Advertisement

ಆನ್‌ಲೈನ್‌ನಲ್ಲಿ ಚಂದಮಾಮ

10:19 AM Dec 04, 2017 | |

ಚೆನ್ನೈ: ಎಳೆಯರ ಪಾಲಿಗೆ ಅಚ್ಚುಮೆಚ್ಚಿನ ಆಪ್ತನಾಗಿದ್ದ “ಚಂದಮಾಮ’ ಶೀಘ್ರದಲ್ಲೇ ಅಂತರ್ಜಾಲದಲ್ಲಿ ತನ್ನ ಬೆಳದಿಂಗಳನ್ನು ಚೆಲ್ಲಲಿದ್ದಾನೆ! ಹೌದು. 80 ಹಾಗೂ 90ರ ದಶಕಗಳಲ್ಲಿ ವಿದ್ಯಾರ್ಥಿಗಳನ್ನು ತನ್ನಲ್ಲಿನ ಆಕರ್ಷಕ ಕತೆಗಳ ಮೂಲಕ ಅಯಸ್ಕಾಂತದಂತೆ ಆಕರ್ಷಿ ಸಿದ್ದ “ಚಂದಮಾಮ’ದ ಎಲ್ಲ ಸಂಚಿಕೆಗಳು ಶೀಘ್ರ ದಲ್ಲೇ ಆನ್‌ಲೈನ್‌ನಲ್ಲಿ ದೊರಕಲಿವೆ. 

Advertisement

ಸದ್ಯಕ್ಕೆ  ತೆಲುಗು, ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್‌, ಸಂಸ್ಕೃತ, ಅಸ್ಸಾಮಿ, ಒರಿಯಾ, ಮರಾಠಿ, ಬೆಂಗಾಲಿ ಭಾಷೆಗಳ ಆರಂಭಿಕ ಸಂಚಿಕೆಯಿಂದ ಹಿಡಿದು 2006ರವರೆಗಿನ ಸಂಚಿಕೆಗಳು ಆನ್‌ಲೈನ್‌ನಲ್ಲಿ ಓದಲು ಸಿಗಲಿವೆ.  1947ರಲ್ಲಿ ತೆಲುಗಿನಲ್ಲಿ ತನ್ನ ಮೊದಲ ಸಂಚಿಕೆ ಹೊರತಂದಿದ್ದ ಚಂದಮಾಮ ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು, ತಮಿಳು, ಕನ್ನಡ ಸಹಿತ 12 ಭಾರತೀಯ ಭಾಷೆಗಳಲ್ಲಿ ಮುದ್ರಣ ಕಾಣಲಾರಂಭಿಸಿತ್ತು. ಅನಂತರ ಇದರ ಇಂಗ್ಲಿಷ್‌ ಆವೃತ್ತಿಯೂ ಬೆಳಕಿಗೆ ಬಂತು. ಆದರೆ, ಅನಂತರದ ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದಾಗಿ, ಜನಪ್ರಿಯತೆಯ ಬಾನಂಗಳದಲ್ಲಿ ಕರಗಿ ಹೋದ “ಚಂದ ಮಾಮ’ 2013ರ ಮಾರ್ಚ್‌ನಲ್ಲಿ ತನ್ನ ಕೊನೆಯ ಸಂಚಿಕೆ ಪ್ರಕಟಿಸಿ ನೇಪಥ್ಯಕ್ಕೆ ಸರಿಯಿತು. 

Advertisement

Udayavani is now on Telegram. Click here to join our channel and stay updated with the latest news.

Next