Advertisement

ಚಂದ್ರಯಾನ – 2 ಕಕ್ಷೆ ಬದಲಾಯಿಸುವ ನಾಲ್ಕನೇ ಕಾರ್ಯ ಯಶಸ್ವಿ

10:00 AM Sep 01, 2019 | Sriram |

ಬೆಂಗಳೂರು: ಚಂದ್ರಯಾನ -2 ರ ಕಕ್ಷೆ ತಗ್ಗಿಸುವ ಕಾರ್ಯ ಯಶಸ್ವಿಯಾಗಿ ಶುಕ್ರವಾರ ನಡೆದಿದ್ದು, ಚಂದ್ರನಿಗೆ ನೌಕೆ ಇನ್ನೂ ಒಂದು ಸುತ್ತು ಹತ್ತಿರವಾಗಿದೆ. ರವಿವಾರ ಕೊನೆಯ ಹಂತದಲ್ಲಿ ಕಕ್ಷೆ ಸುತ್ತುವ ಕಾರ್ಯ ನಡೆಯಲಿದ್ದು, ಚಂದ್ರನಲ್ಲಿ ಇಳಿಯುವ ಕಾರ್ಯಕ್ಕೆ ಅಣಿಯಾಗಿದೆ.

Advertisement

ಮುಂದೇನು?
ಸೆ.1: ರವಿವಾರ ಮುಸ್ಸಂಜೆ 6ರಿಂದ 7 ಗಂಟೆ ಹೊತ್ತಿನಲ್ಲಿ ಕೊನೆಯ ಹಂತದ ಕಕ್ಷೆ ಇಳಿಸುವ ಕಾರ್ಯ ನಡೆಯಲಿದೆ. ಈ ವೇಳೆ ಚಂದ್ರನ ಅತಿ ಸನಿಹಕ್ಕೆ ನೌಕೆ ಹೋಗಲಿದ್ದು, ಗಂಟೆಗೆ 124 ಕಿ.ಮೀ. ವೇಗದಲ್ಲಿ ಅದು ಸುತ್ತಲಿದೆ. ಅಲ್ಲದೇ ಚಂದ್ರನಿಂದ ಸುಮಾರು 164 ಕಿ.ಮೀ. ದೂರದಲ್ಲಿ ನೌಕೆ ಇರಲಿದೆ.

ಸೆ.2: ಚಂದ್ರನ ಸುತ್ತುವ ನೌಕೆಯಿಂದ ಲ್ಯಾಂಡರ್‌ ಬೇರ್ಪಡಲಿದೆ. ಅಲ್ಲದೇ ಚಂದ್ರನ ಸನಿಹಕ್ಕೆ ಅಂದರೆ ಸುಮಾರು 100 ಕಿ.ಮೀಯಷ್ಟು ದೂರದಲ್ಲಿ ಇರಲಿದ್ದು, ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳಲಿದೆ.

ಸೆ.7: ಚಂದ್ರನ ಮೇಲೆ ಇಳಿಯುವ ಲ್ಯಾಂಡರ್‌ (ತನ್ನೊಳಗೆ ಚಲಿಸುವ 6 ಚಕ್ರದ ಯಂತ್ರ – ರೋವರ್‌ ಕೂಡ ಹೊಂದಿದೆ) ಚಂದ್ರನ ಮೇಲೆ ನಿಧಾನವಾಗಿ ಇಳಿಯುವ ಯತ್ನ ಮಾಡಲಿದೆ. ಇಸ್ರೋದ ಇತಿಹಾಸದಲ್ಲೇ ಈ ಕ್ರಿಯೆ ಮೊದಲ ಬಾರಿಗೆ ನಡೆಯಲಿದೆ. ಚಂದ್ರನ ದಕ್ಷಿಣ ಧ್ರುವದ ಅತಿ ಶೀತ ಪ್ರದೇಶದಲ್ಲಿ ಲ್ಯಾಂಡರ್‌ ಇಳಿಯಲಿದೆ. ಈ ಕ್ರಿಯೆ ಅತ್ಯಂತ ಸಂಕೀರ್ಣದ್ದಾಗಿದ್ದು, ಇಡೀ ಜಗತ್ತೇ ಇದನ್ನು ಎದುರು ನೋಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next