Advertisement
ಬೇಕಾಗುವ ಸಾಮಗ್ರಿಮೈದಾ ಹಿಟ್ಟು -1ಕಪ್
ಸಕ್ಕರೆ -1ಕಪ್
ಖೋವಾ – ಕಾಲು ಕಪ್
ಸಕ್ಕರೆ ಪುಡಿ -2 ಚಮಚ
ತುರಿದ ಒಣ ಕೊಬ್ಬರಿ – ಅರ್ಧ ಕಪ್
ಗೋಡಂಬಿ, ಬಾದಾಮಿ, ಪಿಸ್ತಾ ಸ್ವಲ್ಪ
ಏಲಕ್ಕಿ ಹುಡಿ-ಚಿಟಿಕೆಯಷ್ಟು
ಸೋಡಾ- ಚಿಟಿಕೆಯಷ್ಟು
ಉಪ್ಪು : ರುಚಿಗೆ ತಕ್ಕಷ್ಟು
ತುಪ್ಪ -2 ಚಮಚ
ಎಣ್ಣೆ: ಕರಿಯಲು ಬೇಕಾದಷ್ಟು
ಒಂದು ಕಪ್‌ನಲ್ಲಿ ಮೈದಾಹಿಟ್ಟನ್ನು ಹಾಕಿ ಅದಕ್ಕೆ 2 ಚಮಚ ತುಪ್ಪ , ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಬರುವ ತನಕ ಮೃದುವಾಗಿ ಕಲಸಿಕೊಂಡು 5 ರಿಂದ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಅನಂತರ ಒಂದು ಪಾತ್ರೆಗೆ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ಹಾಕಿ ಸಕ್ಕರೆ ಕರಗುವವರೆಗೆ ಕುದಿ ಸಿ. ಒಂದು ವೇಳೆ ಪಾಕ ಬಂದ ಅನಂತರ ಚಿಟಿಕೆಯಷ್ಟು ಏಲಕ್ಕಿ ಹುಡಿ ಹಾಕಿ ಆರಲು ಬಿಡಿ. ಬಳಿಕ ಒಂದು ಬಾಣಲೆಗೆ ಖೋವಾ ಹಾಕಿ ಹುರಿದುಕೊಳ್ಳಬೇಕು. ಖೋವಾ ಕರಗುತ್ತಾ ಬರುವಾಗ ಬಾದಾಮಿ, ಗೋಡಂಬಿ, ಪಿಸ್ತಾ, ಒಣಕೊಬ್ಬರಿ ಹಾಕಿ ಸ್ವಲ್ಪ ಸಕ್ಕರೆ ಪುಡಿ, ಏಲಕ್ಕಿ ಪುಡಿಯನ್ನು ಸೇರಿಸಿ ಎಲ್ಲ ವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ತಣಿಯಲು ಬಿಟ್ಟರೆ ಹೂರಣ ಸಿದ್ಧವಾಗುತ್ತದೆ. ಮುಂಚೆ ನೆನೆಯಲು ಇಟ್ಟ ಹಿಟ್ಟನ್ನು ತೆಗೆದುಕೊಂಡು ಚೆನ್ನಾಗಿ ಇನ್ನೊಮ್ಮೆ ಕಲಸಿ ಅದನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಕೊಂಡು ಒಣ ಹಿಟ್ಟಿನಲ್ಲಿ ಅದ್ದಿ ಅದನ್ನು ಚಿಕ್ಕ ಪೂರಿಯಾಕೃತಿಯಲ್ಲಿಲಟ್ಟಿಸಿಕೊಂಡು ಹೂರಣವನ್ನು ಒಂದರ ಮೇಲೆ ಹಾಕಿ ಸವ ರಿಕೊಂಡು ಇನ್ನೊಂದನ್ನು ಅದರ ಮೇಲೆ ಇಟ್ಟು ಸುತ್ತಲು ಮಡಚಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿಕೊಂಡು ಅದರಲ್ಲಿ ಸಿದ್ಧಪಡಿಸಿಕೊಂಡಿರುವ ಹೂರಣವನ್ನು ಕೆಂಪಗಾಗುವ ತನಕ ಎರಡೂ ಬದಿ ಕರಿಯಬೇಕು. ಅನಂತರ ಅದನ್ನು ಸಕ್ಕರೆ ಪಾಕಕ್ಕೆ ಹಾಕಿ 2 ರಿಂದ 5 ನಿಮಿಷಗಳ ಕಾಲ ನೆನೆಯಲು ಬಿಟ್ಟರೆ ರುಚಿ ರುಚಿಯಾದ ಚಂದ್ರಕಲಾ ಸ್ವೀಟ್ ಸವಿ ಯಲು ಸಿದ್ಧ.
Related Articles
Advertisement