ಚಂದ್ರಯಾನ-2ರ ಮಾದರಿಯಲ್ಲಿಯೇ ಚಂದ್ರಯಾನ-3ನ್ನು ಈ ವರ್ಷ ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧರಿಸಿದೆ. ಈಗಿನ ಯೋಜನೆ ಯಂತೆ ಈ ವರ್ಷದ ಆದಿಯಲ್ಲಿ ಚಂದ್ರಯಾನ -3 ಯೋಜನೆ ಕಾರ್ಯಗತಗೊಳ್ಳಲಿದೆ. ಈ ಬಾರಿ ಚಂದ್ರಯಾನ-2ರಂತೆ ಗಗನ ನೌಕೆಯು ಆರ್ಬಿಟರ್ ಅನ್ನು ಹೊಂದಿರುವುದಿಲ್ಲ. ಲ್ಯಾಂಡರ್ ಮತ್ತು ರೋವರ್‌ಗಳನ್ನು ಒಳಗೊಂಡ ಬಾಹ್ಯಾಕಾಶ ನೌಕೆ ಚಂದ್ರನತ್ತ ಹಾರಲಿದೆ.
2019ರ ಸೆಪ್ಟಂಬರ್‌ತಿಂಗಳಿ ನಲ್ಲಿ ಚಂದ್ರಯಾನ-2
ಯೋಜನೆ ಸಾಕಾರಗೊಂಡಿ ತ್ತಾದರೂ ಅದರ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಆದ್ದರಿಂದ 2020ರ ಅಂತ್ಯದ ವೇಳೆಗೆ ಚಂದ್ರಯಾನ-3 ಉಪಗ್ರಹ ಉಡ್ಡಯನ ಮಾಡುವ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಪ್ರಕಟಿಸಿತ್ತು.
ಇಸ್ರೋದ ಮೊದಲ ಚಂದ್ರಯಾನ ಯೋಜನೆ ಶಶಿಯ ಅಂಗಳ ದಲ್ಲಿ ನೀರಿನ ಅಂಶವಿರುವುದನ್ನು ಪತ್ತೆಹಚ್ಚಿತ್ತು. ಚಂದ್ರಯಾನ-2 ಗಗನ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದಿದ್ದರೂ ಆರ್ಬಿ ಟರ್ ಈಗಲೂ ಕಾರ್ಯನಿರ್ವಹಿಸುತ್ತಿರುವುದರಿಂದ ಚಂದ್ರನ ಅಂಗ ಳದ ಬಗೆಗೆ ಕೆಲವೊಂದು ಮಹತ್ವದ ಮಾಹಿತಿಗಳನ್ನು ಕಲೆಹಾಕಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ ಇಸ್ರೋ ಚಂದ್ರಯಾನ-3 ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದು ಜಗತ್ತಿನ ಬಾಹ್ಯಾಕಾಶ ವಿಜ್ಞಾನಿಗಳೆಲ್ಲರ ದೃಷ್ಟಿ ಭಾರತದತ್ತ ನೆಟ್ಟಿದೆ.
ಮಾನವ ಸಹಿತ ಗಗನಯಾನ
ಭಾರತದ ಮೊತ್ತಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ತಯಾರಿ ಜೋರಾಗಿ ನಡೆಯುತ್ತಿದೆ. ಗಗನಯಾನ ಕೈಗೊಳ್ಳಲಿರುವ ಗಗನಯಾತ್ರಿಗಳ ತರಬೇತಿ ಕಾರ್ಯಗಳು ಚಾಲನೆ ಯಲ್ಲಿವೆ. ಕೋವಿಡ್ ಕಾರಣದಿಂದ ತುಸು ಹಿನ್ನಡೆಯಾದರೂ 2021ರ ಅಂತ್ಯದ ವೇಳೆಗೆ ಮಾನವಸಹಿತ ಗಗನ ಯಾನ ಲಾಂಚ್ ಆಗುವ ನಿರೀಕ್ಷೆ ಇದೆ.
ದೇಶದ ಮೊತ್ತಮೊದಲ ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ಮೂವರು ಭಾರತೀಯ ರನ್ನು ಆಯ್ಕೆ ಮಾಡಲಾಗುತ್ತದೆ. ಈ ಯಾನಿಗಳು 5-7 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಲಿದ್ದಾರೆ. ಈ ಮೂಲಕ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ಅಮೆರಿಕ, ರಷ್ಯಾ ಮತ್ತು ಚೀನ ಅನಂತರದ 4ನೇ ಸ್ಥಾನವನ್ನು ಭಾರತ ತನ್ನ ಮುಡಿಗೇರಿಸಿಕೊಳ್ಳಲಿದೆ. ಉಡ್ಡಯನವಾದ 16 ನಿಮಿಷ ಗಳಲ್ಲಿ ಮಾನವ ಸಹಿತ ಗಗನನೌಕೆಯು ಕಕ್ಷೆಯನ್ನು ಸೇರಿಕೊಳ್ಳಲಿದೆ. ಇದಾದ 5-7 ದಿನಗಳ ಬಳಿಕ ಲ್ಯಾಂಡ್ ಆಗಲಿದೆ. ಆಗಸದಿಂದ ಭೂಮಿಗೆ ಕೇವಲ 36 ನಿಮಿಷ ಗಳಲ್ಲಿ ನೌಕೆ ವಾಪಸಾಗಲಿದೆ. ಈ ಯಾನಕ್ಕಾಗಿ ಯಾನಿಗಳಿಗೆ ತರಬೇತಿ ನೀಡಲಾಗುತ್ತದೆ.