Advertisement

ಚಂದ್ರಶೇಖರ ಭಂಡಾರಿ ಸಾಲ್ಟ್ ಆಫ್ ದಿ ಅರ್ಥ್

06:27 AM Jan 13, 2019 | |

ಬೆಂಗಳೂರು: ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿಯವರು ಸ್ಟಾಲ್‌ ಆಫ್ ದಿ ಅರ್ಥ್ ಇದ್ದಂತೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬಣ್ಣಿಸಿದರು.

Advertisement

ರಾಷ್ಟ್ರೊàತ್ಥಾನ ಪರಿಷತ್‌ ಹಾಗೂ ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಶನಿವಾರ ಚಾಮರಾಜಪೇಟೆ ರಾಷ್ಟ್ರೊàತ್ಥಾನ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಚಂದ್ರಶೇಖರ ಭಂಡಾರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಡುಗೆ ಉಪ್ಪು ಸರಿಯಾದ ಪ್ರಮಾಣದಲ್ಲಿ ಬಿದ್ದರಷ್ಟೇ ಅಡುಗೆ ರುಚಿಯಾಗಿರುತ್ತದೆ. ಹಾಗೆಯೇ ಬೆರಳೆಣಿಕೆಯ ಸಂತರು ಭೂಮಿಯ ಮೇಲಿನ ಉಪ್ಪು. ಅಂಥವರಲ್ಲಿ ಚಂದ್ರಶೇಖರ ಭಂಡಾರಿಯವರು “ಸಾಲ್ಟ್ ಆಫ್‌ ದಿ ಅರ್ಥ್’ ಎಂದು ಹೇಳಿದರು.

ರಾಷ್ಟ್ರ, ಧರ್ಮಕ್ಕಾಗಿ ಬದುಕಬೇಕು ಎಂದು ಸಾವಿರಾರು ಜನರ ಮನೆ, ಮನದಲ್ಲಿ ಜ್ಯೋತಿ ಹೊತ್ತಿಸಿದ ಪ್ರೇರಕ ಶಕ್ತಿ ಇವರು. ಪುಸ್ತಕಗಳ ಮೂಲಕ ಪ್ರಖರವಾದ ಬೆಳಕು ನೀಡಿ, ಬದುಕಿನಲ್ಲಿ ಚಂದ್ರನಂತೆ ತಂಪಾದ ಬೆಳಕು ನೀಡಿದವರು. ಪ್ರಚಾರಕರಾಗಿ ಮಾಡಿದ ಕೆಲಸಗಳು ಲೇಖನಗಳಿಗಿಂತ ಹೆಚ್ಚು ಕಾಲ ಉಳಿಯಲಿದೆ ಎಂದರು.

ಪ್ರಸಿದ್ಧಿ, ಬಿರುದು ಬಯಸದೆ ಆದರ್ಶವಾಗಿ ಬದುಕು ಕಟ್ಟಿ, ಸಾರ್ಥಕತೆಯ ಜೀವನ ನಡೆಸಿದ್ದಾರೆ. ಶಬ್ಧ, ಲೇಖನ ಮೂಲಕ ಎಚ್ಚರಿಸುವ ಕರ್ತವ್ಯದ ಜತೆ ಸಾವಿರಾರು ಜನರ ಮನೆ, ಮನದಲ್ಲಿ ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ ಬದುಕಬೇಕು ಎಂದು ಜ್ಯೋತಿ ಹೊತ್ತಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ್‌ ಭಂಡಾರಿಯವರನ್ನು ಸನ್ಮಾನಿಸಲಾಯಿತು. ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ, ರಾಷ್ಟ್ರೊತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್‌ ಹೆಗ್ಡೆ, ಅಖೀಲ್‌ ಭಾರತ ಸಾಹಿತ್ಯ ಪರಿಷತ್‌ನ ಕರ್ನಾಟಕ ಕಾರ್ಯದರ್ಶಿ ರಘುನಂದನ್‌ ಭಟ್‌ ಮತ್ತಿತರರಿದ್ದರು.

Advertisement

ರಾಷ್ಟ್ರ ನಿರ್ಮಾಣದ ಅಸ್ಮಿತೆ ಎತ್ತಿ ಹಿಡಿವ ಮತ್ತಷ್ಟು ಕೃತಿಗಳನ್ನು ಚಂದ್ರಶೇಖರ ಭಂಡಾರಿಯವರಿಂದ ಸಮಾಜ ನಿರೀಕ್ಷಿಸುತ್ತಿದೆ. ಇತ್ತೀಚಿಗೆ ಹಲವು ಸಾಹಿತಿಗಳ ಹಲವಾರು ಕೃತಿಗಳು ಬಿಡುಗಡೆ ಆಗುತ್ತದೆ. ಆದರೆ, ಮನಸು ಮುಟ್ಟುವ ಸಾಹಿತ್ಯದ ಕೊರತೆಯಿದೆ.
-ಟಿ.ಎಸ್‌.ನಾಗಾಭರಣ, ನಿರ್ದೇಶಕ

ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಅನೇಕ ವಿಷಯಗಳು ಸಾಹಿತ್ಯದ ಮುಲಕ ಆಗಬೇಕು. ವಿಚಾರಕ್ಕೆ ಪ್ರಾಧಾನ್ಯತೆ ಸಿಗಬೇಕೇ ಹೊರತು ವ್ಯಕ್ತಿಗಲ್ಲ.  ಸಾಹಿತ್ಯ ರಾಷ್ಟ್ರೀಯ ಅಸ್ಮಿತೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ರಾಷ್ಟ್ರೀಯ ದೃಷ್ಟಿ ಮೂಡಿಸುವ ಹಲವು ಕಾವ್ಯಗಳನ್ನು ಸಂಘ ನೀಡಿದೆ. ಸಂಘದ ವಿಚಾರವಾಗಿ ಯಾವುದೇ ನಾಟಕ ಅಥವಾ ಕಾದಂಬರಿ ಬಂದಿಲ್ಲ. 
-ಚಂದ್ರಶೇಖರ್‌ ಭಂಡಾರಿ, ಹಿರಿಯ ಪ್ರಚಾರಕ

Advertisement

Udayavani is now on Telegram. Click here to join our channel and stay updated with the latest news.

Next