Advertisement
ಶುಕ್ರವಾರ ತಡರಾತ್ರಿ 1.30ರಿಂದ 2-30ರ ವೇಳಗೆ ಚಂದ್ರಯಾನ-2 ನೌಕೆ ಚಂದ್ರನ ನೆಲಕ್ಕೆ ಇಳಿಯಲಿದೆ. ಚಂದ್ರಯಾನ-2 ನೌಕೆಯಿಂದ ಪ್ರತ್ಯೇಕಗೊಳ್ಳಲಿರುವ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಸ್ಪರ್ಶಿಸಲಿದೆ.
Related Articles
Advertisement
ವಿಕ್ರಮ್ ಲ್ಯಾಂಡರ್ ಗೆ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹಾ ವಿಜ್ಞಾನಿ ಡಾ.ವಿಕ್ರಮ್ ಎ.ಸಾರಾಭಾಯಿ ಅವರ ಹೆಸರನ್ನೇ ಇಡಲಾಗಿದೆ. ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ 70ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿನ ಎರಡು ಕುಳಿಗಳ ನಡುವೆ ಇಳಿಯಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22ರಂದು ನಭಕ್ಕೆ ಚಿಮ್ಮಿದ್ದ ಚಂದ್ರಯಾನ 2 ಬಾಹ್ಯಾಕಾಶ ನೌಕೆ ಪ್ರಯಾಣ ಆರಂಭಿಸಿತ್ತು. ವಿಕ್ರಮ್ ಲ್ಯಾಂಡರ್ ತೂಕ 1,471 ಕೆಜಿ, ರೋವರ್ ತೂಕ 27ಕೆಜಿ ತೂಕ ಹೊಂದಿದೆ. ಭೂಮಿಯಿಂದ ಚಂದ್ರನವರೆಗೆ ಲ್ಯಾಂಡರ್ ಪ್ರಯಾಣದ ಅವಧಿ 47 ದಿನ.
ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ 2 ಉಪಕರಣಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಯಶಸ್ವಿಯಾಗಿ ಉಡ್ಡಯನವಾಗಿತ್ತು. ಇದೀಗ ಚಂದ್ರನ ಅಂಗಳದ ಸಮೀಪದಲ್ಲಿರುವ ವಿಕ್ರಮ್ ಶುಕ್ರವಾರ ನಸುಕಿನ 1.30ರಿಂದ 2.30ರ ವೇಳೆಗೆ ಚಂದ್ರನ ಮೇಲೆ ಇಳಿಯಲಿದೆ. ವಿಕ್ರಮ್ ಹೇಗೆ ಚಂದ್ರನ ಅಂಗಳದ ಮೇಲೆ ಇಳಿಯಲಿದೆ ಎಂಬುದನ್ನು ವಿವರಿಸುವ ವೀಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ.