Advertisement

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ: ಅರುಣ್‌ ಶಹಾಪುರ

01:52 AM Oct 17, 2019 | mahesh |

ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಬದಲಾವಣೆ ಸಾಧ್ಯ ಎಂದು ಬೆಳಗಾವಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ಹೇಳಿದರು.

Advertisement

ಅವರು ಶಕ್ತಿನಗರದ ಶಕ್ತಿ ರೆಸಿಡೆನ್ಶಿ ಯಲ್‌ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ಅಧ್ಯಾಪಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿ ಸುವ ದೃಷ್ಟಿಯಿಂದ ಕೇಂದ್ರ ಸರಕಾರವು ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ವಿಜ್ಞಾನಿ ಕಸ್ತೂರಿ ರಂಗನ್‌ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡನ್ನು ತಯಾರಿಸಿದ್ದು, ಸಮಿತಿಯು ಅದನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ ಎಂದರು.

ದೇಶದಲ್ಲಿ ಭಾರತೀಯತೆಯ ಶಿಕ್ಷಣ ಜಾರಿಗೆ ಬರಬೇಕು. ಆ ಶಿಕ್ಷಣದಲ್ಲಿ ಕೌಶಲ ಸೇರಿರಬೇಕೆಂಬುದು ಸಮಿ ತಿಯ ಸಲಹೆ. ಒಂದು ಮಗು ತನ್ನ ಮೂರನೇ ವರ್ಷದಲ್ಲಿ ಶಿಕ್ಷಣವನ್ನು ಪಡೆಯಲು ಶಾಲೆಗೆ ಹೋಗಬೇಕು. ಆ ಮಗು ಒಂದು ವಸ್ತುವನ್ನು ನೋಡುತ್ತಾ ಶಿಕ್ಷಣ ಪಡೆಯಬೇಕು. ಈ ಶಿಕ್ಷಣವನ್ನು ನೀಡ ಬೇಕಾದ ಶಿಕ್ಷಕರು ಬದಲಾಗ ಬೇಕು. ಅದಕ್ಕಾಗಿ ನಾಲ್ಕು ವರ್ಷದ ಬಿಎಡ್‌ ಶಿಕ್ಷಣವನ್ನು ಪರಿಚಯಿಸಲು ಕರಡು ಪ್ರತಿಯಲ್ಲಿ ಸೂಚಿಲಾಗಿದೆ. ಶಿಕ್ಷಕರು ಮಗುವಿಗೆ ಜೀವನ ನಡೆಸಲು ಬೇಕಾಗಿರುವ ಕೌಶಲವನ್ನು ಕಲಿಸಿ ಕೊಡುವ ರೀತಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದೆ ಎಂದು ವಿವರಿಸಿದರು.

ಗುಣಮಟ್ಟ ವೃದ್ಧಿಗೆ ಪೂರಕ
ಪ್ರಸ್ತಾವಿತ ನೂತನ ಶಿಕ್ಷಣ ನೀತಿಯು ಯಾವುದೇ ಖಾಸಗಿ/ ಸರಕಾರಿ/ ಅನುದಾನಿತ ಶಾಲೆಗಳಿಗೆ ಮಾರಕವಲ್ಲ; ಒಟ್ಟು ಶಿಕ್ಷಣದ ಗುಣಮಟ್ಟ ವೃದ್ಧಿಗೆ ಅದು ಪೂರಕ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಸ್ವಯಂ ಉದ್ಯೋಗವನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದರು.

ಈ ಕರಡು ನೀತಿಯಲ್ಲಿ ಅನೇಕ ಹೊಸ ವಿಷಯಗಳನ್ನು ಸೇರಿಸುವ ಬಗ್ಗೆ ತಿದ್ದುಪಡಿಗಳನ್ನು ಈಗಾಗಲೇ ದೇಶದ ಸುಮಾರು 2 ಲಕ್ಷ ಜನರು ಕಳುಹಿಸಿ ಕೊಟ್ಟಿರುವುದನ್ನು ನೋಡಿ ದರೆ ದೇಶದಲ್ಲಿ ಇಂತಹ ರಾಷ್ಟ್ರೀಯ ಶಿಕ್ಷಣ ನೀತಿಯ ಆವಶ್ಯಕತೆ ಇದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ತಿಳಿಸಿದರು.

Advertisement

ಶಕ್ತಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಕೆ.ಸಿ. ನಾೖಕ್‌, ಟ್ರಸ್ಟಿ ಮುರಳೀದರ್‌ ನಾೖಕ್‌, ಪ್ರಧಾನ ಸಲಹೆಗಾರ ರಮೇಶ್‌ಕೆ.,ಶಕ್ತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್‌., ಶಕ್ತಿ ರೆಸಿಡೆನ್ಸಿಯಲ್‌ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್‌ ಜಿ. ಉಪಸ್ಥಿತರಿದ್ದರು. ಉಪನ್ಯಾಸಕಿ ಶಿಲ್ಪಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next