Advertisement

22ಕ್ಕೆ ಚಂದ್ರಯಾನ-2

03:12 PM Jul 20, 2019 | mahesh |

ಹೊಸದಿಲ್ಲಿ: ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ “ಚಂದ್ರಯಾನ-2′ ಯೋಜನೆಯ ರಾಕೆಟ್‌ ಉಡಾವಣೆ ಇದೇ ತಿಂಗಳ 22ರಂದು ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿದೆ. ಜು. 22ರ ಅಪರಾಹ್ನ 2.43ರ ಸುಮಾರಿಗೆ ಉಡಾವಣೆ ನಡೆಸಲಾಗುವುದು ಎಂದು ಸಂಸ್ಥೆ ಟ್ವೀಟ್‌ ಮಾಡಿದೆ.

Advertisement

ಈ ಮೊದಲು ಜು. 14ರ ಮಧ್ಯರಾತ್ರಿ 2.51ಕ್ಕೆ ಉಡಾವಣೆಯಾಗಬೇಕಿದ್ದ “ಜಿಎಸ್‌ಎಲ್‌ವಿ ಎಂ.ಕೆ-3′ ರಾಕೆಟ್‌ನಲ್ಲಿ ಉಡಾವಣೆಗೆ 56 ನಿಮಿಷಗಳಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಇದೇ ತಿಂಗಳಿಗೆ ಆದ್ಯತೆ
ಜು.31ರೊಳಗೆ ಚಂದ್ರ ಯಾನ-2 ಅನ್ನು ಅನುಷ್ಠಾನ ಗೊಳಿಸ ಬೇಕು ಎಂದು ಇಸ್ರೋ ನಿರ್ಧ ರಿ ಸಿದೆ ಎಂದು ಆ ಸಂಸ್ಥೆಯ ಹಿರಿಯ ವಿಜ್ಞಾನಿ ಯೊಬ್ಬರು ಹೇಳಿದ್ದಾರೆ. ಭೂಮಿಯ ಗುರುತ್ವಾ ಕರ್ಷಣ ಶಕ್ತಿ, ಚಂದ್ರನು ಭೂಮಿಗೆ ಹತ್ತಿರಕ್ಕೆ ಸರಿದು ಬಂದಿರು ವಂಥ ಸನ್ನಿವೇಶ ಮುಂತಾದ ಹಲವಾರು ವಿಚಾರ ಗಳನ್ನು ಲೆಕ್ಕ ಹಾಕಿಯೇ ಈ ಯೋಜನೆ ಅನುಷ್ಠಾನ ಗೊಳಿಸ ಬೇಕು. ಹಾಗಾಗಿ ಈ ತಿಂಗಳು ಸಾಧ್ಯ ವಾಗ ದಿದ್ದರೆ ಈ ಯೋಜನೆಯ ಅನುಷ್ಠಾನ ಸಾಧ್ಯ ವಾಗುವುದು ಸೆಪ್ಟಂಬರ್‌ನಲ್ಲಿಯೇ. ಅದು ಬಿಟ್ಟರೆ ಇನ್ನು ಮುಂದಿನ ವರ್ಷವೇ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದಿದ್ದಾರೆ.

ಯಾವಾಗೆಂದರೆ ಅವಾಗ ಯೋಜನೆ ಉಡಾವಣೆಗೊಳಿಸಿದರೆ ರಾಕೆಟ್‌ನಲ್ಲಿನ ಪರಿಕರಗಳು ನಿಗದಿತ ಅವಧಿ ಯ ವರೆಗೆ ಕೆಲಸ ಮಾಡುವುದಿಲ್ಲ. ಉದಾಹರಣೆಗೆ, ಚಂದ್ರನ ಸುತ್ತಬೇಕಾದ ಆರ್ಬಿಟರ್‌ ಈಗ ನಿಗದಿ ಗೊಳಿಸಲಿರುವ 1 ವರ್ಷದ ಅವಧಿಗೆ ಬದಲಾಗಿ ಕೇವಲ 6 ತಿಂಗಳಷ್ಟೇ ಕಾರ್ಯಾಚರಣೆ ನಡೆಸಬಹುದು. ಹಾಗೊಂದು ವೇಳೆ ಯೋಜನೆ ಪುನಃ ಮುಂದೂಡಲ್ಪಟ್ಟರೆ ಯೋಜನೆಯನ್ನೇ ಮತ್ತೂಮ್ಮೆ ಪರಿಷ್ಕರಿಸಬೇಕಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next