ನವದೆಹಲಿ: ವರ್ಷಾಂತ್ಯದಲ್ಲಿ ನಡೆಯಲಿರುವ ಚಂದ್ರಯಾನ-3ಕ್ಕೆ ಸಿದ್ಧತೆಗಳು ಬಿರುಸಾಗಿಯೇ ನಡೆದಿದೆ. ಚಂದ್ರಯಾನ-2ರಲ್ಲಿ ಉಂಟಾದ ಸಮಸ್ಯೆ ತಲೆದೋರಬಾರದು ಎಂಬ ಕಾರಣಕ್ಕಾಗಿ ಸ್ವದೇಶೀಯವಾಗಿ ನಿರ್ಮಿಸಲಾಗಿರುವ ಲ್ಯಾಂಡರ್ ಇಳಿಯುವ ಮೂರು ಸಂಭಾವ್ಯ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-2ರ ಸಂದರ್ಭದಲ್ಲಿ ಲ್ಯಾಂಡರ್ ಕ್ರ್ಯಾಶ್ ಲ್ಯಾಂಡಿಂಗ್ ಆದ ಹಿನ್ನೆಲೆ ಈ ಬಾರಿ ಅತ್ಯಂತ ಜಾಗರೂಕತೆಯಿಂದ ಲ್ಯಾಂಡಿಗ್ ಪ್ರದೇಶಗಳನ್ನು ಗುರುತಿಸಲಾಗಿದೆ.
ಚಂದ್ರನ ಮೇಲ್ಮೈ ನಲ್ಲಿರುವ ಕುಳಿಗಳು ಅವುಗಳ ಗಾತ್ರ, ಸೂರ್ಯನ ಕಿರಣಗಳ ಅಂತರ, ಭೂಮಿ ಜತೆಗಿನ ರೇಡಿಯೋ ಸಂವಹನದ ಸಾಧ್ಯತೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.
ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ನೀರು,ಮಂಜುಗಡ್ಡೆ ಪತ್ತೆಯಾಗುವ ಸಾಧ್ಯತೆಗಳು ಇವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈಲೈಟ್ ಏನು?
ಪ್ರಸಕ್ತ ಸಾಲಿನ ಯಾತ್ರೆಯಲ್ಲಿ ದೇಶೀಯವಾಗಿಯೇ ನಿರ್ಮಿತವಾಗಿರುವ ಲ್ಯಾಂಡರ್, ಪ್ರೊಪಲ್ಶನ್ ಮಾಡ್ಯುಲ್ ಹಾಗೂ ರೋವರ್ ಅನ್ನು ಒಳಗೊಂಡಿದೆ.