Advertisement

Job- Search: ಉದ್ಯೋಗ ಸಿಗುವ ಆಸೆಯಲ್ಲಿ ತನ್ನಲ್ಲಿದ್ದ 6 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

02:19 PM Oct 23, 2023 | Team Udayavani |

ಚಂಡೀಗಢ: ಈಗಿನ ಕಾಲದಲ್ಲಿ ಉದ್ಯೋಗ ಸಿಗುವುದೇ ಕಷ್ಟ ಅದರಲ್ಲೂ ನಾವು ಕಲಿತ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸ ಸಿಗಬೇಕಾದರೆ ಆತ ನಿಜಕ್ಕೂ ಪುಣ್ಯ ಮಾಡಿರಬೇಕು ಹಾಗಾಗಿದೆ ಈಗಿನ ಜನರ ಪರಿಸ್ಥಿತಿ ಅಂತಹ ಸ್ಥಿತಿಯಲ್ಲಿ ಹೊಸ ಉದ್ಯೋಗ ಸಿಗುತ್ತದೆ ಎಂದರೆ ಯಾರು ತಾನೆ ಆ ಉದ್ಯೋಗ ಕಳೆದುಕೊಳ್ಳಲು ಬಯಸುತ್ತಾರೆ ಅಲ್ಲವೇ ಆದರೆ ಪಾಪ ಇಲ್ಲೊಬ್ಬ ಯುವಕ ಉದ್ಯೋಗ ಹುಡುಕಾಡುವ ಭರದಲ್ಲಿ ಸಿಕ್ಕಿದ ಕಡೆಗಳಲ್ಲಿ ತನ್ನ ಬಯೋ ಡೇಟಾ ಅಪ್ ಲೋಡ್ ಮಾಡಿ ಇದೀಗ ತನ್ನಲ್ಲಿದ್ದ ಆರು ಲಕ್ಷವನ್ನೇ ಕಳೆದುಕೊಂಡು ತಲೆ ಮೇಲೆ ಇಟ್ಟು ಕುರುವಂತಹ ಪರಿಸ್ಥಿತಿ ಬಂದೊದಗಿದೆ.

Advertisement

ಈಗಿನ ಕಾಲದಲ್ಲಿ ಎಲ್ಲವೂ ಆನ್ ಲೈನ್ ಮುಖಾಂತರ ಕೆಲಸ ಕಾರ್ಯಗಳು ನಡೆಯುವುದು ಹಾಗೇನೇ ಉದ್ಯೋಗ ಸಿಗಬೇಕಾದರೆ ಯಾವುದೇ ಕಂಪೆನಿಗಳಿಗೆ ಹೋಗಿ ನಮ್ಮ ಬಯೋ ಡೇಟಾ ನೀಡಬೇಕಾಗಿಲ್ಲ ಎಲ್ಲವು ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕವೇ ಮನೆಯಲ್ಲೇ ಕುಳಿತು ಕಳುಹಿಸಬಹುದು. ಅದರಂತೆ ಚಂಡೀಗಢ ವ್ಯಕ್ತಿಯೊಬ್ಬ ಉದ್ಯೋಗ ಅರಸಿ ಸಿಕ್ಕಿ ಸಿಕ್ಕಿದ ವೆಬ್ ಪೋರ್ಟಲ್ ಗೆ ಬಯೋ ಡೇಟಾ ಕಳುಹಿಸಿದ್ದಾನೆ ಅದರಂತೆ ಒಂದು ದಿನ ಆತನ ಮೊಬೈಲ್ ಗೆ ಕರೆಯೊಂದು ಬಂದಿದೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ಈತನ ಹೆಸರನ್ನು ಹೇಳಿ ನೀವು ಉದ್ಯೋಗಕ್ಕಾಗಿ ತಮ್ಮ ಬಯೋಡೇಟಾ ಸಲ್ಲಿಸಿದ್ದೀರಿ ನಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗುವ ಉದ್ಯೋಗ ನಮ್ಮ ಕಂಪೆನಿಯಲ್ಲಿ ಇದೆ ಹಾಗಾಗಿ ನಾವು ನಡೆಸುವ ಸಂದರ್ಶನಕ್ಕೆ ನಿಮ್ಮ ಒಪ್ಪಿಗೆ ಇದ್ದರೆ ಶುಲ್ಕವಾಗಿ 6,500 ರೂ. ಪಾವತಿಸಬೇಕು ಎಂದು ಹೇಳಿದ್ದಾರೆ, ಯುವಕನ ಮನಸ್ಸಿನಲ್ಲಿ ಏನೋ ಒಂದು ಉದ್ಯೋಗ ಸಿಗುತ್ತದೆ ಎಂಬ ಆಸೆಯಲ್ಲಿ ಕಂಪೆನಿಯ ಹೆಸರಿನಲ್ಲಿ ಶುಲ್ಕವನ್ನು ಆನ್ ಲೈನ್ ಮೂಲಕ ಮಾಡಿದ್ದಾನೆ, ಇದಾದ ಬಳಿಕ ಕಡ್ಡಾಯ ಕೋರ್ಸ್, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಐಟಿ ತರಬೇತಿ ನೆಪದಲ್ಲಿ ಪ್ರತ್ಯೇಕವಾಗಿ ಲಕ್ಷಾಂತರ ಹಣ ಪಾವತಿಸುವಂತೆ ಹೇಳಿದ್ದಾರೆ. ಇಷ್ಟೆಲ್ಲಾ ಹಣ ಪಾವತಿ ಮಾಡಿದ ಬಳಿಕ ಆತ ತಾನು ಮೋಸ ಹೋಗಿರುವುದು ಗೊತ್ತಾಗಿದೆ ಆ ಬಳಿಕ ಯುವಕ ಪೊಲೀಸ್ ಠಾಣೆಗೆ ತೆರಳಿ ತಾನು ಮೋಸ ಹೋಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Kittur Chennamma; ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಡಿದ ವೀರರಾಣಿ ಚನ್ನಮ್ಮ

Advertisement

Udayavani is now on Telegram. Click here to join our channel and stay updated with the latest news.

Next