Advertisement

ಚಂದ್ರಯಾನ-2: ಗಮನ ಸೆಳೆಯುತ್ತಿದೆ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪ

10:09 AM Sep 07, 2019 | Hari Prasad |

ಪುರಿ: ಪ್ರಸಿದ್ಧ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಸಮುದ್ರ ಕಿನಾರೆಯಲ್ಲಿ ಚಂದ್ರಯಾನ-2ರ ಯಶಸ್ಸಿಗಾಗಿ ಅತ್ಯಾಕರ್ಷಕ ಮರಳು ಶಿಲ್ಪವನ್ನು ರಚಿಸಿದ್ದಾರೆ.

Advertisement

ಸುದರ್ಶನ್ ಪಟ್ನಾಯಕ್ ಅವರು ಪ್ರಮುಖ ದಿನಗಳ ಸಂದರ್ಭದಲ್ಲಿ ವಿಶೇಷ ಥೀಮ್ ಗಳನ್ನು ಇರಿಸಿಕೊಂಡು ಮರಳು ಶಿಲ್ಪವನ್ನು ರಚಿಸುತ್ತಾ ಬರುತ್ತಿದ್ದಾರೆ.

ಈ ಬಾರಿ ಚಂದ್ರಯಾನ-2ರ ಯಶಸ್ಸಿಗಾಗಿ ಸುದರ್ಶನ್ ರಚಿಸಿರುವ ಮರಳು ಶಿಲ್ಪ ಎಲ್ಲರ ಗಮನ ಸೆಳೆಯುತ್ತಿದೆ. ಆಕಾಶ ಬಣ್ಣದ ಹಿನ್ನಲೆಯಲ್ಲಿ ಚಂದ್ರನ ಚಿತ್ರವನ್ನು ಬಿಡಿಸಿ ತ್ರಿವರ್ಣದಲ್ಲಿ ಚಂದ್ರನ ಕಕ್ಷೆಯನ್ನು ಪಡಿಮೂಡಿಸಲಾಗಿದೆ ಮತ್ತು ವಿಕ್ರಂ ಲ್ಯಾಂಡರ್ ಮೇಲೆ ಭಾರತದ ತ್ರಿವರ್ಣ ಧ್ವಜನ್ನು ಚಿತ್ರಿಸಿರುವುದು ಗಮನ ಸೆಳೆಯುವಂತಿದೆ.

ಚಂದ್ರಯಾನ-2ರ ಯಶಸ್ಸಿಗಾಗಿ ದೇಶವಾಸಿಗಳೆಲ್ಲಾ ಕಾತರದಿಂದ ಕಾಯುತ್ತಿದ್ದಾರೆ. ಮತ್ತು ಇಸ್ರೋ ವಿಜ್ಞಾನಿಗಳ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next