸ್‌ ಏರ್‌ಲೈನ್ಸ್‌, ದುಬೈ ರೋಡ್ಸ್‌ ಆ್ಯಂಡ್‌ ಟ್ರಾನ್ಸ್‌ಪೋರ್ಟ್ ಅಥಾರಿಟಿ, ದುಬೈ ಪೊಲೀಸ್‌, ದುಬೈ ಕಸ್ಟಮ್ಸ, ದ ಜನರಲ್‌ ಡೈರೆಕ್ಟೋರೇಟ್‌ ಆಫ್ ಫಾರೈನ್‌ ರೆಸಿಡೆನ್ಸಿ ಅಫೇರ್‌ ಮತ್ತು ದುಬೈ ಏರ್‌ಪೋರ್ಟ್‌ ಹೇಳಿದೆ.

ಡಿಸೆಂಬರ್‌ 27 ಮತ್ತು 28ರಂದು ರಶಿದಿಯಾ ಮತ್ತು ಡಿಎಂಸಿಸಿ ನಿಲ್ದಾಣದಿಂದ ಹೊರಡುವ ರೆಡ್‌ ಲೈನ್‌ ರೈಲು ಸೇವೆ ಬೆಳಗ್ಗೆ 5ರಿಂದ ಮರುದಿನ 3.30ರ ವರೆಗೆ ಮಾತ್ರ ಇರಲಿದೆ. ಅದೇ ರೀತಿ ಗ್ರೀನ್‌ ಲೈನ್‌ ರೈಲು ಬೆಳಗ್ಗೆ 5.30ರಿಂದ 3.30ರ ವರೆಗೆ ಮಾತ್ರ ಇರಲಿದೆ. ಆದರೆ ಡಿಸೆಂಬರ್‌ 31 ಮತ್ತು ಜನವರಿ 1ರಂದು 24 ಗಂಟೆಯೂ ಮೆಟ್ರೋ ಸೇವೆ ಇರಲಿದೆ.

ಜನವರಿ 2 ಮತ್ತು 3ರಂದು ರಶಿದಿಯಾ ಮತ್ತು ಡಿಎಂಸಿಸಿ ನಿಲ್ದಾಣದಿಂದ ಹೊರಡುವ ರೆಡ್‌ ಲೈನ್‌ ರೈಲು ಸೇವೆ ಬೆಳಗ್ಗೆ 5ರಿಂದ ಮರುದಿನ 3.30ರ ವರೆಗೆ ಮಾತ್ರ ಇರಲಿದೆ. ಅದೇ ರೀತಿ ಗ್ರೀನ್‌ ಲೈನ್‌ ರೈಲು ಬೆಳಗ್ಗೆ 5.30ರಿಂದ 3.30ರ ವರೆಗೆ ಇರಲಿದೆ.

ಹೊಸ ವರ್ಷದ ಸಂದರ್ಭದಲ್ಲಿ ಎಲ್ಲಾ ಮೆಟ್ರೋ ಮತ್ತು ವಿಮಾನ ನಿಲ್ದಾಣಗಳಲ್ಲಿ ಕೇಂದ್ರಗಳಲ್ಲಿ 2 ಬಾರಿ ನಮ್ಮ ಲಗೇಜ್‌ಗಳನ್ನು ಚೆಕ್‌ ಮಾಡಿಕೊಳ್ಳಲಾಗುತ್ತದೆ. ಡಿಸೆಂಬರ್‌ 19ರಿಂದ ಜನವರಿ 6ರ ವರೆಗೆ ಸುಮಾರು 50 ಲಕ್ಷ ಪ್ರಯಾಣಿಕರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೇಟಿ ನೀಡಿದ್ದಾರೆ.ಪ್ರಯಾಣಿಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿರುವ ದುಬೈ ವಿಮಾನ ನಿಲ್ದಾಣಗಳು ಟರ್ಮಿನಲ್‌ಗ‌ಳಲ್ಲಿ ಎರಡು ಲಗೇಜ್‌ಗಳನ್ನು ಡ್ರಾಪ್‌ ಮಾಡುವ ಪಾಯಿಂಟ್‌ಗಳು ಇರಲಿವೆ. ಮಾತ್ರವಲ್ಲದೇ ತಮ್ಮ ಲಗೇಜ್‌ಗಳೊಂದಿಗೆ ಪ್ರಯಾಣಿಕರು 3-4 ಗಂಟೆಗೆ ಮೊದಲೇ ವಿಮಾನಗಳಲ್ಲಿ ಇರಬೇಕು.

Advertisement

ಇನ್ನು ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್‌ಗಳನ್ನು ನಿಭಾಯಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಗಳು ಆಗದಂತೆ ಅವರು ನೋಡಿಕೊಳ್ಳಲಿದ್ದಾರೆ. ವಿಮಾನ ನಿಲ್ದಾಣದಲ್ಲಿನ ಪ್ಯಾಸೆಂಜರ್‌ ಗೇಟ್‌ಗಳನ್ನು ಮುಚ್ಚುವ 20 ನಿಮಿಷಗಳ ಮೊದಲು ಸೂಚನೆಗಳನ್ನು ನೀಡಲಾಗುತ್ತದೆ. ಹ್ಯಾಂಡ್‌ ಬ್ಯಾಗ್‌ಗಳನ್ನು ಹೊಂದಿರುವವರು ಸುಲಭವಾಗಿ ಏರ್‌ಪೋರ್ಟ್‌ ಪ್ರವೇಶಿಸಿಬಹುದು. ಆಧರೆ ಲಗೇಜ್‌ ಹೊಂದಿರುವವರು ಮಾತ್ರ ಕಾಯಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next