ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿ ಕೆರೆಯ ಸಮೀಪದ ಬಾವಿಯಲ್ಲಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಲಕ್ಷಾಂತರ ಜನ ಸೇರುವ ಶೋಭಾಯಾತ್ರೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಹಿಂದೂ ಮಹಾಗಣಪತಿ ಮೆರವಣಿಗೆ ಈ ವರ್ಷ ಸರಳವಾಗಿ ಮಾಡುವ ಲೆಕ್ಕಾಚಾರ ನಡೆದಿತ್ತು.
ಆದರೆ, ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಸಾಗರೋಪಾದಿಯಲ್ಲಿ ಸೇರಿದ ಅಪಾರ ಜನಸ್ಥೋಮದ ನಡುವೆ ಹಿಂದೂ ಮಹಾಗಣಪತಿ ವಿರಾಜಮಾನರಾಗಿ ಮೆರವಣಿಗೆಯಲ್ಲಿ ಸಾಗಿದರು.
ಇದನ್ನೂ ಓದಿ:ರೈತರ ಕಷ್ಟ ಕೇಳದ ಪ್ರಧಾನಿ ಮೋದಿ: ಡಿ.ಕೆ.ಶಿವಕುಮಾರ್
ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಈ ವರ್ಷ ಡಿಜೆಗಳ ಅಬ್ಬರ ಇಲ್ಲದಿದ್ದರೂ ಬರೋಬ್ಬರಿ ಐದು ಕಿ.ಮೀ ಉದ್ದದ ಮಾರ್ಗದಲ್ಲಿ ನಿರಂತರ ಹತ್ತು ಗಂಟೆಗಳ ಅವಧಿಯ ಮೆರವಣಿಗೆಯಲ್ಲಿ ಸಾಗಿಬಂದು ಚಂದ್ರವಳ್ಳಿ ಬಳಿ ಬಾವಿಯಲ್ಲಿ ವಿಸರ್ಜಿಸಲಾಯಿತು. ಈ ವೇಳೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ, ವಿಎಚ್‌ಪಿ, ಬಜರಂಗದಳ, ಸಂಘ ಪರಿವಾರ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾತ್ರಿ ಹತ್ತೂವರೆ ವರೆಗೆ ಸ್ಥಳದಲ್ಲಿ ಜಮಾಯಿಸಿದ್ದರು.