Advertisement
ಸಾಂಪ್ರದಾಯಿಕ ಉಡುಗೆಗಳ ಜೊತೆ ಚೆನ್ನಾಗಿ ಕಾಣುವ ಕಿವಿಯೋಲೆಗಳ ಪೈಕಿ ಅಫ್ಘಾನ್ ಚಾಂದ್ ಬಾಲಿಯೂ ಒಂದು. ಅಫ್ಘಾನ್ ಚಾಂದ್ ಬಾಲಿ ಎಂದರೆ ಅಫ್ಘಾನಿ ಟ್ರೈಬಲ…(ಬುಡಕಟ್ಟು) ಕಿವಿಯೋಲೆಗಳು. ಚಂದಿರನ ಆಕಾರದಲ್ಲಿ ಇರುವ ಕಾರಣ ಇವುಗಳನ್ನು ಚಾಂದ್ ಬಾಲಿ ಎಂದು ಕರೆಯಲಾಗುತ್ತದೆ. ಬಾಲಿ ಎಂದರೆ ಕಿವಿಯೋಲೆ.
ಇವುಗಳನ್ನು ಆಕ್ಸೆ„ಡೆಡ್ ಜರ್ಮನ್ ಬೆಳ್ಳಿ ಮತ್ತು ಬಣ್ಣದ ಗಾಜಿನಿಂದ ತಯಾರಿಸಲಾಗುತ್ತದೆ. ಇವು ಒಂದರಂತೆ ಇನ್ನೊಂದು ಇರುವುದು ಕಡಿಮೆ, ಇವುಗಳ ವಿನ್ಯಾಸಗಳು ಬದಲಾಗುತ್ತವೆ. ಏಕೆಂದರೆ ಇವುಗಳನ್ನು ಕೈಯಿಂದ ಮಾಡಲಾಗತ್ತದೆ (ಕರಕುಶಲ ವಸ್ತುಗಳು). ಇವುಗಳು ದೊಡ್ಡ ಗಾತ್ರದ್ದಾಗಿದ್ದರೂ, ಹಗುರವಾಗಿರುತ್ತವೆ. ಇವುಗಳಲ್ಲಿ ಮಣಿ ಮತ್ತು ಗೆಜ್ಜೆಯಂಥ ವಸ್ತುಗಳನ್ನು ಬಳಸಲಾಗುತ್ತದೆ. ಹಾಗಾಗಿ ಇವುಗಳು ಗೆಜ್ಜೆಯಂತೆ ಸದ್ದು ಕೂಡ ಮಾಡುತ್ತವೆ. ಚೈನೀಸ್ ಕಾಲರ್, ಕೋಲ್ಡ… ಶೋಲ್ಡರ್, ಬೋಟ್ ನೆಕ್ ಅಥವಾ ಸ್ಲಿàವ್‌ಲೆಸ್… ಇಂಥ ಯಾವುದೇ ಉಡುಪಾದರೂ ಅಫ್ಘಾನ್ ಚಾಂದ್ ಬಾಲಿ ಒಪ್ಪುತ್ತದೆ. ಸಿನಿಮಾ ನಟಿಯರು ಚಿತ್ರಗಳಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲೂ ಈ ಕಿವಿಯೋಲೆಗಳನ್ನು ತೊಟ್ಟು ಮಹಿಳೆಯರಲ್ಲಿ ಅಫ್ಘಾನ್ ಚಾಂದ್ ಬಾಲಿ ಬಗ್ಗೆ ಒಲವು ಹುಟ್ಟಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಧಾರಾವಾಹಿಗಳಲ್ಲೂ ನಟಿಯರು ಈ ಕಿವಿಯೋಲೆಗಳನ್ನು ತೊಟ್ಟಿರುವುದನ್ನು ನೀವು ಗಮನಿಸಿರುತ್ತೀರಿ. ಓಲೆಗಳಲ್ಲಿ ಉಣ್ಣೆಯ ಕುಸುರಿ
ಇದೀಗ ಬಂದಿರುವ ಟ್ರೆಂಡ್ ಎಂದರೆ ಈ ಅಫ್ಘಾನ್ ಚಾಂದ್ ಬಾಲಿಗಳಲ್ಲಿ ಟ್ಯಾಸೇಲ್ಸ… ಅಂದರೆ ಉಣ್ಣೆಯಿಂದ ಮಾಡಲಾದ ದಾರಗಳ ಗೊಂಚಲನ್ನು ಬಳಸಲಾಗುತ್ತಿದೆ. ಹಾಗಾಗಿ ತಮ್ಮ ಉಡುಪಿಗೆ ಮ್ಯಾಚ್ ಆಗುವ ಬಣ್ಣದ ಅಫ್ಘಾನ್ ಕಿವಿಯೋಲೆಗಳನ್ನು ತೊಡಬಹುದಾಗಿದೆ. ಇವುಗಳು ಕಾಲೇಜು ವಿದ್ಯಾರ್ಥಿನಿಯರ ಸದ್ಯದ ಹಾಟ್ ಫೇವರಿಟ್. ಈ ಕಿವಿಯೋಲೆಗಳು ಸಾಮಾನ್ಯವಾಗಿ ಎಲ್ಲಾ ಫ್ಯಾನ್ಸಿ ಅಂಗಡಿಗಳಲ್ಲೂ ಲಭ್ಯ. ಇವುಗಳನ್ನು ಆನ್‌ಲೈನ್ ಮೂಲಕವೂ ಖರೀದಿಸಬಹುದು. ನಿಮ್ಮ ಬಳಿ ಟ್ಯಾಸೆಲ್ಸ… ಇರುವ ಅಫ್ಘಾನ್ ಚಾಂದ್ ಬಾಲಿ ಇಲ್ಲದೆ ಇದ್ದರೆ, ಚಿಂತಿಸಬೇಡಿ. ಟ್ಯಾಸೆಲ…ಗಳನ್ನು ನೀವೇ ಮಾಡಬಹುದು. ನೀಲಿ, ಹಸಿರು, ಕೆಂಪು ಮತ್ತು ಹಳದಿ ಅಥವಾ ಕೇಸರಿ ಬಣ್ಣದ ಟ್ಯಾಸೆಲ…ಗಳ ಗೊಂಚಲನ್ನು ತಯಾರಿಸಿ ಇಟ್ಟುಕೊಂಡರೆ ನೀವು ಉಡುವ ಬಟ್ಟೆಯ ಬಣ್ಣಕ್ಕೆ ಹೋಲುವ ಟ್ಯಾಸೆಲ…ಗಳ ಗೊಂಚಲನ್ನು ಬೆಳ್ಳಿಯ ಅಫ್ಘಾನ್ ಚಾಂದ್ ಬಾಲಿಗೆ ಸಿಕ್ಕಿಸಿ ತೊಟ್ಟು ನೋಡಿ. ಇದೆ ರೀತಿ ಬೇರೆ ಬೇರೆ ಬಣ್ಣದ ಉಡುಗೆಯ ಜೊತೆ ಆಯಾ ಬಣ್ಣದ ಟ್ಯಾಸೆಲ…ಗಳ ಗೊಂಚಲನ್ನು ಅದೇ ಬೆಳ್ಳಿಯ ಕಿವಿಯೋಲೆಗೆ ಸಿಕ್ಕಿಸಿ ತೊಟ್ಟರೆ ಪ್ರತಿ ಬಾರಿಯೂ ಹೊಸ ಕಿವಿಯೋಲೆ ತೊಟ್ಟಂತೆ ಕಾಣುತ್ತದೆ!
Related Articles
ಅರ್ಧ ಚಂದ್ರ, ಪೂರ್ಣ ಚಂದ್ರ ಅಲ್ಲದೆ ಇವುಗಳಲ್ಲಿ ಕಮಲ, ಮತ್ಸ್ಯ (ಮೀನು), ನಕ್ಷತ್ರ, ನಾಣ್ಯ ಹಾಗು ಇನ್ನೂ ಅನೇಕ ಆಕೃತಿಗಳನ್ನು ಅಳವಡಿಸಲಾಗುತ್ತದೆ. ಕೇವಲ ವೃತ್ತಾಕಾರಕ್ಕೆ ಸೀಮಿತವಾಗದೆ ತ್ರಿಕೋನ, ಚೌಕ, ಪಂಚಕೋನಾಕೃತಿ, ಷಡು½ಜಾಕೃತಿ, ಅಷ್ಟಭುಜ ಆಕಾರದಲ್ಲೂ ವಿನ್ಯಾಸಕರು ಅಫ್ಘಾನ್ ಕಿವಿಯೋಲೆಗಳನ್ನು ತಯಾರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಇಂಥ ಚಿತ್ರ- ವಿಚಿತ್ರ ಆಕಾರದ ಅಫ್ಘಾನ್ ಕಿವಿಯೋಲೆಗಳಿಗೆ ಬಹು ಬೇಡಿಕೆಯೂ ಇದೆ!
Advertisement
ಬಣ್ಣ ಬದಲಾಯಿಸಬಹುದುನಿಮ್ಮ ಬಳಿ ಇಂಥ ಅಫ್ಘಾನ್ ಕಿವಿಯೋಲೆಗಳು ಇದ್ದರೆ ಮತ್ತು ಇವುಗಳ ಬಣ್ಣದಿಂದ ನಿಮಗೆ ಬೋರ್ ಆಗಿದ್ದರೆ, ನೈಲ… ಪಾಲಿಶ್ ಬಳಸಿ ಇವುಗಳ ಮೇಲೆ ಬಿಡಿಸಿದ್ದ ರಂಗೋಲಿಗೆ ಹೊಸ ಮೆರುಗು ನೀಡಬಹುದು! ಬಣ್ಣದ ಗಾಜಿನಿಂದ ಇವುಗಳನ್ನು ಮಾಡಲಾಗಿರುವುದರಿಂದ ಇವುಗಳ ನೈಜ ಬಣ್ಣಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನೈಲ… ಪಾಲಿಶ್ ರಿಮೂವರ್ ಬಳಸಿ ಬಣ್ಣ ಒರೆಸಿ ತೆಗೆದು, ಬೇರೆ ಬಣ್ಣ ಹಚ್ಚಿ, ಮತ್ತೆ ಆ ಕಿವಿಯೋಲೆಗಳಿಗೆ ಇನ್ನೊಂದು ಹೊಸ ಲುಕ್ ನೀಡಬಹುದು. ನಿಮ್ಮ ಬಳಿ ಇರುವ ಅಫ್ಘಾನ್ ಕಿವಿಯೋಲೆಗಳಲ್ಲಿ ಬಣ್ಣದ ಗಾಜಿನ ಚೂರುಗಳನ್ನು ಬಳಸಿಲ್ಲ ಎಂದಾದರೆ ನೈಲ… ಪಾಲಿಶ್ ಅಥವಾ ರಿಮೂವರ್ ಬಳಕೆಯ ಬಗ್ಗೆ ಎಚ್ಚರವಹಿಸಿ. ಇದ್ದ ಬಣ್ಣವೂ ಇಲ್ಲದಂತೆ ಆಗಬಹುದು! ಕಿವಿಯೋಲೆಗಳು ಕಪ್ಪಾಗದೇ ಇರುವಂತೆ ಕಾಪಾಡಿಕೊಳ್ಳಿ. ಬೆಳ್ಳಿ ಕಪ್ಪಾದರೆ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ. ಫಳ ಫಳ ಹೊಳೆಯುತ್ತಿದ್ದರಷ್ಟೇ ಚೆನ್ನ. – ಅದಿತಿಮಾನಸ. ಟಿ. ಎಸ್.