ಇಸ್ಲಾಮಾಬಾದ್ : ಬಾಹ್ಯಾಕಾಶ ರಂಗದಲ್ಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ಹಿನ್ನಡೆಯಾಗಿದ್ದು ಈ ಬೆಳವಣಿಗೆಯನ್ನು ಕಂಡು ಪಾಕಿಸ್ತಾನ ಲೇವಡಿ ಮಾಡಿದೆ.
“ಯಾವ ಕೆಲಸ ಬರುವುದಿಲ್ಲವೋ ಅದನ್ನು ಕೈಗೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಡಿಯರ್ ಎಂಡಿಯಾ “ ಎಂದು ಪಾಕಿಸ್ತಾನದ ವಿಜ್ಙಾನ ಮತ್ತು ತಂತ್ರಜ್ಙಾನ ಸಚಿವ ಫವಾದ್ ಹುಸೇನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಂದ್ರಯಾನ -2 ಹಿನ್ನಡೆ ಕುರಿತು ಲೇವಡಿ ಮಾಡಿದ್ದಾರೆ.
ಇಂಡಿಯಾ ಎನ್ನುವ ಬದಲು ಎಂಡಿಯಾ ಎಂದಿರುವ ಸಚಿವ, ಚಂದ್ರನಲ್ಲಿ ಇಳಿಯಬೇಕಿದ್ದ ಆಟಿಕೆ ಮುಂಬೈ ಮೇಲೆ ಬಿದ್ದಿದೆ, 900 ಕೋಟಿ ವ್ಯರ್ಥವಾಗಿ ಹೋಗಿದೆ, ಭಾರತದ ಪ್ರಧಾನಿ ರಾಜಕಾರಣಿಯಲ್ಲ, ಗಗನಯಾನಿ ಎಂದು ಸರಣಿ ಟ್ವೀಟ್ ಗಳ ಮೂಲಕ ವ್ಯಂಗ್ಯವಾಡಿದ್ದಾರೆ .
ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ ಸಚಿವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.