Advertisement

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ.ಚಂದ್ರಶೇಖರ ಕಂಬಾರ ಆಯ್ಕೆ

03:06 PM Feb 12, 2018 | Team Udayavani |

ನವದೆಹಲಿ:ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಸೋಮವಾರ ಆಯ್ಕೆಯಾಗಿದ್ದಾರೆ.

Advertisement

ನವದೆಹಲಿಯಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷೀಯ ಚುನಾವಣೆಯಲ್ಲಿ 89 ಮತಗಳು ಚಲಾವಣೆಯಾಗಿದ್ದು, ಕಂಬಾರರು 56 ಮತಗಳನ್ನು ಗಳಿಸುವ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದಾರೆ.

ಉಪಾಧ್ಯಕ್ಷರಾಗಿ ಮಾಧವ ಕೌಶಿಕ್ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಅವಧಿ 5 ವರ್ಷಗಳದ್ದಾಗಿದೆ.

ಒರಿಯಾ ಸಾಹಿತಿ ಪ್ರತಿಭಾ ರಾಯ್ ಅವರು 29 ಮತ ಪಡೆದಿದ್ದರೆ, ಮಹಾರಾಷ್ಟ್ರದ ಸಾಹಿತಿ ಬಾಲಚಂದ್ರ ನೆಮಾಡೆ ಅವರಿಗೆ ಕೇವಲ 4 ಮತ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next