Advertisement

Chandrayaan 3: ಶಿಶಿರನ ಮೇಲಿನ ನೀರನ್ನು ಯಾಕೆ ಹುಡುಕಬೇಕು? ಅದಕ್ಕೆ ಯಾಕಿಷ್ಟು ಮಹತ್ವ?

10:53 AM Aug 23, 2023 | Team Udayavani |

ಬೆಂಗಳೂರು: ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಭಾರತದ ಚಂದ್ರಯಾನ-3 ಇಂದು ಶಿಶಿರ ಮೈಸ್ಪರ್ಷಿಸಲಿದೆ. ಚಂದ್ರಯಾನ-3 ಮುಟ್ಟಲು ಉದ್ದೇಶಿಸಿರುವುದು ಚಂದ್ರನ ದಕ್ಷಿಣ ಧ್ರುವವನ್ನು. ಕಳೆದ ಬಾರಿ, ಚಂದ್ರಯಾನ-2 ಕೂಡ ಅಲ್ಲಿಯೇ ಇಳಿಯಲು ಪ್ರಯತ್ನಿಸಿ ವಿಫ‌ಲವಾಗಿತ್ತು. ಮೊನ್ನೆ ತಾನೇ ವಿಫ‌ಲಗೊಂಡ ರಷ್ಯಾದ ನೌಕೆಯೂ ಚಂದ್ರನ ದಕ್ಷಿಣ ಧ್ರುವದತ್ತಲೇ ಸಾಗಿತ್ತು. ಹಾಗಾದರೆ ದಕ್ಷಿಣ ಧ್ರುವದಲ್ಲಿ ಏನಿದೆ ಉತ್ತರದಲ್ಲಿಲ್ಲದ್ದು?

Advertisement

ನೀರಿಗಾಗಿ ಹುಡುಕಾಟ

ಚಂದ್ರನ ದಕ್ಷಿಣ ಧ್ರುವದಲ್ಲಿ ಘನೀಭವಿಸಿದ ಸ್ಥಿತಿಯಲ್ಲಿ ನೀರು ಇದೆ. ಇದು ಇಸ್ರೋವಿನ ಚಂದ್ರಯಾನ-1ರಿಂದ ದೃಢವಾಗಿದೆ. ಇದಕ್ಕೆ ಹಿಂದೆ, 1960ರ ಸುಮಾರಿಗೇ ಅಂದರೆ, ಚಂದ್ರನ ಮೇಲೆ ಮಾನವ ಸಹಿತ ಅಪೊಲೊ ನೌಕೆ ಇಳಿಯುವ ಮುನ್ನವೇ ಚಂದ್ರನ ಮೇಲೆ ನೀರು ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದರು. ಅಪೊಲೊ ಯಾನಿಗಳು ಹೊತ್ತು ತಂದ ಶಿಲೆಗಳು ಆ ಕಾಲದಲ್ಲಿ ಈ ಬಗ್ಗೆ ಯಾವುದೇ ಸುಳಿವನ್ನು ನೀಡಿರಲಿಲ್ಲ.

ಇದನ್ನೂ ಓದಿ:Rakhi Sawant: ಆತ ನನ್ನ ನಗ್ನ ವಿಡಿಯೋಗಳನ್ನು ಸೆರೆ ಹಿಡಿದು ಮಾರುತ್ತಿದ್ದ.. ನಟಿ ರಾಖಿ ಆರೋಪ

ಆದರೆ 2008ರಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಜ್ಞಾನಿಗಳು ಈ ಶಿಲೆಗಳನ್ನು ಮರುಪರೀಕ್ಷೆಗೆ ಒಳಪಡಿಸಿದಾಗ ಅವುಗಳಲ್ಲಿ ಜಲಜನಕದ ಅಂಶ ಪತ್ತೆಯಾಯಿತು. ಮರುವರ್ಷ ಅಂದರೆ 2009ರಲ್ಲಿ ಭಾರತ ಕಳುಹಿಸಿದ್ದ ಚಂದ್ರಯಾನ-1ರಲ್ಲಿ ಅಮೆರಿಕದ ನಾಸಾ ಇರಿಸಿದ್ದ ಶೋಧ ಉಪಕರಣವು ಚಂದ್ರನಲ್ಲಿನ ನೀರಿನಂಶವನ್ನು ಖಚಿತಪಡಿಸಿತ್ತು. ಅದೇ ವರ್ಷ ನಾಸಾ ಕಳುಹಿಸಿದ್ದ ಇನ್ನೊಂದು ಚಂದ್ರನೌಕೆ ಚಂದ್ರನ ದಕ್ಷಿಣ ಧ್ರುವದ ನೆಲದ ಕೆಳಗೆ ಘನೀಕೃತ ನೀರು ಇರುವುದನ್ನು ಕಂಡುಕೊಂಡಿತ್ತು. ಇದಕ್ಕೆ ಮುನ್ನ 1998ರಲ್ಲಿ ತೆರಳಿದ್ದ ಲೂನಾರ್‌ ಪ್ರಾಸ್ಟೆಕ್ಟರ್‌ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ, ಎಂದೂ ಸೂರ್ಯನ ಕಿರಣಗಳು ಸೋಕದ ಕುಳಿಗಳಲ್ಲಿ ನೀರು ಘನೀಭವಿಸಿದ ರೂಪದಲ್ಲಿ ದಟ್ಟವಾಗಿ ಇದೆ ಎಂದಿತ್ತು.

Advertisement

ಅಲ್ಲಿ ನೀರಿಗೆ ಏಕಿಷ್ಟು ಮಹತ್ವ?

ಭೂಮಿಯಲ್ಲಿ ಸೃಷ್ಟಿಯಾದ ಅನುಕೂಲಕರ ವಾತಾವರಣದಿಂದಾಗಿ ನೀರು ಉಂಟಾಯಿತು ಎನ್ನುವುದು ಒಂದು ವಾದ. ಭೂಮಿ ರೂಪುಗೊಂಡ ಬಳಿಕ ಒಂದಾನೊಂದು ಕಾಲದಲ್ಲಿ ನೀರು ಹೊಂದಿದ್ದ ಇನ್ನೊಂದು ಆಕಾಶಕಾಯ ಭೂಮಿಗೆ ಅಪ್ಪಳಿಸಿದ ಬಳಿಕ ಭೂಮಿಯಲ್ಲಿ ನೀರು ಬಂತು ಎಂಬುದು ಇನ್ನೊಂದು ವಾದ. ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ ನೀರಿನಂಶವನ್ನು ಅಧ್ಯಯನ ಮಾಡುವುದರಿಂದ ಚಂದ್ರನಲ್ಲಿ ಜ್ವಾಲಾಮುಖಿಗಳು ಇದ್ದವೇ, ನೀರಿನಂಶ ಬಂದದ್ದು ಎಲ್ಲಿಂದ- ಹೇಗೆ, ಭೂಮಿಗೆ ಅಪ್ಪಳಿಸಿದ ಕ್ಷುದ್ರ ಗ್ರಹ, ಆಕಾಶ ಕಾಯಗಳು ಹೊತ್ತು ತಂದ ಅಂಶಗಳು ಯಾವುವು ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯಲು ಸಾಧ್ಯ. ಚಂದ್ರನ ಘನೀಕೃತ ನೀರನ್ನು ರಾಸಾಯನಿಕವಾಗಿ ವಿಭಜಿಸುವುದು ಸಾಧ್ಯವಾದರೆ ಮುಂದೆ ಆ ಜಲಜನಕ ಮತ್ತು ಆಮ್ಲಜನಕಗಳನ್ನು ಚಂದ್ರನಲ್ಲಿ ಗಣಿಗಾರಿಕೆ, ಮಂಗಳಯಾನಕ್ಕೆ ಇಂಧನವಾಗಿ, ಚಂದ್ರಯಾನಿಗಳ ಉಸಿರಾಟಕ್ಕೆ ಬಳಸುವ ದೂರದೃಷ್ಟಿಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next