Advertisement
ಅಯಸ್ಕಾಂತೀಯ ಗೋಳದ ಮೇಲೆ ಆರ್ಬಿಟರ್ ಹಾದು ಹೋಗುವಾಗ ಚಂದ್ರನ ಮೇಲಿನ ಕಣಗಳ ಸಾಂದ್ರತೆಯಲ್ಲಿ ವ್ಯತ್ಯಾಸವಾಗುತ್ತದೆ. ಗಾಳಿಯು ಈ ಕಣಗಳನ್ನು ಅಸಮಾನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ ಹಾಗೂ ಇದಕ್ಕೆ ಅಯಸ್ಕಾಂತೀಯ ಕ್ಷೇತ್ರವೂ ಪ್ರಭಾವ ಬೀರುತ್ತದೆ ಎಂದು ಬೆಂಗಳೂರಿನ ಐಐಎಸ್‌ಸಿ ಫಿಸಿಕ್ಸ್ ಸಹಾಯಕ ಪ್ರೊಫೆಸರ್ ನಿರುಪಮ್ ರಾಯ್ ಹೇಳಿದ್ದಾರೆ. ಚಂದ್ರನ ಮೇಲಿನ ವಾತಾವರಣದ ಸಂಪೂರ್ಣ ಚಿತ್ರಣವನ್ನು ಆರ್ಬಿಟರ್‌ನಿಂದ ಅಳೆಯಲು ಸಾಧ್ಯವಿಲ್ಲವಾದರೂ, ವಾತಾವರಣದಲ್ಲಿ ಇರುವ ಕೆಲವು ಅಂಶಗಳ ಮಾಹಿತಿಯನ್ನು ನಮಗೆ ಕೊಡಲು ಶಕ್ತವಾಗಿದೆ. ಆದರೆ ಚಂದ್ರನ ವಾತಾವರಣದಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆಯಾಗುವುದರಿಂದ ಈ ಮಾಹಿತಿಯ ನಿಖರತೆ ಅಳೆಯುವುದು ಕಷ್ಟಕರ. ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿದ್ದಾಗ ಈ ಎಲೆಕ್ಟ್ರಾನ್‌ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ನಡೆಸಬೇಕಿದೆ ಎಂದಿದ್ದಾರೆ. Advertisement
ಚಂದ್ರನಲ್ಲಿ ಎಲೆಕ್ಟ್ರಾನ್ ನೃತ್ಯ!
11:21 PM Oct 04, 2019 | mahesh |
Advertisement
Udayavani is now on Telegram. Click here to join our channel and stay updated with the latest news.