Advertisement
ಇಂದಿನ ದುಬಾರಿ ದುನಿಯಾದಲ್ಲಿ ಒಂದು- ಎರಡು ರೂಪಾಯಿಗೆ ಒಂದು ಸೀರೆ ಸಿಗುತ್ತದೆ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ಸೃಷ್ಟಿ-ದೃಷ್ಟಿ ಅಂಗಡಿ ವ್ಯಾಪಾರಿ ಚಂದ್ರಕಾಂತ ಪಸರ್ಗೆ ಇಂಥದೊಂದು ಆಶಯದೊಂದಿಗೆ ಹಳೆಯ 1 ಅಥವಾ 2 ರೂಪಾಯಿ “ನೋಟು’ ಪಡೆದು ಹೊಸ ಸೀರೆ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಉಡುಗೊರೆಯಾಗಿ ಆರಂಭಿಸಿರುವ ಬಂಪರ್ ಆಫರ್ ಜ.30ರವರೆಗೆ ಇರಲಿದ್ದು, ಸೀರೆ ಪಡೆಯಲು ನಾರಿಯರು ಬೆಳಗ್ಗೆಯಿಂದಲೇ ಬಟ್ಟೆ ಅಂಗಡಿ ಎದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ.
ಈಗಾಗಲೇ ಸೂರತ್‌ನಿಂದ ಸೀರೆಗಳನ್ನು ತರಲಾಗಿದ್ದು, 100 ರಿಂದ 200 ರೂ. ದರದವರೆಗಿನ ಸೀರೆಗಳನ್ನು ಕೊಡುತ್ತಿದ್ದೇನೆ. ಸೀರೆ ಮಾರಾಟದಿಂದ ಬರುತ್ತಿರುವ ಹಣವನ್ನು ನಗರದ ಹೊರವಲಯದ ಅನಂತಶಯನ ಮಂದಿರದ ಲಕ್ಷ್ಮೀ ವೆಂಕಟೇಶ್ವರ ದೇವರ ಹುಂಡಿಗೆ ಹಾಕುವೆ ಎನ್ನುತ್ತಾರೆ ಪಸರ್ಗೆ.
Related Articles
ಹಿಂದೆ ಜನ ಸೇವೆಗಾಗಿ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದ ಪಸರ್ಗೆ ಈ ಬಾರಿ ಬೀದರ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿ ಸುವ ಆಸೆ ಹೊಂದಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣಲು ಸೀರೆ ಉಡುಗೊರೆ ಎಷ್ಟರ ಮಟ್ಟಿಗೆ ಸಹಕಾರಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
Advertisement
ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ನಿರ್ಧಾರ ಬೆಂಬಲಿಸಿ ಕ್ರಿಸ್‌ಮಸ್ ಹಬ್ಬಕ್ಕೆ ಸೀರೆಗಳನ್ನು ಉಡುಗೊರೆ ನೀಡಿದ್ದೆ. ಈಗ ಕುಮಾರಸ್ವಾಮಿ ಸಿಎಂ ಆಗಬೇಕೆಂಬುದು ನನ್ನ ಆಶಯ. ದೇಶ, ಸಮಾಜಕ್ಕಾಗಿ ಒಳ್ಳೆಯ ಆಡಳಿತ ನೀಡುವವರಿಗೆ ಬೆಂಬಲಿಸುತ್ತಬರುತ್ತಿದ್ದೇನೆ.
ಚಂದ್ರಶೇಖರ ಪಸರ್ಗೆ, ಬಟ್ಟೆ ಅಂಗಡಿ ಮಾಲೀಕ ಶಶಿಕಾಂತ ಬಂಬುಳಗೆ