Advertisement

ಕೇಕ್‌ನಲ್ಲಿ ಚಂದ್ರಯಾನ

08:32 PM Dec 27, 2019 | Team Udayavani |

ಚಂದ್ರನತ್ತ ಚಿಮ್ಮಲು ಉಕ್ಕಿನಿಂದ ನಿರ್ಮಿತವಾದ ರಾಕೆಟ್‌ಗಳೇ ಬೇಕು. ಆದರೆ, ಇಲ್ಲಿ ಕೇಕ್‌ನಲ್ಲೂ “ಚಂದ್ರಯಾನ-2′ ರಾಕೆಟ್‌ಗಳಾಗಿವೆ. ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಜೋಸೆಫ್ ಪ್ರೌಢಶಾಲೆಯಲ್ಲಿ ಏರ್ಪಡಿಸಿರುವ “ವಾರ್ಷಿಕ ಕೇಕ್‌ ಶೋ’ನಲ್ಲಿ ಈ ಅದ್ಭುತವನ್ನು ಕಾಣಬಹುದು. ಜನವರಿ 1ರ ವರೆಗೂ ಈ ಪ್ರದರ್ಶನ ಮೇಳ ನಡೆಯಲಿದೆ.

Advertisement

ಈ 45ನೇ ಪ್ರದರ್ಶನ ಮೇಳದಲ್ಲಿ 20ಕ್ಕೂ ಹೆಚ್ಚು ಕೇಕ್‌ನಿಂದ ರಚಿಸ ಲ್ಪಟ್ಟ ಕಲಾಕೃತಿಗಳು ಕಣ್ಮನ ಸೆಳೆಯ ಲಿವೆ. ಕರ್ನಾಟಕದ ಪ್ರವಾಸಿ ತಾಣ ಗಳು, ರಷ್ಯಾದ ಕೆಥಡ್ರೆಲ್‌ ಚರ್ಚ್‌, ಕಥಕ್ಕಳಿ ನರ್ತಕಿ ಸೇರಿದಂತೆ ಇನ್ನೂ ಹಲವು ಕೇಕ್‌ ಕಲಾಕೃತಿಗಳು ಸೆಳೆಯುತ್ತವೆ. ಇನ್ಸ್‌ಟಿಟ್ಯೂಟ್‌ ಆಫ್ ಬೇಕಿಂಗ್‌ ಆಂಡ್‌ ಕೇಕ್‌ ಆರ್ಟ್‌ ವಿದ್ಯಾಲಯದ ವಿದ್ಯಾರ್ಥಿಗಳು ಈ ಕಲಾಕೃತಿಗಳ ಸೃಷ್ಟಿಕರ್ತರು. ಇಲ್ಲಿ ಸಂತೆ ಮಾರಾಟವನ್ನೂ ಆಯೋಜಿಸಲಾಗಿದೆ.

ಎಲ್ಲಿ?: ಸಂತ ಜೋಸೆಫ್ ಪ್ರೌಢಶಾಲೆ ಮೈದಾನ, ಅಶೋಕ ನಗರ
ಯಾವಾಗ?: ಜ. 1ರ ವರೆಗೆ, ಶುಲ್ಕ: 70 ರೂ.

Advertisement

Udayavani is now on Telegram. Click here to join our channel and stay updated with the latest news.

Next