Advertisement

ಈ ಕೋವಿಡ್ ಇನ್ನು ಮುಂದೆ ಪ್ರತೀ ವರ್ಷದ ಅತಿಥಿಯಾಗಬಹುದು, ಎಚ್ಚರ!

06:05 PM Apr 30, 2020 | Hari Prasad |

ಈಗ ವಿಶ್ವನ್ನೇ ಕಾಡುತ್ತಿರುವ ಕೋವಿಡ್ 19 ವೈರಸ್‌ ಸೋಂಕು ನಾವು ಆಚರಿಸುವ ಹಬ್ಬಗಳಂತೆ ಪ್ರತಿ ವರ್ಷವೂ ಬರಬಹುದು! ಈ ಮಾರಣಾಂತಿಕ ವೈರಾಣು ಜನ್ಮತಳೆದ ಚೀನದ ತಜ್ಞರು ಈ ರೀತಿ ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ಈ ವೈರಸ್‌ ಬುಡ ಸಮೇತ ನಿರ್ಮೂಲನೆಯಾಗುವ ಯಾವುದೇ ಲಕ್ಷಣಗಳಿಲ್ಲ. ಹೀಗಾಗಿ ಪ್ರತೀ ವರ್ಷ ಕಾಣಿಸಿಕೊಳ್ಳುವ ಮಲೇರಿಯಾ, ಡೆಂಗ್ಯೂ ರೀತಿಯೇ ಕೋವಿಡ್ ಕೂಡ ಸಾಂಕ್ರಾಮಿಕ ಸೋಂಕಾಗಿ ಮರುಕಳಿಸುತ್ತಿರಲೇಬಹುದು.

ಹಾಗೆಯೇ, ಯಾವುದೇ ಲಕ್ಷಣಗಳನ್ನು ಹೊರ ಹಾಕದೆ ವೈರಸ್‌ ವ್ಯಕ್ತಿಯ ದೇಹದಲ್ಲಿ ಅಡಗಿದ್ದರೆ, ಆ ವ್ಯಕ್ತಿ ತನಗೆ ಅರಿವಿಲ್ಲದೆ ಅದನ್ನು ಇತರರಿಗೂ ಪಸರಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಸೋಂಕು ಹರಡುವುದನ್ನು ತಡೆಗಟ್ಟುವುದು ಕೂಡ ಕಷ್ಟ ಸಾಧ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಾರ್ಸ್‌ – ಕೋವ್‌-2 ವೈರಸ್‌ ಒಂದು ಸೀಸನಲ್‌ ಕಾಯಿಲೆ ಆಗಬಹುದು ಎಂದು ಜಗತ್ತಿನ ವಿವಿಧ ದೇಶಗಳ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next