Advertisement

ಬದಲಾದ ಬಸವಯ್ಯ

10:04 AM Feb 21, 2020 | mahesh |

ಬಸವಯ್ಯ ತುಂಬಾ ಸೋಮಾರಿಯಾಗಿದ್ದನು. ತಂದೆ ತಾಯಿಗಳು ಎಷ್ಟೇ ಹೇಳಿದರೂ ಯಾವ ಕೆಲಸವನ್ನು ಮಾಡಲು ಇಷ್ಟ ಪಡುತ್ತಿರಲಿಲ್ಲ. ಊರವರು ಕೂಡಾ ಅವನನ್ನು ಸೋಮಾರಿಯೆಂದು ಹೀಯಾಳಿಸುತ್ತಿದ್ದರು. ಊರವರ ಮಾತುಗಳು ಬಸವಯ್ಯನ ತಂದೆ ತಾಯಿಯ ಕಿವಿಗೆ ಬಿದ್ದವು. ಅವರು ತುಂಬಾ ದುಃಖಪಟ್ಟರು. ಏನಾದರೂ ಮಾಡಿ ಬಸವಯ್ಯನನ್ನು ಯಾವುದೋ ಒಂದು ಕೆಲಸಕ್ಕೆ ಸೇರಿಸಬೇಕೆಂದು ನಿರ್ಣಯಿಸಿದರು. ಒಂದು ದಿನ ಬಸವಯ್ಯನನ್ನು ಕರೆದು “ನೀನು ಯಾವುದೇ ಕೆಲಸವನ್ನು ಮಾಡದೇ ಹೀಗೆ ಎಷ್ಟು ಕಾಲ ಇರುತ್ತೀಯ? ನಾವು ಇರುವಷ್ಟು ಕಾಲ ನಿನ್ನನ್ನು ಹೇಗೋ ಪೋಷಿಸುತ್ತೀವೆ. ಆದರೆ ಮುಂದಿನ ದಿನಗಳು ಹೀಗೆಯೇ ಇರುವುದಿಲ್ಲ. ನೀನು ಯಾವುದಾದರೂ ಒಂದು ಕೆಲಸವನ್ನು ಹುಡುಕಿಕೋ’ ಎಂದರು. ತಂದೆ ತಾಯಿಯ ಒತ್ತಡಕ್ಕೆ ಮಣಿದು ಅಡವಿಗೆ ಹೋಗಿ ಕಟ್ಟಿಗೆಗಳನ್ನು ತರುವ ಕೆಲಸಕ್ಕೆ ಸೇರಿಕೊಂಡ.

Advertisement

ಯಾವತ್ತೂ ಕೆಲಸ ಮಾಡಿರದ ಬಸವಯ್ಯನಿಗೆ ಕಟ್ಟಿಗೆಗಳನ್ನು ಹೇಗೆ ಕಡಿಯಬೇಕೆಂದು ತಿಳಿಯಲಿಲ್ಲ. ಆಗ ಅಲ್ಲಿಯೇ ಇದ್ದ ಒಂದು ಮರದ ಕೆಳಗೆ ಕುಳಿತು ಯೋಚಿಸತೊಡಗಿದನು. ಅಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದರಿಂದ ಅವನಿಗೆ ನಿದ್ದೆ ಬಂದಿತು. ಆಗ ಅವನು ಅಲ್ಲಿಯೇ ಮಲಗಿಬಿಟ್ಟ. ಸ್ವಲ್ಪ ಹೊತ್ತಿಗೆ ಮರದ ನೆರಳು ಹೋಗಿ ಬಿಸಿಲು ಬಂದಿತು. ಆದರೆ ಬಸವಯ್ಯ ಮಲಗಿದ್ದ ಜಾಗದಿಂದ ಕದಲಲಿಲ್ಲ. ಅಷ್ಟರಲ್ಲಿ ಒಂದು ಸಿಂಹ ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿದ. ಅವನಿಗೆ ಭಯದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಕೂಡಲೆ ಅವನಿಗೆ ಒಂದು ಉಪಾಯ ಹೊಳೆಯಿತು. ಕೊಡಲಿಯ ಸಹಾಯದಿಂದ ಮರದ ಟೊಂಗೆಗಳನ್ನು ಕ್ಷಣಮಾತ್ರದಲ್ಲಿ ಕಡಿದ. ಆ ಟೊಂಗೆಯ ತುಂಡನ್ನು ಆಯುಧದಂತೆ ಬಳಸಿಕೊಂಡ. ಸಿಂಹ ಅಲ್ಲಿಂದ ಕಾಲೆ¤ಗೆಯಿತು. ಕಟ್ಟಿಗೆ ಕಡಿಯುವುದು ತನಗೆ ಬಾರದು ಎಂದುಕೊಂಡಿದ್ದವ ತನಗೆ ಅಪಾಯ ಒದಗಿದ ಕೂಡಲೆ ಕಟ್ಟಿಗೆ ಕಡಿದುದು ಅಚ್ಚರಿಯಂತೆ ತೋರಿತು. ಅದೇ ಸಮಯಕ್ಕೆ ಮನಸ್ಸಿದ್ದರೆ ಮಾರ್ಗ ಎಂದೂ ಅರ್ಥವಾಯಿತು.

– ಕೆ.ಎನ್‌. ಅಕ್ರಂ ಪಾಷ

Advertisement

Udayavani is now on Telegram. Click here to join our channel and stay updated with the latest news.

Next