ಮಂಗಳೂರು: ರಾಜ್ಯದಲ್ಲಿ ಬದಲಾವಣೆ ಎನ್ನುವುದು ಕರಾವಳಿಯಿಂದಲೇ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ “ಮಂಗಳೂರು ಚಲೋ’ಗೆ ಪ್ರತಿ ಯೊಬ್ಬರೂ ಸಿದ್ಧರಾಗಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಬಿಜೆಪಿ ಎಂದಿಗೂ ಚುನಾವಣೆ ದೃಷ್ಟಿ ಯಲ್ಲಿಟ್ಟು ಕೊಂಡು ಕಾರ್ಯಕರ್ತರನ್ನು ಕಟ್ಟುವುದಿಲ್ಲ. ಅದರ ಬದಲಾಗಿ ದೇಶದ ರಕ್ಷಣೆಗೆ ಕಟ್ಟಾಳುಗಳನ್ನು ಸೃಷ್ಟಿಸಲು ಕಾರ್ಯ ಕರ್ತರನ್ನು ಕಟ್ಟುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಡೆಯೇ ವಿಶಿಷ್ಟ ವಾದುದು. ಸಾಮಾನ್ಯವಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿಯ ಮೊದಲ ಭೇಟಿ ಬಲಿಷ್ಠ ರಾಷ್ಟ್ರಗಳಾಗಿರುತ್ತದೆ. ಆದರೆ ಮೋದಿ ಮೊದಲು ಭೇಟಿ ನೀಡಿದ್ದು ಭೂತಾನ್ ದೇಶಕ್ಕೆ. ಇದೇ ಕಾರಣಕ್ಕಿಂದು ಚೀನದ ರಾಜತಾಂತ್ರಿಕ ವ್ಯವಸ್ಥೆಯನ್ನು ಭೂತಾನ್ ದೇಶದಲ್ಲಿ ತೆರೆಯಲು ಬಿಡಲಿಲ್ಲ ಎಂದು ತಿಳಿಸಿದರು.
ಮತಾಂಧ ಶಕ್ತಿಗಳ ಮಟ್ಟ : ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರ್ ಮಾತನಾಡಿ, ಜಿಲ್ಲೆಯಲ್ಲಿರುವ ಮತಾಂಧ ಶಕ್ತಿಗಳನ್ನು ಮಟ್ಟಹಾಕಬೇಕಿದೆ ಎಂದರು.ಈ ಹಿಂದೆ ಚೀನವನ್ನು ಯುವರಾಷ್ಟ್ರ ಎಂದು ಹೇಳುತ್ತಿದ್ದೆವು. ಆದರೆ ಈಗ ಆ ಸ್ಥಾನವನ್ನು ಭಾರತ ಪಡೆದಿದೆ. ಬಿಜೆಪಿಯ ನೇತೃತ್ವವನ್ನು ಯುವತರುಣರು ವಹಿಸಬೇಕು. ಯುವಕ ರಿಂದ ದೇಶದ ಪರಿವರ್ತನೆಯಾದಾಗ ಮಾತ್ರ ಪ್ರಪಂಚ ದಲ್ಲಿ ಭಾರತ ಪ್ರಜ್ವಲಿಸಲಿದೆ ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಪ್ರಮುಖರಾದ ಹರೀಶ್ ಪೂಂಜ, ಕ್ಯಾ| ಬ್ರಿಜೇಶ್ ಚೌಟ, ಶಿವರಂಜನ್ ಪುತ್ತೂರು ಉಪಸ್ಥಿತರಿದ್ದರು.