Advertisement

Chandrayaan-3: ಮಹತ್ವದ ಮೈಲಿಗಲ್ಲು…ಇನ್ನೊಂದೇ ಹೆಜ್ಜೆ-ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್

03:05 PM Aug 17, 2023 | Team Udayavani |

ಬೆಂಗಳೂರು: ಚಂದ್ರಯಾನ-3ರ ಲ್ಯಾಂಡರ್‌ “ವಿಕ್ರಮ್”‌ ಅನ್ನು ಬಾಹ್ಯಾಕಾಶ ನೌಕೆಯಿಂದ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಯಶಸ್ವಿಯಾಗುವ ಮೂಲಕ ಮಹತ್ವದ ಘಟ್ಟ ತಲುಪಿರುವುದಾಗಿ ಘೋಷಿಸಿರುವ ಇಸ್ರೋ, ಇನ್ನು ಚಂದ್ರನ ಅಂಗಳಕ್ಕೆ ಆಗಸ್ಟ್‌ 23ರಂದು ಲ್ಯಾಂಡ್‌ ಆಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.

Advertisement

ಇದನ್ನೂ ಓದಿ:DK Shivakumar ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ?: ಎಚ್ ಡಿಕೆ ಪ್ರಶ್ನೆ

ಲ್ಯಾಂಡರ್‌ ಮಾಡ್ಯೂಲ್‌ (ಎಲ್‌ ಎಂ) ಅನ್ನು ಪ್ರೊಪಲ್ಶನ್‌ ಮಾಡ್ಯೂಲ್‌ ನಿಂದ ಯಶಸ್ವಿಯಾಗಿ ಬೇರ್ಪಡೆಗೊಳಿಸಲಾಗಿದೆ. ಶುಕ್ರವಾರದ ಡಿಬೂಸ್ಟಿಂಗ್‌ ಪ್ರಕ್ರಿಯೆಯಲ್ಲಿ ಲ್ಯಾಂಡರ್‌ ಮಾಡ್ಯೂಲ್‌ ಅಲ್ಪ ಪ್ರಮಾಣದಲ್ಲಿ ಕಕ್ಷೆಯಿಂದ ಕೆಳಕ್ಕಿಳಿಯಲಿದೆ ಎಂದು ಇಸ್ರೋ ಟ್ವೀಟ್‌ ನಲ್ಲಿ ವಿವರಿಸಿದೆ.

ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ 3ರ ನೌಕೆ ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು.  ಬಳಿಕ ಆಗಸ್ಟ್ 6, 9 ಮತ್ತು 14ರಂದು ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆ ಮೂಲಕ ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿತ್ತು. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ದಕ್ಷಿಣ ಧ್ರುವದಲ್ಲಿ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಇಸ್ರೋ ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next