ಬೆಳ್ತಂಗಡಿ: ಲಾೖಲ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ನವೀ ಕರಣ, ಪುನಃಪ್ರತಿಷ್ಠೆ, ಅಷ್ಟಬಂಧ- ಬ್ರಹ್ಮಕಲ ಶೋತ್ಸವಕ್ಕೆ ಬುಧವಾರ ನಡ ಹಾಗೂ ಲಾೖಲದ ಸಾವಿರಾರು ಗ್ರಾಮಸ್ಥರು ಕುತ್ಯಾರು ಕ್ಷೇತ್ರದಿಂದ ಬೆಳ್ತಂಗಡಿ ಪೇಟೆಯಾಗಿ ಬೃಹತ್ ಮೆರವಣಿಗೆ ಮೂಲಕ ಹಸುರುವಾಣಿ ಹೊರೆಕಾಣಿಕೆ ಸಮರ್ಪಿಸಿದರು.
ಬೆಳಗ್ಗೆ 10ಕ್ಕೆ ಕುತ್ಯಾರು ದೇವಸ್ಥಾನದಿಂದ ನೂರಾರು ಸ್ವಯಂಸೇವಕರ ನೇತೃತ್ವದಲ್ಲಿ ಮಹಿಳೆಯರು ಪೂರ್ಣಕುಂಭ ಕಲಶ ಹಿಡಿದು ಹೆಜ್ಜೆಹಾಕಿದರು. ಇದಕ್ಕೂ ಮುನ್ನ ದೇಗುಲದ ಮುಂಭಾಗ ಕುತ್ಯಾರು ಶ್ರೀ ಸೋಮನಾಥೇಸ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಜವರ್ಮ ಬಳ್ಳಾಲ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಬೆಳ್ತಂಗಡಿ ಶಾಸಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಆಡಳಿತ ಮೊಕ್ತೇಸರ ಎನ್. ಧನಂಜಯ ಅಜ್ರಿ ನಡಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ. ವಿಟ್ಟಲ ಶೆಟ್ಟಿ, ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಯಶಂಕರ ಶೆಟ್ಟಿ ಪೆಂರ್ದಿಲೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭೂಷಣ್ ಕಡಂಬ ನಡಗುತ್ತು, ಪ್ರಧಾನ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ಕೋಶಾಧಿಕಾರಿ ಸುಬ್ರಾಯ ಡೋಂಗ್ರೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಧನಂಜಯ ರಾವ್, ಪ್ರಚಾರ ಸಮಿತಿಯ ಸಂಚಾಲಕ ಪ್ರಸಾದ್ ಶೆಟ್ಟಿ ಎಣಿಂಜೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ವಸಂತ ಸುವರ್ಣ, ರಾಜೇಶ್ ಶೆಟ್ಟಿ, ಅಲೋಕ್ ಅಜ್ರಿ, ಪ್ರಕಾಶ್ ಶೆಟ್ಟಿ, ಸಂಚಾಲಕರಾದ ಪವನಂಜಯ ಅಜ್ರಿ, ಪ್ರಶಾಂತ್ ಮಂಜೊಟ್ಟಿ, ಸುರೇಶ್ ಶೆಟ್ಟಿ ರಾಘವೇಂದ್ರ ನಗರ ಲಾೖಲ, ವೆಂಕಪ್ಪಯ್ಯ, ರಾಜೇಶ್ ಎಸ್‌ಕೆಡಿಆರ್‌ಡಿಪಿ, ಅಶೋಕ್ ಶೆಟ್ಟಿ ಲಾೖಲ, ಗಣೇಶ್ ಕನ್ನಾಜೆ, ರತ್ನಾವತಿ ಲೋಕೇಶ್ ಗೌಡ, ಪುಷ್ಪರಾಜ್ ಶೆಟ್ಟಿ, ಪ್ರತೀಕ್ ಕೋಟ್ಯಾನ್ ಲಾೖಲ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಮಿತಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಉಗ್ರಾಣ ಮುಹೂರ್ತ
ಚಂದ್ಕೂರು ದೇಗುಲಕ್ಕೆ ಮೆರವಣಿಗೆ ಯಲ್ಲಿ ಬಂದ ಹಸಿರುವಾಣಿಯನ್ನು ಪ್ರದಕ್ಷಿಣೆ ಬಳಿಕ ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಯೋಗೀಶ್ ಆರ್. ಭಿಡೆ ಉಗ್ರಾಣ ಮುಹೂರ್ತ ನಡೆಸಿದರು.
ಬಳಿಕ ಕ್ಷೇತ್ರದ ಕಾರ್ಯಾ ಲಯವನ್ನು ಮೋಹನ್ ಶೆಟ್ಟಿ ಉದ್ಘಾಟಿಸಿದರು.
ಹೊರೆಕಾಣಿಕೆ ವಿಶೇಷತೆ
ಹೊರೆಕಾಣಿಕೆಯಾಗಿ ಎರಡು ಗ್ರಾಮಸ್ಥ ರಿಂದ 40 ಕ್ವಿಂಟಾಲ್ ಅಕ್ಕಿ, 20 ಕ್ವಿಂಟಾಲ್ ಬೆಲ್ಲ, 20 ಕ್ವಿಂಟಾಲ್ ಸಕ್ಕರೆ ವಸ್ತು ರೂಪದಲ್ಲಿ ಭಕ್ತರು ಸಮರ್ಪಿಸಿದರು. ಇನ್ನುಳಿದಂತೆ ಹಸಿರುವಾಣಿ ಮೆರವಣಿಗೆಗಾಗಿ 20 ಪಿಕಪ್, 2 ಲಾರಿಗಳಲ್ಲಿ 2000 ಮಂದಿ ಮೆರವಣಿಗೆಯಲ್ಲಿ ಸೇರಿದ್ದರು.