Advertisement

Andhra Pradesh ಬಂದ್‌ ವಿಫ‌ಲ; 21 ಶಾಸಕರಿಗೆ ಪೊಲೀಸರಿಂದ ಗೃಹ ಬಂಧನ

09:07 PM Sep 11, 2023 | Team Udayavani |

ಅಮರಾವತಿ: ಕೌಶಲ್ಯಾಭಿವೃದ್ಧಿ ನಿಗಮದ 370 ಕೋಟಿ ರೂ. ಹಗರಣದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಟಿಡಿಪಿ ಕರೆ ನೀಡಿದ್ದ ಆಂಧ್ರಪ್ರದೇಶ ಬಂದ್‌ಗೆ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ.

Advertisement

ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ನಾಯ್ಡು ಬಂಧನ ಖಂಡಿಸಿ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ, ಬಂದ್‌ಗೆ ಸಾರ್ವಜನಿಕರು ಸ್ಪಂದಿಸಲಿಲ್ಲ. ಈ ಬಗ್ಗೆ ಮಾತನಾಡಿದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಶಂಖ ಬಾತ್ರಾ ರಾಜ್ಯಾದ್ಯಂತ ಪರಿಸ್ಥಿತಿ ಶಾಂತಿಯುತವಾಗಿತ್ತು ಎಂದಿದ್ದಾರೆ.

ಈ ನಡುವೆ ಟಿಡಿಪಿ ಶಾಸಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿರುವ ಎಲ್ಲ 21 ಶಾಸಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಸೂಕ್ತ ನಾಯಕತ್ವದ ಕೊರತೆಯಾಗಿದ್ದೂ ಬಂದ್‌ ವಿಫ‌ಲಗೊಳ್ಳಲು ಕಾರಣವಾಯಿತು.

ಜೈಲಿಗೆ ಶಿಫ್ಟ್:
14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಾಯ್ದು ಅವರನ್ನು ರಾಜಾ ಮಹೇಂದ್ರವರಮ್‌ ನಗರದಲ್ಲಿರುವ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಕೋರ್ಟ್‌ ಆದೇಶದ ಅನ್ವಯ ಜೈಲಲ್ಲಿ ಮನೆಯ ಊಟ, ಧ್ಯಾನ ನಡೆಸಲು ಅವಕಾಶ, ಪ್ರತ್ಯೇಕ ಸೆಲ್‌ ನೀಡಲು ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next