Advertisement

Andhra; ತಿರುಪತಿ ಸ್ವಚ್ಛಗೊಳಿಸುವೆ, ಹಿಂದೂ ಧರ್ಮ ರಕ್ಷಿಸುವೆ: ಚಂದ್ರಬಾಬು ನಾಯ್ಡು ಶಪಥ

01:11 AM Jun 14, 2024 | Team Udayavani |

ತಿರುಪತಿ/ಅಮರಾವತಿ: ರಾಜ್ಯವನ್ನು “ಶುದ್ಧೀಕರಿಸುವ’ ಕಾರ್ಯವು ತಿರುಮಲದಿಂದಲೇ ಆರಂಭವಾಗಲಿದೆ. ಜಗನ್‌ ಸರಕಾರದ ವೇಳೆ ತಿರುಪತಿ-ತಿರುಮಲ ದೇವಸ್ಥಾನಂ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ. ಭ್ರಷ್ಟಾಚಾರವನ್ನು ತೊಡೆದು ಹಾಕಿ “ತಿರುಮಲದಲ್ಲಿ ಹಿಂದೂ ಧರ್ಮ ರಕ್ಷಣೆ’ ಮಾಡಲಾಗುವುದು’ ಎಂದು ಆಂಧ್ರ ಪ್ರದೇಶದ ನೂತನ ಸಿಎಂ ಎನ್‌. ಚಂದ್ರಬಾಬು ನಾಯ್ಡು ಹೇಳಿದರು.

Advertisement

ಗುರುವಾರ ಕುಟುಂಬ ಸಮೇತರಾಗಿ ಅವರು ತಿರುಪತಿಯ ತಿರುಮಲಕ್ಕೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದರು. ಈ ವೇಳೆ ಮಾತನಾಡಿ, “ಕಳೆದ ಐದು ವರ್ಷಗಳಲ್ಲಿ ತಿರುಮಲವನ್ನು ಕೆಟ್ಟ ಪರಿಸ್ಥಿತಿಗೆ ತಳ್ಳಲಾಗಿದೆ. ಇಲ್ಲಿ ಗೋವಿಂದನ ಹೆಸರು ಮಾತ್ರವೇ ಕೇಳಬೇಕು. ಇಲ್ಲಿ ಬಂದಾಗ ವೈಕುಂಠದ ಅನುಭವವಾಗಬೇಕು’ ಎಂದರು.

“ಈ ಹಿಂದಿನ ಸರಕಾರವು ಟ್ರಸ್ಟ್‌ ಅನ್ನು ವಾಣಿಜ್ಯೀ ಕರಣಗೊಳಿಸಿದೆ. ಪ್ರಸಾದ ಗುಣಮಟ್ಟದಿಂದ ಕೂಡಿರ
ಬೇಕು. ಬೆಲೆ ಏರಿಕೆ ಮಾಡಬಾರದು ಮತ್ತು ದರ್ಶನದ ಟಿಕೆಟ್‌ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಅವಕಾಶ ಕೊಡಬಾರದು’ ಎಂದು ಸೂಚಿಸಿದರು. ಜಗನ್‌ ಸರಕಾರವು ಧಾರ್ಮಿಕ ಸ್ಥಳಗಳನ್ನು ಗಾಂಜಾ, ಮದ್ಯ ಮತ್ತು ಮಾಂಸಾಹಾರಿ ಕೇಂದ್ರಗಳನ್ನಾಗಿ ರೂಪಿ ಸಿದೆ ಎಂದು ಗಂಭೀರ ಆರೋಪ ಮಾಡಿದರು.

ಚೇರ್ಮನ್‌ ನೇಮಕ ವಿವಾದ
ಜಗನ್‌ ನೇತೃತ್ವದ ವೈಎಸ್‌ಆರ್‌ಪಿ ಸರಕಾರವು ಕಳೆದ ವರ್ಷ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ (ಟಿಟಿಡಿ) ಅಧ್ಯಕ್ಷರನ್ನಾಗಿ ತಿರುಪತಿ ಶಾಸಕ ಕರುಣಾಕರ್‌ ರೆಡ್ಡಿ ಭೂಮನ ಅವರನ್ನು ನೇಮಕ ಮಾಡಿತ್ತು. ಆಂಧ್ರದಲ್ಲಿ ಈ ನೇಮಕ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಭೂಮನ ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ. ಅವರು ಕ್ರೈಸ್ತ ಸಂಪರ್ಕ ಹೊಂದಿದ್ದಾರೆ ಎಂದು ಆಗ ಟಿಡಿಪಿ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ನಾಯ್ಡು ಹೇಳಿಕೆ ಮಹತ್ವ ಪಡೆದಿದೆ.

4 ಕಡತಗಳಿಗೆ ಸಹಿ
ತಿರುಪತಿ ಮತ್ತು ವಿಜಯವಾಡ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ನೂತನ ಸಿಎಂ ಚಂದ್ರಬಾಬು ನಾಯ್ಡು ಅವರು ಅಮರಾವತಿಯ ಸಚಿವಾಲಯಕ್ಕೆ ಆಗಮಿಸಿ ಮುಖ್ಯಮಂತ್ರಿಯಾಗಿ ಕಾರ್ಯ ಕಲಾಪವನ್ನು ಆರಂಭಿಸಿದರು. ಈ ವೇಳೆ 16,347 ಶಿಕ್ಷಕರ ನೇಮಕಾತಿಗೆ ಅನುವು ಮಾಡಿಕೊಡುವ ಜಿಲ್ಲಾ ಆಯ್ಕೆ ಸಮಿತಿ (ಡಿಎಸ್‌ಸಿ) ಸಹಿತ ನಾಲ್ಕು ಕಡತಗಳಿಗೆ ಸಹಿ ಹಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next