ಚಿಂಚೋಳಿ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಚಂದ್ರಶೇಖರಯ್ಯ ರೇವಣಸಿದ್ದಯ್ಯ ಕಂಬದ ಗಡಿಕೇಶ್ವಾರ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ರೇವಣಸಿದ್ದಪ್ಪ ಮಲ್ಲಪ್ಪ ಪೂಜಾರಿ ಅಣವಾರ ವಿಜಯಶಾಲಿಯಾಗಿದ್ದಾರೆ.
ಪಟ್ಟಣದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಚಂದ್ರಶೇಖರಯ್ಯ ರೇವಣಸಿದ್ದಯ್ಯ ಕಂಬದ ಗಡಿಕೇಶ್ವಾರ ಮತ್ತು ಬಿಜೆಪಿ ಬೆಂಬಲಿತ ಸದಸ್ಯರಾದ ಗುಂಡಪ್ಪ ಬಸವಣ್ಣಪ್ಪ ಪೋಲಕಪಳ್ಳಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದ ಚಂದ್ರಶೇಖರಯ್ಯ ಕಂಬದ ಅವರಿಗೆ 10 ಮತ, ಬಿಜೆಪಿ ಬೆಂಬಲಿತ ಗುಂಡಪ್ಪ ಪೋಲಕಪಳ್ಳಿ ಅವರಿಗೆ ಕೇವಲ ಆರು ಮತಗಳು ಬಿದ್ದವು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ರೇವಣಸಿದ್ದಪ್ಪ ಮಲ್ಲಪ್ಪ ಪೂಜಾರಿ ಅಣವಾರ ಮತ್ತು ಬಿಜೆಪಿ ಬೆಂಬಲಿತ ಸದಸ್ಯ ಅಣ್ಣಾರಾವ ಶಂಕರೆಪ್ಪ ಪೆದ್ದಿ ಕೋಡ್ಲಿ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ರೇವಣಸಿದ್ದಪ್ಪ ಪೂಜಾರಿ 10 ಮತ ಪಡೆದರೆ, ಕೋಡ್ಲಿ ಅಣ್ಣಾರಾವ್ ಪೆದ್ದಿ ಕೇವಲ ಆರು ಮತಗಳನ್ನು ಪಡೆದು ಸೋತರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಧಿಕಾರಿ ತಹಶೀಲ್ದಾರ ಪ್ರಕಾಶ ಕುದುರೆ ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕ ಜಿ. ಮಾಧವಚಾರ್ಯ , ಕಾರ್ಯದರ್ಶಿ ವåಹಾದೇವಿ ಪಾಟೀಲ, ಸಿಬ್ಬಂದಿ ಮಲ್ಲಿಕಾರ್ಜುನ ಪಾಲಾಮೂರ, ಬಸವರಾಜ ಚಿಮ್ಮಾಇದಲಾಯಿ, ಖಾಲೀದ ಅಹ್ಮದ್ ಇದ್ದರು.
ನಂತರ ಆಚರಿಸಲಾದ ವಿಜಯೋತ್ಸವದಲ್ಲಿ ಶಾಸಕ ಡಾ| ಉಮೇಶ ಜಾಧವ್, ಎಪಿಎಂಸಿ ನಿರ್ದೇಶಕ ಅಜೀತ ಬಾಬುರಾವ ಪಾಟೀಲ, ಅಶಾಧಿಕ ಹುಸೇನ್, ತಾಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ ಹುಸೇನ ನಾಯಕೋಡಿ, ಶ್ರೀದೇವಿ ದೇಸಾಯಿ, ಚೆಂಗು ದಳಪತಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಜಮಾದಾರ, ರೇವಣಸಿದ್ದಪ್ಪ ಅಣಕಲ್, ಲಕ್ಷ್ಮಣ ಆವಂಟಿ ಪಾಲ್ಗೊಂಡಿದ್ದರು.