Advertisement

Fact Check: ಚಂದ್ರಯಾನ-3ಗೆ ಶ್ರಮಿಸಿದಾತ ಇಡ್ಲಿ ಮಾರುವ ಸ್ಥಿತಿಗೆ.. ನಿಜಕ್ಕೂ ಆಗಿರೋದೇನು?

11:23 AM Sep 20, 2023 | Team Udayavani |

ನವದೆಹಲಿ: ಚಂದ್ರಯಾನ -3ರ ಯೋಜನೆಯಲ್ಲಿ ತನ್ನ ಸೇವೆ ನೀಡಿದ್ದ ಟೆಕ್ನಿಶಿಯನ್‌ ಒಬ್ಬರಿಗೆ ಸೂಕ್ತ ಸಂಬಳ ಸಿಗದೆ  ರಸ್ತೆಬದಿ ಇಡ್ಲಿ ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ವರದಿ ಮಾಡಿದ್ದ ʼಬಿಬಿಸಿʼ ಸುದ್ದಿಯನ್ನು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್‌ ಚೆಕ್‌ ಮಾಡಿದೆ.

Advertisement

ಯಾವ ಸುದ್ದಿಯಿದು?:

ಇಸ್ರೋ ಚಂದ್ರಯಾನ-3ರ ಯಶಸ್ಸಿನಲ್ಲಿ  ತಂತ್ರಜ್ಞರಾಗಿ ಕೆಲಸ ಮಾಡಿದ್ದ ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ದೀಪಕ್ ಕುಮಾರ್ ಉಪ್ರಾರಿಯಾ ಅವರಿಂದು ಜೀವನ ಸಾಗಿಸಲು ರಸ್ತೆಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ವರದಿ ತಿಳಿಸಿತ್ತು.

ಯಾರು ಈ ದೀಪಕ್ ಕುಮಾರ್?:  ಉಪ್ರಾರಿಯಾ ಅವರು ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರು. 2012ರಲ್ಲಿ ಖಾಸಗಿ ಕಂಪನಿಯೊಂದರ ಕೆಲಸ ಬಿಟ್ಟು ₹ 8,000 ಸಂಬಳಕ್ಕೆ ಎಚ್‌ಇಸಿ(ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ಕಂಪನಿಗೆ ಸೇರಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು.

ಸರ್ಕಾರಿ ಕಂಪೆನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಇಸ್ರೋದ ಚಂದ್ರಯಾನ-3ರ  ಉಡಾವಣಾ ಪ್ಯಾಡ್ ನಿರ್ಮಿಸಿದೆ. ಈ ಲಾಂಚ್‌ ಪ್ಯಾಡ್‌ ನಿರ್ಮಿಸಲು ಸುಮಾರು 2,800 ಟೆಕ್ನಿಶಿಯನ್‌ ಗಳು ಹಗಲು ಇರುಳು ಶ್ರಮವಹಿಸಿದ್ದಾರೆ. ಇದರಲ್ಲಿ ದೀಪಕ್ ಕುಮಾರ್ ಅವರು ಕೂಡ ಒಬ್ಬರಾಗಿದ್ದರು ಎಂದು ʼಬಿಬಿಸಿ ಹಿಂದಿʼ ಫೋಟೋ ಸಹಿತ ವರದಿ ಮಾಡಿತ್ತು.

Advertisement

“ಇಸ್ರೋ ಲಾಂಚ್‌ಪ್ಯಾಡ್ ನಿರ್ಮಿಸುತ್ತಿರುವ ಎಚ್‌ಇಸಿ ಜನರು ಟೀ, ಇಡ್ಲಿ ಮಾರುತ್ತಿದ್ದಾರೆ, 18 ತಿಂಗಳಿಂದ ಸಂಬಳ ಬಂದಿಲ್ಲ: ಗ್ರೌಂಡ್ ರಿಪೋರ್ಟ್” ಹೆಡ್‌ ಲೈನ್‌ ಹಾಕಿ ವರದಿ ಮಾಡಿತ್ತು. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್‌ ಚೆಕ್ ಮಾಡಿದ್ದು, ಈ ಸುದ್ದಿಯ ಹೆಡ್‌ ಲೈನ್‌ ಗೊಂದಲಮಯವಾಗಿದೆʼ ಎಂದಿದೆ.‌

ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಗೆ ಚಂದ್ರಯಾನ-3ರ ಯಾವುದೇ ಘಟಕಗಳ ತಯಾರಿಕೆಯನ್ನು ವಹಿಸಿಕೊಟ್ಟಿಲ್ಲ.

2003 ಮತ್ತು 2010 ರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೆ ಕೆಲವು ಮೂಲಸೌಕರ್ಯಗಳನ್ನು ಎಚ್‌ಇಸಿ ಪೂರೈಸಿದೆ ಎಂದು ಸರ್ಕಾರದ ಪಿಐಬಿ ಫ್ಯಾಕ್ಟ್‌ ಚೆಕ್‌ ಮಾಡಿ ಟ್ವೀಟ್‌ ಮಾಡಿದೆ.

ಕಂಪನಿಗಳ ಕಾಯಿದೆಯಡಿ ನೋಂದಾಯಿಸಲಾದ ಎಚ್‌ಇಸಿ, ಪ್ರತ್ಯೇಕ ಕಾನೂನು ಘಟಕವಾಗಿದೆ ಮತ್ತು BHEL ನಂತಹ ತನ್ನದೇ ಆದ ಸಂಪನ್ಮೂಲಗಳನ್ನು ಅದು ಉತ್ಪಾದಿಸುತ್ತದೆ ಎಂದು ಈ ಸಂಬಂಧ  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಟ್ವೀಟ್‌ ಮಾಡಿದ್ದಾರೆ.

ಸಂಸತ್ತಿನಲ್ಲಿ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಚಂದ್ರಯಾನ -3ಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಎಚ್‌ಇಸಿಗೆ ನಿಯೋಜಿಸಿಲ್ಲ ಎಂದಿರುವ ದಾಖಲೆಗಳ ಸ್ಕ್ರೀನ್‌ ಶಾಟ್‌ ಗಳನ್ನು ಕಾಂಚನ್ ಗುಪ್ತಾ ಹಂಚಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next