ನವಿಮುಂಬಯಿ: ನೆರೂಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ ಶರನ್ನವರಾತ್ರಿಯ ನಿಮಿತ್ತ ವಿಶೇಷ ಕಾರ್ಯಕ್ರಮಗಳು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯುತ್ತಿದೆ. ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಂದಿರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಭಟ್ ಅವರ ಮುಂದಾಳತ್ವದಲ್ಲಿ ಹಾಗು ತಂತ್ರಿಗಳಾದ ಶ್ರೀ ರಾಮಚಂದ್ರ ಬಾಯರಿ ಅವರ ಮಾರ್ಗದರ್ಶನದಲ್ಲಿ ಜರಗುತ್ತಿದೆ.
ಸೆ. 26 ರಂದು ಬೆಳಗ್ಗೆ ಯಿಂದ ಕ್ಷೀರಾಭಿಷೇಕ, ಮಂಗಳಾರತಿ, ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ ವಾಚನ, ಚಂಡಿಕಾ ಹೋಮ, ಪೂರ್ಣಾಹುತಿ, ಸುಹಾಸಿನಿ ಪೂಜೆ, ಕನ್ನಿಕಾ ಪೂಜೆ, ಮಧ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಪ್ರಸಾದ ನೆರವೇರಿತು. ಸಂಜೆ ಹರಿದ್ರಾ ಅಲಂಕಾರ, ದುರ್ಗಾ ಸಪ್ತಶತೀ ಪಾರಾಯಣ, ಲಲಿತ ಸಹಸ್ರನಾಮ ಪಾರಾಯಣ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನೆ, ಮಹಾ ಮಂಗಳಾರತಿ ತದನಂತರ ಅನ್ನಪ್ರಸಾದವನ್ನು ಆಯೋಜಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನವಿಮುಂಬಯಿ ಮಾಜಿ ನಗರ ಸೇವಕ, ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ನೆರೂಲ್ ಶ್ರೀ ದುರ್ಗಾದೇವಿ ಮಂದಿರದ ಕಟ್ಟಡ ನಿಧಿ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್. ಶೆಟ್ಟಿ, ವಿಶ್ವಸ್ಥರಾದ ಖಾಂದೇಶ್ ಭಾಸ್ಕರ ಶೆಟ್ಟಿ, ಜಿತೇಶ್ ಕುಸುಮೋದರ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.
ಸೆ. 27 ರಂದು ಬೆಳಗ್ಗೆಯಿಂದ ಕ್ಷೀರಾಭಿಷೇಕ, ಮಂಗಳಾರತಿ, ಸಂಜೆ ದುರ್ಗಾ ಸಪ್ತಶತೀ ಪಾರಾಯಣ, ಲಲಿತ ಸಹಸ್ರನಾಮ ಪಾರಾಯಣ, ಖಾಂದೇಶ್ವರ ಭಜನಾ ಮಂಡಳಿ ಖಾಂದ ಕಾಲನಿಯವರಿಂದ ಭಜನೆ, ಮಹಾ ಮಂಗಳಾರತಿ ತದನಂತರ ಅನ್ನಪ್ರಸಾದ ಜರಗಿತು. ಪೂರ್ವಾಹ್ನ 10 ರಿಂದ ಪ್ರಸಿದ್ಧ ನಾಡಿವೈದ್ಯರಿಂದ ಚಿಕಿತ್ಸಾ ವಿಧಾನ ಹಾಗೂ ಗೋ ಮೂತ್ರದ ವಿಶೇಷತೆಯ ಬಗ್ಗೆ ವಿಶೇಷ ಕಾರ್ಯಗಾರ ನಡೆಯಿತು. ಸೆ. 28 ರಂದು ಬೆಳಗ್ಗೆಯಿಂದ ನೈರ್ಮಲ್ಯ ದರ್ಶನ, ಕ್ಷೀರಾಭಿಷೇಕ, ಮಂಗಳಾರತಿ, ಸಂಜೆ ದುರ್ಗಾ ಸಪ್ತಶತೀ ಪಾರಾಯಣ, ಲಲಿತ ಸಹಸ್ರನಾಮ ಪಾರಾಯಣ, ಹರಿ ಕೃಷ್ಣ ಭಜನಾ ಮಂಡಳಿ ಆಶ್ರಯದವರಿಂದ ಭಜನೆ, ಮಹಾ ಮಂಗಳಾರತಿ ತದನಂತರ ಅನ್ನಪ್ರಸಾದವನ್ನು ಆಯೋಜಿಸಲಾಗಿತ್ತು.
ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ, ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ದಾಮೋದರ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಡಿ. ಪೂಜಾರಿ, ಜತೆ ಕಾರ್ಯದರ್ಶಿ ಹರಿ ಎಲ್. ಶೆಟ್ಟಿ, ಗೌರವ ಕೋಶಾಧಿಕಾರಿ ಸುರೇಶ್ ಜಿ. ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್ ಮ್ಹಾಡಾ, ಕಟ್ಟಡ ನಿಧಿ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್. ಶೆಟ್ಟಿ, ಟ್ರಸ್ಟಿಗಳಾದ ರವಿ ಆರ್.ಶೆಟ್ಟಿ, ರಿತೇಶ್ ಜಿ. ಕುರುಪ್, ಡಾ| ಶಿವ ಮೂಡಿಗೆರೆ, ಪ್ರಕಾಶ್ ಎಸ್. ಮಹಾಡಿಕ್, ಖಾಂದೇಶ್ ಭಾಸ್ಕರ್ ಶೆಟ್ಟಿ, ಹರೀಶ್ ಎನ್. ಶೆಟ್ಟಿ, ಮಹೇಶ್ ಡಿ. ಪಟೇಲ್, ನಾರಾಯಣ ಪಟೇಲ್, ರಾಮಕೃಷ್ಣ ಶೆಟ್ಟಿ, ಅಣ್ಣಪ್ಪ ಕೋಟೆಕಾರ್, ಸುರೇಂದ್ರ ಆರ್. ಶೆಟ್ಟಿ,ನಿತ್ಯಾನಂದ ವಿ. ಶೆಟ್ಟಿ, ಸದಾಶಿವ ಎನ್. ಶೆಟ್ಟಿ, ಮೋಹನ್‌ದಾಸ್ ಕೆ. ರೈ, ಮೇಘರಾಜ್ ಶೆಟ್ಟಿ, ಸುರೇಶ್ ಆರ್. ಶೆಟ್ಟಿ, ವಿಶ್ವನಾಥ ಶೆಟ್ಟಿ, ರಘು ವಿ. ಶೆಟ್ಟಿ, ಇಂದಿರಾ ಎಸ್.ಶೆಟ್ಟಿ ಹಾಗೂ ಪರಿಸರದ ಭಕ್ತರು, ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಂಘ ಟನೆಗಳ ಪದಾಧಿಕಾರಿಗಳು ನವರಾತ್ರಿ ಉತ್ಸವದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.
ಸೆ. 29 ರಂದು ಬೆಳಗ್ಗೆ 6 ರಿಂದ ನೈರ್ಮಲ್ಯ ದರ್ಶನ, ಕ್ಷೀರಾಭಿಷೇಕ, ಮಂಗಳಾರತಿ, ಪೂರ್ವಾಹ್ನ 9.30 ರಿಂದ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ ವಾಚನ, ಪೂರ್ವಾಹ್ನ 10 ರಿಂದ ದುರ್ಗಾ ಹೋಮ, ಪೂರ್ವಾಹ್ನ 11.30 ಪೂರ್ಣಾಹುತಿ, 11.45 ಕ್ಕೆ ಮಂಗಳಾರತಿ, ಮಧ್ಯಾಹ್ನ 12.00 ಕ್ಕೆ ಪ್ರಸಾದ ವಿತರಣೆ, ಸಂಜೆ 5.30 ರಿಂದ ದುರ್ಗಾ ಸಪ್ತಶತೀ ಪಾರಾಯಣ, 6.30 ರಿಂದ ಲಲಿತ ಸಹಸ್ರನಾಮ ಪಾರಾಯಣ, 7 ರಿಂದ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನೆ, ಮಹಾ ಮಂಗಳಾರತಿ, ದಾಂಡಿಯಾ ನೃತ್ಯ ತದನಂತರ ಅನ್ನಪ್ರಸಾದ ಜರಗಲಿದೆ. ಸೆ. 30 ರಂದು ಬೆಳಗ್ಗೆ 9 ರಿಂದ ಶಾರದಾ ಪೂಜೆ, ಪೂರ್ವಾಹ್ನ 10 ರಿಂದ ಅಕ್ಷರಾಭ್ಯಾಸ, ಪೂರ್ವಾಹ್ನ 11 ರಿಂದ ಆಯುಧ ಪೂಜೆ, ಅನ್ನದಾನ ನಡೆಯಲಿದೆ. ವಿಶೇಷ ಪೂಜೆಗಳನ್ನು ನೀಡಲಿಚ್ಚಿಸುವ ಭಕ್ತಾದಿಗಳು ಮಂದಿರದ ಸಂಬಂಧಪಟ್ಟವರನ್ನು (9820313827, 9833284044, 9004256777) ಸಂಪರ್ಕಿಸಬಹುದು.