Advertisement

ಯುವಕರಲ್ಲಿ ವೈಜ್ಞಾನಿಕ ಕುತೂಹಲ ಹುಟ್ಟುಹಾಕಿದ ‘ಚಂದ್ರಯಾನ 2’

09:48 AM Nov 06, 2019 | Team Udayavani |

ಕೋಲ್ಕತಾ: ‘ಚಂದ್ರಯಾನ-2’ ಯೋಜನೆ ಒಂದು ಯಶಸ್ವಿ ವೈಜ್ಞಾನಿಕ ಕಾರ್ಯಾಚರಣೆಯಾಗಿದ್ದು, ಈ ಯೋಜನೆ ಭಾರತೀಯ ಯುವ ಜನತೆಯಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಯನ್ನು ಹುಟ್ಟುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

Advertisement

ಕೋಲ್ಕತಾದಲ್ಲಿ ಮಂಗಳವಾರದಿಂದ ಆರಂಭಗೊಂಡ ‘ಇಂಡಿಯಾ ಇಂಟರ್‌ನ್ಯಾಷನಲ್‌ ಸೈನ್ಸ್‌ ಫೆಸ್ಟಿವಲ್‌’ನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ಮಾತನಾಡಿದರು. ‘ಚಂದ್ರಯಾನ-2 ಯೋಜನೆಗಾಗಿ ನಮ್ಮ ವಿಜ್ಞಾನಿಗಳು ಕಷ್ಟಪಟ್ಟು ದುಡಿದರು. ಯೋಜನೆಯ ಒಂದು ಹೆಜ್ಜೆಯನ್ನು ಅಂದುಕೊಂಡಂತೆ ಇಡಲಾಗಿಲ್ಲ, ನಿಜ. ಆದರೆ, ವಿಶಾಲ ದೃಷ್ಟಿಯಿಂದ ಹೇಳುವುದಾದರೆ, ಅದೊಂದು ಯಶಸ್ವಿ ಯೋಜನೆಯಾಗಿದ್ದು, ಭಾರತದ ವೈಜ್ಞಾನಿಕ ಸಾಧನೆಗಳಲ್ಲಿ ಅದೂ ಒಂದು” ಎಂದು ಮೋದಿ ತಿಳಿಸಿದರು.

ವೈಜ್ಞಾನಿಕ ಸಂಶೋಧನೆಗಳ ನಿಖರವಾದ ಫ‌ಲ ಸಿಗಬೇಕೆಂದರೆ ದೀರ್ಘ‌ಕಾಲದವರೆಗೆ ಕಾಯಬೇಕು ಎಂದ ಅವರು, ‘ಯಾವುದೇ ಸಂಶೋಧನೆಯ ಫ‌ಲ 2 ನಿಮಿಷದಲ್ಲಿ ನೂಡಲ್ಸ್‌ ತಯಾರಿಸಿದ ಹಾಗೆ ಸಿಗುವುದಿಲ್ಲ ಅಥವಾ ಪಿಜ್ಜಾ ಅಂಗಡಿಗೆ ಹೋಗಿ ಪಿಜ್ಜಾ ಖರೀದಿಸಿದಂತೆಯೂ ಅಲ್ಲ ಎಂದ ಅವರು, ವಿಜ್ಞಾನದಲ್ಲಿ ಕೇವಲ ಪ್ರಯತ್ನಗಳು ಮಾತ್ರ ಇರುತ್ತವಷ್ಟೆ. ವೈಫ‌ಲ್ಯಗಳು ಇರುವುದಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next