Advertisement

7 ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣ?

02:45 AM Jul 22, 2020 | Hari Prasad |

ಹೊಸದಿಲ್ಲಿ: ದೇಶದಲ್ಲಿರುವ ಸರಕಾರಿ ಬ್ಯಾಂಕ್‌ಗಳ ಸಂಖ್ಯೆಯನ್ನು ಕೇವಲ 5ಕ್ಕಿಳಿಸಲು ಕೇಂದ್ರ ಚಿಂತಿಸುತ್ತಿದೆ.

Advertisement

ಉಳಿದ ಬ್ಯಾಂಕ್‌ಗಳನ್ನು ಖಾಸಗೀ ಕರಣ ಮಾಡಲು ರೂಪು ರೇಷೆಗಳು ಸಿದ್ಧವಾಗುತ್ತಿವೆ ಎಂದು ಮೂಲಗಳು ಹೇಳಿವೆ.

ಸದ್ಯ ದೇಶದಲ್ಲಿ 12 ಸರಕಾರಿ ಬ್ಯಾಂಕ್‌ಗಳಿವೆ. ಈ ಪೈಕಿ 5 ಬ್ಯಾಂಕ್‌ಗಳನ್ನು ತನ್ನ ಅಧೀನದಲ್ಲೇ ಉಳಿಸಿ­ಕೊಳ್ಳುತ್ತದೆ ಎಂದುಕೊಂಡರೆ, ಉಳಿದ 7 ಬ್ಯಾಂಕ್‌ಗಳು ಖಾಸಗಿ ತೆಕ್ಕೆಗೆ ಬೀಳಲಿವೆ ಎನ್ನಬಹುದು.

ಗಮನಾರ್ಹ ಸಂಗತಿಯೆಂದರೆ ಭವಿಷ್ಯದಲ್ಲಿ ಸರ್ಕಾರಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯುವುದಿಲ್ಲ ಎಂದೂ ಹೇಳಲಾಗಿದೆ.

ಆದರೆ ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಕೆಲವು ಸರ್ಕಾರಿ ಸಮಿತಿಗಳು ಹಾಗೂ ದೇಶದ ಪರಮೋಚ್ಚ ಬ್ಯಾಂಕ್‌ ಆರ್‌ಬಿಐ, ಈಗಾಗಲೇ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬೇಕೆಂದು ಶಿಫಾರಸು ಮಾಡಿವೆ.

ಸದ್ಯ ಕೋವಿಡ್ 19 ಕಾರಣದಿಂದ ಆರ್ಥಿಕ ಕುಸಿತ ಉಂಟಾಗಿರುವುದರಿಂದ, ಕೆಲವು ಸಂಸ್ಥೆಗಳ ಷೇರನ್ನು ಮಾರಿ ಹಣ ಸಂಗ್ರಹಿಸುವುದು ಸರಕಾರದ ಉದ್ದೇಶ ಎನ್ನಲಾಗಿದೆ.

ಮೊದಲ ಹಂತವಾಗಿ ಬ್ಯಾಂಕ್‌ ಆಫ್ ಇಂಡಿಯಾ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಯುಕೊ ಬ್ಯಾಂಕ್‌, ಬ್ಯಾಂಕ್‌ ಆಫ್ ಮಹಾರಾಷ್ಟ್ರ, ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ಗಳ ಬಹುತೇಕ ಷೇರುಗಳನ್ನು ಮಾರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next