Advertisement
ಅವರಿಗೆ ಮನೆಯಿಂದ ಹೊರಗೆ ಬರಲು ಅವಕಾಶ ನೀಡದ ಪೊಲೀಸರು, ನಾಯ್ಡು ಮನೆಯ ಗೇಟುಗಳಿಗೆ ಬೀಗ ಹಾಕಿದರು. ಅಷ್ಟೇ ಅಲ್ಲ, ನಾಯ್ಡು ಮನೆಗೆ ತೆರಳಲು ಯತ್ನಿಸಿದ ಹಲವು ಟಿಡಿಪಿ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Related Articles
ನಾಯ್ಡು ಮತ್ತು ರೆಡ್ಡಿ ಕುಟುಂಬದ ಮಧ್ಯದ ದ್ವೇಷ ಈಗಿನದ್ದಲ್ಲ. ಕಳೆದ 35 ವರ್ಷ ಗಳಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಈ ದ್ವೇಷ ಹೊರ ಬರುತ್ತಲೇ ಇದೆ. ಜಗನ್ ಮೋಹನ ರೆಡ್ಡಿ ತಂದೆ ವೈಎಸ್ ರಾಜಶೇಖರ ರೆಡ್ಡಿ ಮತ್ತು ನಾಯ್ಡು ಒಟ್ಟಿಗೆ ರಾಜಕೀಯಕ್ಕೆ ಕಾಂಗ್ರೆಸ್ ಮೂಲಕ ಬಂದವ ರಾದರೂ ಎನ್.ಟಿ. ರಾಮರಾವ್ ಸರಕಾರವಿದ್ದಾಗ 1984ರಲ್ಲಿ ನಾಯ್ಡು ತನ್ನ ಮಾವನ ಪಕ್ಷ ಟಿಡಿಪಿಗೆ ಹಾರಿದ್ದರು. ಆಗ ನಾಯ್ಡುಗೆ ಪ್ರತಿಸ್ಪರ್ಧಿಯಾಗಿ ವೈಎಸ್‌ಆರ್ ಕಂಡಿದ್ದರು. 1999ರಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ನಾಯ್ಡು 2004ರಲ್ಲಿ ಹೀನಾಯ ವಾಗಿ ಸೋತಿದ್ದರು. ಆಗ ವೈಎಸ್‌ಆರ್ ಸರಕಾರದ ವಿರುದ್ಧ ಪ್ರತಿ ದಿನವೂ ನಾಯ್ಡು ವಾಗ್ಧಾಳಿ ನಡೆಸುತ್ತಿದ್ದರು.
Advertisement
2009ರಲ್ಲಿ ರಾಜಶೇಖರ ರೆಡ್ಡಿ ಸಾವಿನ ಬಳಿಕ ಹಾಗೂ ರಾಜ್ಯ ವಿಭಜನೆಯ ಅನಂತರ ಬದಲಾದ ಪರಿಸ್ಥಿತಿಯಲ್ಲಿ ರಾಜಕೀಯ ಲಾಭ ಬಳಸಿಕೊಂಡ ನಾಯ್ಡು, ಜಗನ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖ ಲಿಸಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತದೆ. ಇದರಿಂದ ಜಗನ್ ಜೈಲಿಗೂ ಹೋಗುವಂತಾಗಿತ್ತು. ಅಲ್ಲೇ ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಲು ಜಗನ್ ನಿರ್ಧರಿಸಿದ್ದರು. 2018ರಲ್ಲಿ ಅಭೂತಪೂರ್ವ ಜಯ ಸಾಧಿಸಿದ ಜಗನ್ ಅಧಿಕಾರಕ್ಕೇರಿದ ದಿನದಿಂದಲೇ ನಾಯ್ಡು ವಿರುದ್ಧ ಕತ್ತಿ ಮಸೆಯಲು ಆರಂಭಿಸಿದ್ದಾರೆ.