Advertisement

ಜೀವನ ಪರಿವರ್ತನೆಗೆ ಅವಕಾಶ: ಡಾ|ಹೆಗ್ಗಡೆ

12:26 AM Apr 28, 2019 | Team Udayavani |

ಬೆಳ್ತಂಗಡಿ: ಮದ್ಯವರ್ಜನ ಶಿಬಿರ ಎನ್ನುವುದು ವ್ಯಸನಿಗಳ ಜೀವನ ಪರಿವರ್ತನೆಗೆ ಉತ್ತಮ ಅವಕಾಶವಾಗಿದ್ದು, ತಮ್ಮ ಬದುಕಿನಲ್ಲಿ ಹೊಸ ಯೋಗ ಬಂದಿದೆ ಎಂಬ ಕಲ್ಪನೆಯ ಮೂಲಕ ಶಿಬಿರಾರ್ಥಿಗಳು ದುಶ್ಚಟಮುಕ್ತರಾಗಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

ಅವರು ಶುಕ್ರವಾರ ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಹಾಗೂ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಿತ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ 1,330ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಮಡಂತ್ಯಾರು ಚರ್ಚ್‌ನ ಧರ್ಮ ಗುರು ವಂ| ಬಾಸಿಲ್‌ ವಾಸ್‌ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ ಮದ್ಯ ವ್ಯವಸನಿ ಗಳು ದೃಢ ನಿರ್ಧಾರ ಕೈಗೊಂಡು ವ್ಯಸನ ಮುಕ್ತರಾದರೆ ಅವರಿಗೆ ಇದರಿಂದ ಹೊಸ ಜೀವನ ಪ್ರಾಪ್ತವಾಗುತ್ತದೆ. ಡಾ| ಹೆಗ್ಗಡೆ ಯವರ ಕಲ್ಪನೆಯ ಯಶಸ್ಸಿಗೆ ಅವರ ತಂಡದ ಕಾರ್ಯ ಶ್ಲಾಘನೀಯ ಎಂದರು.

ಧರ್ಮಸ್ಥಳ ಕ್ಷೇತ್ರದ ಶ್ರದ್ಧಾ ಅಮಿತ್‌, ಶೃತಾ, ಮಾನ್ಯಾ, ಸೇಕ್ರೆಡ್‌ ಹಾರ್ಟ್‌ ಪ.ಪೂ. ಕಾಲೇಜು ಪ್ರಾಂಶುಪಾಲ ವಂ| ಜೆರೋಮ್‌ ಡಿ’ಸೋಜಾ, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್‌ ಹೊನ್ನವಳ್ಳಿ, ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್‌, ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಸ್‌, ಪ್ರಗತಿಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ, ಶಾರದಾ ರೈ, ಕಿಶೋರ್‌ಕುಮಾರ್‌ ಹೆಗ್ಡೆ, ಅಡೂರು ವೆಂಕಟ್ರಾಯ, ಅಬ್ದುಲ್‌ ರಹಿಮಾನ್‌ ಉಪಸ್ಥಿತರಿದ್ದರು.

ಶಿಬಿರಾರ್ಥಿ ಉಮೇಶ್‌ ತಣ್ಣೀರುಪಂತ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾಧಿಕಾರಿ ಮಾಧವ ಪ್ರಸ್ತಾವಿಸಿದರು. ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿ, ತಾ| ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಮೇಲ್ವಿಚಾರಕ ಸಚಿನ್‌ ಕಾರ್ಯಕ್ರಮ ನಿರೂಪಿಸಿದರು.

ಮನಸ್ಸು ಪರಿವರ್ತನೆ
ಮನುಷ್ಯ ತಾನು ಮಾಡುವ ತಪ್ಪಿನಿಂದ ಆಯುಷ್ಯ ಕಳೆದುಕೊಳ್ಳುತ್ತಿದ್ದು, ವ್ಯಸನಿಗಳ ಭವಿಷ್ಯದಲ್ಲಿ ಹೊಸ ಬದುಕು ಬರಲಿದೆ ಎಂದು ಬರೆದಿಟ್ಟ ಕಾರಣದಿಂದಲೇ ಇಂತಹ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ. ಇಲ್ಲಿ ಅವರ ಮನಸ್ಸನ್ನು ಪರಿವರ್ತನೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ದುಡಿಯುವವರು ಇನ್ನೊಬ್ಬರ ಬದುಕಿನಲ್ಲಿ ಸಂತೋಷವನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next