Advertisement

ಪದಗಳನ್ನೂ ಮೀರಿದ “ಅರಿವು ಅಕ್ಷರದಾಚೆ’

09:48 PM Jun 11, 2019 | mahesh |

ಅರಿವು ಅಕ್ಷರದಾಚೆ ಚಂದ್ರಶೇಖರ ವಸ್ತ್ರದ ಅವರ ಕವನ ಸಂಕಲನ. ಇದರಲ್ಲಿ ನಾಲ್ಕು ಸಾಲುಗಳುಳ್ಳ ವಚನ ಚೌಪದಿಯಿದೆ. ಶಬ್ದ ಗೋಚರ ಚಿಪ್ಪು ಅರ್ಥ ಅಗೋಚರ ಚಿಪ್ಪು ಎನ್ನುವ ಕವಿ ಶಬ್ದಗಳಾಚೆಗಿನ ಅರಿವಿನ ಕುರಿತು ಮಾತನಾಡುತ್ತಾರೆ. ಬರೆದ ಪದಗಳಲ್ಲಿ ಅಥವಾ ಶಬ್ದಗಳಲ್ಲಿ ಅವುಗಳ ಅರ್ಥವನ್ನೂ ಮೀರಿದ ಅನುಭವವಿದೆ. ಚೌಪದಿಯಲ್ಲಿ ಸಾಮಾನ್ಯವಾಗಿ ಹೊರಗೊಂದು ಅರ್ಥವಿದ್ದರೆ ಗೂಡಾರ್ಥಗಳು ಹೆಚ್ಚಾಗಿರುತ್ತದೆ.

Advertisement

ಘಟನೆ: 1 ವಾಸ್ತವದಲ್ಲಿ ಗೃಹಸ್ಥರಾಗಿರುವ ಲೇಖಕರು ಸಾಹಿತ್ಯದ ವಿದ್ಯಾರ್ಥಿ, ವೃತ್ತಿಯಲ್ಲಿ ಶಿಕ್ಷಕರು. ಆದರೆ ಶರಣ ಪರಂಪರೆಯ ಪಥ ಹಿಡಿದವರು. ಲೌಕಿಕವನ್ನು ಮೀರಿ ಬರೆದಿರುವ ಈ ವಚನಗಳು ಲೇಖಕರ ಅನುಭವಗಳನ್ನು ತಿಳಿಸುತ್ತದೆ. ವಾಸ್ತವ ಬದುಕಿನ ಕುರಿತು ಬಿಚ್ಚಿಡುವ ಜತೆಗೆ ಗೊಂದಲಮಯ ಇಂದಿನ ಬದುಕಿಗೆ ಉತ್ತರ ಚೌಪದಿಯ ಮೂಲಕ ನೀಡುತ್ತಾ ಬಂದಿದ್ದಾರೆ.

ಘಟನೆ: 2 ಲೋಕಸತ್ಯ ತಿಳಿಸುವ ಇದರಲ್ಲಿ ನೀತಿ ಸೂತ್ರಗಳಿವೆ. ಕಟುವಾಸ್ತವ ಬಿಚ್ಚಿಟ್ಟಿದ್ದಾರೆ. ಬದುಕಿಗೆ ಬೇಕಾದ ಸಕಾರಾತ್ಮಕ ಅಂಶಗಳಿವೆ. ಬದುಕು ಸುಂದರಗೊಳಿಸಲು ಹಿತನುಡಿಗಳಿವೆ. ಪ್ರಕೃತಿ, ಭೂಮಿ, ಚಂದ್ರನ ಕುರಿತ ಸುಂದರ ಕಲ್ಪನೆಗಳಿವೆ.

ಘಟನೆ: 3 ಚಂದ್ರಸಾಕ್ಷಿ ಎನ್ನುವ ಕಾವ್ಯನಾಮದ ಮೂಲಕ ಪ್ರಚಲಿತವಾಗಿರುವ ಲೇಖಕರು ವಾಸ್ತವದ ಚಿತ್ರ ಬಿಚ್ಚಿಡುತ್ತಾರೆ. “ಆಡಳಿತವಿದ್ದಾಗ ಮೂಡುವವು ಕೊಂಬುಗಳು ನೋಡುವ ಕಣ್ಣುಗಳು ನೆತಿ ¤ಮೇಲಡರುವವು’ ಲೇಖಕರರು ಪ್ರಸ್ತುತ ಮನುಷ್ಯನ ಗುಣವನ್ನು ವಿಡಂಭನಾತ್ಮಕವಾಗಿ ತಿಳಿಸುತ್ತಾ ಹೋಗುತ್ತಾರೆ. ಎಡ ಬಲ ಸಿದ್ಧಾಂತಗಳ ಕುರಿತಾದ ಮಾತುಗಳು ವಚನದಲ್ಲಿದೆ. ಹಿಂದೇನು ಮುಂದೇನು ಎಡ ಬಲವೇನು? ಸಿದ್ಧಾಂತದೆಳೆವಿಡಿದು ಹೋರುವರು, ಧೀರರು ವಾದಿಸಲರಿಯದೆ ಚಾರಿತ್ರ್ಯವಧೆಗಿಳಿವ, ಹೇಡಿ ತಾನತಿ ಹೀನ ಚಂದ್ರಸಾಕ್ಷಿ’ ಎನ್ನುತ್ತಾರೆ.

ಧರ್ಮಗಳ ನಡುವಿನ ಜಗಳ, ಶ್ರೀಮಂತ ಬಡವನೆನ್ನುವ ಅಸಮಾನತೆಯ ಕುರಿತೂ ಇವರು ಬರೆಯುತ್ತಾರೆ. ಹಿಂದಿನ ವಚನಗಳನ್ನು ಮತ್ತೆ ನೆನಪಿಸುವ ಚಂದ್ರಶೇಖರ ವಸ್ತ್ರದ ಅವರ ಲೇಖನಗಳು ಮನುಷ್ಯನ ಬದುಕಿನ ಕುರಿತು ವ್ಯಂಗ್ಯವಾಗಿ ತಿಳಿಸುತ್ತಾ ಹೋಗುತ್ತಾರೆ.

Advertisement

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next