ಸಣ್ಣ ಗಾತ್ರದ ಗಂಟೆಯಿಂದ ಆರಂಭಿಸಿ ಭಾರೀ ತೂಕದ ಗಂಟೆಯವರೆಗೆ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಗಂಟೆಗಳನ್ನು ಹೊಂದಿರುವುದು ಚಂದಗುಳಿಯ ಗಣೇಶ ದೇವಾಲಯದ ವೈಶಿಷ್ಟé. ಈ ದೇವರಿಗೆ ರಾಜ್ಯದಲ್ಲಿ ಮಾತ್ರವಲ್ಲ, ಗೋವಾ-ಮಹಾರಾಷ್ಟ್ರಗಳಲ್ಲಿ ಕೂಡ ಸಾವಿರಾರು ಮಂದಿ ಭಕ್ತರಿದ್ದಾರೆ.
ಏಕದಂತ, ಗಣೇಶ, ಗಣಪತಿ, ವಕ್ರತುಂಡ ಎಂದೆಲ್ಲಾ ಕರೆಯುವ ವಿನಾಯಕನಿರುವ ಪವಿತ್ರ ಪಾವನ ಶ್ರೀಕ್ಷೇತ್ರವೇ ಈ ಚಂದಗುಳಿ. ಇಲ್ಲಿರುವ ಶ್ರೀ ಘಂಟೆ ಗಣಪತಿಯ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಭಕ್ತಿಯಿಂದ ಬೇಡಿ ಬರುವವರ ಇಷ್ಟಾರ್ಥಗಳನ್ನು ಪೂರೈಸುವ ವರಪ್ರದಾಯಕನಾಗಿ ತನ್ನ ಭಕ್ತರಿಗೆ ಸದಾ ಆಭಯ ಹಸ್ತ ನೀಡುವ ಈ ಗಣಪ, ಬರೀ ಘಂಟೆಗಳಿಗೆ ಒಲಿಯುವವನು ಎಂದರೆ ನೀವು ನಂಬಲೇ ಬೇಕು.
ನೌಕರಿ ಸಿಗಲಿಲ್ಲವೇ? ಮದುವೆಯ ಸಮಸ್ಯೆಯೇ, ಮಕ್ಕಳಾಗಲಿಲ್ಲವೆಂಬ ಚಿಂತೆಯೆ? ಬಿಜಿನೆಸ್ ಕೈಹಿಡಿಯಲಿಲ್ಲವೆ? ಹೀಗೆ ತನ್ನ ಭಕ್ತರ ಸಮಸ್ಯೆಯೇನೇ ಇರಲಿ ಅದನ್ನು ಪರಿಹರಿಸಲು ಈ ಗಣಪ ಕೇಳುವುದು ಬರೀ ಘಂಟೆ ಅಷ್ಟೆ. ನಿಮ್ಮ ಶಕಾöನುಸಾರ ಯಾವುದೇ ಗಾತ್ರದ ಘಂಟೆಯನ್ನು ಈ ದೇವರಿಗೆ ಹರಕೆ ಮೂಲಕ ತೀರಿಸಿದರೆ ಸಾಕು: ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಭಕ್ತಾದಿಗಳು ನಂಬಿದ್ದಾರೆ.
ಅಪಾರ ಭಕ್ತರನ್ನು ಹೊಂದಿರುವ ಈ ಗಣಪ, ಹಚ್ಚ ಹಸಿರಿನಿಂದ ಕೂಡಿರುವ ಸುಂದರ ಪ್ರಕೃತಿಯ ಮಧ್ಯೆ ನೆಲೆನಿಂತಿ¨ªಾನೆ. ಈ ದೇವಾಲಯದ ಸುತ್ತಲೂ ಎಲ್ಲಿ ನೋಡಿದರಲ್ಲಿ ಭಕ್ತಾದಿಗಳು ಸಲ್ಲಿಸಿ ಹೋದ ಘಂಟೆಗಳ ದೊಡ್ಡ ಸಾಲೇ ಕಾಣುತ್ತದೆ. ಅತಿ ಚಿಕ್ಕ ಗಾತ್ರದ ಘಂಟೆಗಳಿಂದ ಹಿಡಿದು ದೊಡ್ಡ ದೊಡ್ಡ ಘಂಟೆಗಳು ಇಲ್ಲುಂಟು. ಪ್ರವೇಶ ದ್ವಾರದಲ್ಲೂ ಘಂಟೆ, ಕಿಟಕಿಗಳ ಮೇಲ್ಭಾಗಗಳಿಗೂ ಘಂಟೆ, ಅಷ್ಟೇ ಅಲ್ಲ, ದೇವಾಲಯದ ಛಾವಣಿಗಳಲ್ಲೂ ಸಾಲುಸಾಲು ಘಂಟೆಗಳು, ಗೋಪುರದ ಸುತ್ತಲೂ ಘಂಟೆಗಳು. ಹೀಗೆ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ವಿವಿಧ ಗಾತ್ರದ ಘಂಟೆಗಳ ಸಾಲನ್ನು ನೋಡುವುದೇ ಒಂದು ವಿಶೇಷ ಅನುಭವ. ಬಹಳಷ್ಟು ಜನ ಅವರ ಹರಕೆ ಪೂರೈಸಿದ ನಂತರ ಅರ್ಪಿಸಿದ ಘಂಟೆಗಳಿವು.
ಈ ಘಂಟೆ ಗಣಪ ಕರ್ನಾಟಕದಲ್ಲಿ ಮಾತ್ರವಲ್ಲ, ದೂರ ದೂರದ ರಾಜ್ಯಗಳಲ್ಲೂ ಅಪಾರ ಭಕ್ತರನ್ನು ಹೊಂದಿ¨ªಾನೆ. ಪ್ರತಿ ದಿನವೂ ವಿಶೇಷ ಪೂಜೆ ನಡೆಯುಲ ಈ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ, ವಿನಾಯಕ ಚತುರ್ಥಿಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲದೇ, ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು, ಮದುವೆ, ಸಮಾರಂಭಗಳು ಕೂಡ ನಡೆಯುತ್ತವೆ. ಈ ಗಣಪನ ಮಹಿಮೆ ಅರಿತ ನೆರೆಯ ಗೋವಾ, ಮಹಾರಾಷ್ಟ್ರಗಳಿಂದ ಕೂಡ ಪ್ರತಿನಿತ್ಯವೂ ಸಾಕಷ್ಟು ಭಕ್ತಾದಿಗಳು ಈ ಕ್ಷೇತ್ರಕ್ಕೆ ಬರುತ್ತಿರುತ್ತಾರೆ.
ತಲುಪುವ ಮಾರ್ಗ : ಯಲ್ಲಾಪುರದಿಂದ ಕೇವಲ 17 ಕಿ.ಮೀ ದೂರದಲ್ಲಿ ಚಂದಗುಳಿ ದೇವಸ್ಥಾನವಿದೆ. ಇಲ್ಲಿಗೆ ತಲುಪಲು ಮಾಗೋಡು ಜಲಪಾತದ ಮಾರ್ಗದಲ್ಲಿ ಬರಬಹುದು. ಅಲ್ಲಿಗೂ ಕೂಡ ಸಾಕಷ್ಟು ಬಸ್ಸುಗಳು ಇವೆ.
ಆಶಾ ಎಸ್.ಕುಲಕರ್ಣಿ