Advertisement
ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಪ್ರಶ್ನಿಸಿದ ಆಯನೂರು, ಈವರೆಗೂ ಯಾಕೆ ಸಭಾಪತಿ ಚುನಾವಣೆ ನಡೆಸಿಲ್ಲ ಎಂದರು. ಅಧಿವೇಶನದೊಳಗೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು.
Related Articles
Advertisement
ಹಂಗಾಮಿ ಸಭಾಪತಿಯವರಿಗೆ ಕಲಾಪ ನಡೆಸುವ ಅಧಿಕಾರವಿಲ್ಲ ಎಂಬ ಬಿಜೆಪಿಯ ಪ್ರಶ್ನೆ ಕಲಾಪದಲ್ಲಿ ಕೆಲಕಾಲ ಗಂಭೀರ ಚರ್ಚೆಗೆ ಕಾರಣವಾಯಿತು. ಬಳಿಕ ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸಂವಿಧಾನ ಹಾಗೂ ರಾಜ್ಯಪಾಲರ ಆದೇಶದ ಪ್ರಕಾರ, ಸಭಾಪತಿಯಾಗಿರುವ ಹೊರಟ್ಟಿಯವರಿಗೆ ಸದನ ನಡೆಸುವ ಅಧಿಕಾರವಿದೆ. ರಾಜ್ಯಪಾಲರ ಆದೇಶದಲ್ಲಿ ಹಂಗಾಮಿ ಪದ ಬಳಸಿಲ್ಲ. ಅಲ್ಲದೇ ಚುನಾವಣೆಯಾಗುವವರೆಗೂ ಹೊರಟ್ಟಿಯವರೇ ಸಭಾಪತಿಯಾಗಿ ಮುಂದುವರಿಯಲಿದ್ದಾರೆ.ಕೂಡಲೇ ಸಭಾಪತಿ ಚುನಾವಣೆ ನಡೆಸುವುದಾಗಿಯೂ ಸ್ಪಷ್ಟನೆ ನೀಡಿದರು.
ಹೊಂದಾಣಿಕೆ ಇಲ್ಲವೋ ಹೇಗೆ? ತೇಜಸ್ವನಿ ರಮೇಶ್
ಸರ್ಕಾರಕ್ಕೆ ಸಭಾಪತಿ ಆಯ್ಕೆ ಬಗ್ಗೆ ಇಚ್ಛಾ ಶಕ್ತಿ ಇಲ್ಲವೋ ಅಥವಾ ಹೊಂದಾಣಿಕೆ ಇಲ್ಲವೋ ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್ ಪ್ರಶ್ನಿಸಿದರು. ಹಿರಿಯರಾದ ಹೊರಟ್ಟಿಯವರೇ ನೀವು ಇಲ್ಲಿ ಕುಳಿತು ಮಾತನಾಡಬೇಕಿತ್ತು. ಹೀಗಾಗಿ ಪೀಠವನ್ನು ಹಂಗಾಮಿ ಅನ್ನೋದರಿಂದ ತೆರವುಗೊಳಿಸಿ ಎಂದು ಹೇಳಿದರು.