Advertisement
ಟಿಡಿಪಿಗೆ 135, ಚಿತ್ರನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 21, ಬಿಜೆಪಿ 8, ವೈಎಸ್‌ಆರ್‌ಸಿಪಿ 11 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಆಂಧ್ರಪ್ರದೇಶ ವಿಭಜನೆಗೊಂಡು 2014ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಆದ ಬಳಿಕ ನಡೆಯುತ್ತಿರುವ 3ನೇ ವಿಧಾನಸಭೆ ಚುನಾವಣೆ ಇದಾಗಿದೆ. ಟಿಡಿಪಿ ನೇತೃತ್ವದಎನ್ಡಿಎ, ವೈಎಸ್‌ಆರ್ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟದ ನಡುವೆ ತ್ರಿಕೋನ ಹೋರಾಟ ಈ ಬಾರಿ ಆಂಧ್ರಪ್ರದೇಶದಲ್ಲಿತ್ತು.
Related Articles
Advertisement
ಕುಪ್ಪಂನಲ್ಲಿ ಜಯ: ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಿಂದ ಗೆದ್ದಿದ್ದಾರೆ. ಬಾಬುಗೆ 1,21,929 ಮತಗಳು ಸಿಕ್ಕಿವೆ.
ಗೆದ್ದ ಜಗನ್: ಪುಲಿವೆಂದುಲದಿಂದ ಸಿಎಂ ಜಗನ್ ರೆಡ್ಡಿ ಗೆದ್ದಿದ್ದಾರೆ.ಅವರಿಗೆ 1,16,315 ಮತಗಳು ಪ್ರಾಪ್ತವಾಗಿವೆ. ಟಿಡಿಪಿ ಅಭ್ಯರ್ಥಿಗೆ 54,628 ಮತಗಳು ಸಿಕ್ಕಿವೆ.ಪವನ್ ಕಲ್ಯಾಣ್ ವಿಧಾನಸಭೆ ಪ್ರವೇಶ: ತೆಲುಗು ಚಿತ್ರರಂಗದ ಪ್ರಭಾವಿ ನಟ ಪವನ್ ಕಲ್ಯಾಣ್ 2014ರಲ್ಲಿ ಜನ ಕಲ್ಯಾಣ ಸೇನಾ ಪಕ್ಷ ಸ್ಥಾಪನೆ ಮಾಡಿದ್ದರೂ, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಈ ಬಾರಿ ಅವರ ಪಕ್ಷ 21 ಕ್ಷೇತ್ರಗಳಲ್ಲಿ ಗೆದ್ದಿದೆ. ಜತೆಗೆ ಕಾಕಿನಾಡ ಜಿಲ್ಲೆಯ ಪೀತಾಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಪ್ರಭಾವ ಬೀರದ ಶರ್ಮಿಳಾ: ಸಹೋದರ ಮತ್ತು ಹಾಲಿ ಸಿಎಂ ಜಗನ್ಮೋಹನ ರೆಡ್ಡಿ ಅವರ ಜತೆಗೆ ಮುನಿಸಿಕೊಂಡು ತೆಲಂಗಾಣದಲ್ಲಿ ಪ್ರತ್ಯೇಕ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿದ್ದ ವೈ.ಎಸ್.ಶರ್ಮಿಳಾ ಅವರನ್ನು ಮತ್ತೆ ಆಂಧ್ರಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ನಾಯ್ಡುಗೆ ಪ್ರಧಾನಿ, ಅಮಿತ್ ಶಾ ಅಭಿನಂದನೆ: 5 ವರ್ಷಗಳ ಬಳಿಕ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಚಂದ್ರಬಾಬು ನಾಯ್ಡು ಅವರಿಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ವೈಎಸ್‌ಆರ್‌ಸಿಪಿ ಸೋಲಿಗೆ ಕಾರಣ
3 ರಾಜಧಾನಿಗಳ ನಿರ್ಮಾಣ, ಜನರಿಗೆ ಉಂಟಾದ ಅನನುಕೂಲ
ಪೋಲಾವರಂ ಯೋಜನೆ ಪೂರ್ಣಗೊಳಿಸಲು ವಿಫಲವಾದದ್ದು
ಮನೆ ಬಾಗಿಲಿಗೇ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ತಂದರೂ ಮತ ಗಳಿಕೆಯಲ್ಲಿ ವಿಫಲ ನಾಯ್ಡು ಗೆಲುವಿಗೆ ಕಾರಣ
ಕೌಶಲಾಭಿವೃದ್ಧಿ ಮಂಡಳಿ ಹಗರಣದಲ್ಲಿ ಬಂಧನ ಪ್ರಕರಣ ಪ್ರಚಾರಕ್ಕೆ ಬಳಕೆ
ಕಾಪು ಸಮುದಾಯದ ನಟ ಪವನ್ ಕಲ್ಯಾಣ್ ಪಕ್ಷದ ಜತೆಗೆ ಮೈತ್ರಿ
ಖಮ್ಮ ಸಮುದಾಯದ ಮತಗಳು, ವಿಶೇಷವಾಗಿ ಮಹಿಳಾ ಸಮುದಾಯದ ಮತ ಟಿಡಿಪಿ