Advertisement

Chandrayaan-3; ಚಂದ್ರನ ಕಕ್ಷೆ ಪ್ರವೇಶ: ಇತಿಹಾಸ ನಿರ್ಮಿಸಲು ಇನ್ನೊಂದು ಹೆಜ್ಜೆ ಹತ್ತಿರ

08:32 PM Aug 05, 2023 | Team Udayavani |

ಹೊಸದಿಲ್ಲಿ: ಮಹತ್ವಾಕಾಂಕ್ಷೆಯ ಭಾರತದ ”ಚಂದ್ರಯಾನ-3” ಚಂದ್ರನತ್ತ ಪ್ರಯಾಣ ಆರಂಭಿಸಿರುವ ಬಾಹ್ಯಾಕಾಶ ನೌಕೆ ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.

Advertisement

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಕಕ್ಷೆಯ ಪ್ರವೇಶವನ್ನು (LOI) ಸುಮಾರು ರಾತ್ರಿ 7 ಗಂಟೆಗೆ ( IST) ನಡೆಸಲಾಯಿತು ಎಂದು ತಿಳಿಸಿದೆ. ಬಾಹ್ಯಾಕಾಶ ನೌಕೆಯನ್ನು ಸ್ಥಿರ ಚಂದ್ರನ ಕಕ್ಷೆಗೆ ಸೇರ್ಪಡೆಗೋಳಿಸಲಾಗಿದೆ.

ಜು.14ರಂದು ಚಂದ್ರಯಾನ-3 ನೌಕೆಯು ನಭಕ್ಕೆ ಚಿಮ್ಮಿತ್ತು. ಅದಾದ ಅನಂತರ 3 ವಾರಗಳಲ್ಲಿ ಒಟ್ಟು 5 ಬಾರಿ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆದಿದೆ. ಶನಿವಾರ ಕೆಮಿಕಲ್‌ ರಾಕೆಟ್‌ ಎಂಜಿನ್‌ ಮೂಲಕ ಬಾಹ್ಯಾಕಾಶ ನೌಕೆಯ ವೇಗ ವರ್ಧಿಸಲಾಗಿದೆ. ವೇಗವು ಹೆಚ್ಚಾದಂತೆ ನೌಕೆಯ ಕಕ್ಷೆಯು ಭೂಮಿಯ ಕೆಳ ವೃತ್ತಾಕಾರ ಕಕ್ಷೆಯಿಂದ ಭಿನ್ನಕೇಂದ್ರೀಯ ಕಕ್ಷೆಗೆ ಬದಲಾಗುತ್ತಾ, ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ಅನಂತರದಲ್ಲೂ ಹಲವು ಪ್ರಕ್ರಿಯೆಗಳು ನಡೆಯಲಿದ್ದು, ಆ.23ರಂದು ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್‌ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next