ಬೆಂಗಳೂರು: ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ -2 ಯೋಜನೆಯ ಮಹತ್ವದ ಘಟ್ಟ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ನೌಕೆಯನ್ನು ಹೊತ್ತ ರಾಕೆಟ್ ಅನ್ನು ಭೂ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಎತ್ತರಿಸುವ ಕಾರ್ಯವನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ಇಸ್ರೋದ ನಿಯಂತ್ರಣ ಕೊಠಡಿಯಿಂದ ಈ ಕಕ್ಷೆ ಎತ್ತರಿಸುವಿಕೆ ಕಾರ್ಯವನ್ನು ಆಗಸ್ಟ್ 14ರ 02.21 ಗಂಟೆಗೆ ಯಶಸ್ವಿಯಾಗಿ ಮಾಡಲಾಯಿತು ಎಂದು ಇಸ್ರೋ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿರುವ ಇಸ್ರೋದ ನಿಯಂತ್ರಣ ಕೊಠಡಿಯಿಂದ ಈ ಕಕ್ಷೆ ಎತ್ತರಿಸುವಿಕೆ ಕಾರ್ಯವನ್ನು ಆಗಸ್ಟ್ 14ರ 02.21 ಗಂಟೆಗೆ ಯಶಸ್ವಿಯಾಗಿ ಮಾಡಲಾಯಿತು ಎಂದು ಇಸ್ರೋ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಈ ಕಕ್ಷೆ ಎತ್ತರಿಸುವಿಕೆ ಸಂದರ್ಭದಲ್ಲಿ ನೌಕೆಯಲ್ಲಿದ್ದ ದ್ರವ ಇಂಧನವನ್ನು ಸುಮಾರು 1203 ಸೆಕೆಂಡುಗಳವರೆಗೆ ಅಂದರೆ 20 ಗಂಟೆಗಳವರೆಗೆ ಉರಿಸಲಾಯಿತು. ಇದರೊಂದಿಗೆ ಚಂದ್ರಯಾನ ನೌಕೆಯು ಇದೀಗ ಸರಿಯಾದ ಪಥದಲ್ಲೇ ಚಂದ್ರನ ಕಕ್ಷೆಯತ್ತ ಸಾಗುತ್ತಿದೆ.
ಚಂದ್ರಯಾನ ನೌಕೆ ಯಶಸ್ವಿಯಾಗಿ ಉಡ್ಡಯನಗೊಂಡ ಬಳಿಕ ಜುಲೈ 23ರಿಂದ ಆಗಸ್ಟ್ 6ರವರೆಗೆ ಒಟ್ಟಾರೆಯಾಗಿ ಐದು ಬಾರಿ ಚಂದ್ರಯಾನ ನೌಕೆಯ ಕಕ್ಷೆಯನ್ನು ಎತ್ತರಿಸಲಾಗಿದೆ.