Advertisement
2020ರ ಸೆ.19, 20 ರಂದು ಸುರಿದ ಅಕಾಲಿಕ ಮಳೆಗೆ ಇಡೀ ನಗರವೇ ತತ್ತರಿಸಿ ಹೋಗಿತ್ತು. ಚರಂಡಿ, ತೋಡು, ನದಿ ಗಳೆಲ್ಲವೂ ಉಕ್ಕಿ ಹರಿದು ಮನೆ, ಮಠ, ಅಂಗಡಿ, ಮುಂಗಟ್ಟು ಮುಳುಗಿತ್ತು. ಈಗಲೂ ಅದೇ ಹಳೆ ಕಾಲದ ತೋಡು ಸ್ವತ್ಛಗೊಳಿಸುವ ಕೆಲಸ ಮುಂದು ವರಿಸಿಕೊಂಡು ಹೋಗಲಾಗುತ್ತಿದೆ.
Related Articles
Advertisement
ಕಣ್ಮರೆಯಾಗಿರುವ ಸಂಪರ್ಕ, ಅಡ್ಡ ತೋಡುಗಳ ಮೂಲ ಪತ್ತೆ ಮಾಡಬೇಕು. ಸರ್ವೇಯರ್ ಮೂಲಕ ಮೊದಲು ಎಲ್ಲೆಲ್ಲಿ, ಎಷ್ಟು ತೋಡುಗಳಿದ್ದವು ಎಂಬುದು ತಿಳಿಯ ಬೇಕು. ನುರಿತ ಎಂಜಿನಿಯರ್‌ಗಳು, ಭೂಗರ್ಭ ಶಾಸ್ತ್ರಜ್ಞರು, ಪ್ರವಾಹ ನಿಯಂತ್ರಣ ವಿಶ್ಲೇಷಕರ ಸಮಿತಿ ರಚಿಸಿ ಸೂಕ್ತ ವರದಿ ಪಡೆದು ನೆರೆಯಿಂದ ನಗರವನ್ನು ಪಾರು ಮಾಡುವ ಬಗ್ಗೆ ಯೋಜನೆ ರೂಪಿಸಬೇಕಾಗಿದೆ.
ನೀರು ಹರಿದು ಹೋಗಲು ಜಾಗ ಸಾಲದೆ ನೆರೆ ಸೃಷ್ಟಿ
ಅಡ್ಡ ತೋಡುಗಳಿಗೆ ತಡೆ ಕೃತಕ ನೆರೆಗೆ ಕಾರಣ ನೆರೆ ಸಂಭವಿಸಿದಲ್ಲಿ ನದಿ ಪಾತ್ರ, ತೋಡುಗಳಿಂದ ನೀರು ಉಕ್ಕಿದರೆ ಮತ್ತೆ ಮಳೆ ಕಡಿಮೆಯಾದೊಡನೆ ಇಳಿದು ನದಿಗೆ ಸೇರಬೇಕು. ಇಲ್ಲಿ ಹೀಗಾಗುತ್ತಿಲ್ಲ. ಕೃಷಿ ಭೂಮಿ ಮಣ್ಣು ಹಾಕಿ ಏರಿಸಲಾಗಿದೆ. ಈ ಹಿಂದಿನ ನೈಸರ್ಗಿಕ ಮಳೆ ತೋಡುಗಳು ಈಗ ಇಲ್ಲ. ನೀರು ವಾಪಸು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಕಲ್ಲು, ಕಾಂಕ್ರೀಟ್ ಕಂಪೌಂಡ್ ಗಳನ್ನು ಕಟ್ಟಲಾಗಿದೆ. ಮಳೆಯಲ್ಲಿ ಇಂದ್ರಾಣಿ ನದಿ ಕಾಂಕ್ರೀಟ್‌ನ ಚೌಕಟ್ಟಿನಲ್ಲಿ ಇಕ್ಕಟ್ಟಾಗಿ ಹರಿಯುತ್ತದೆ. ಜಾಗ ಸಾಲದೇ ಸುತ್ತಮುತ್ತಲು ನೆರೆ ಸೃಷ್ಟಿಸುತ್ತದೆ. ಸದ್ಯಕ್ಕೆ ಹೀಗಿರುವ ತೋಡು, ಇಂದ್ರಾಣಿ ನದಿಯನ್ನು ಹೂಳು ತೆಗೆದು ಸ್ವಚ್ಛ ವಾಗಿಸಬೇಕು. -ಡಾ| ಉದಯ ಶಂಕರ್ ಭೂಗರ್ಭ ಶಾಸ್ತ್ರಜ್ಞ, ಎಂಐಟಿ, ಮಣಿಪಾಲ.
ಅಡ್ಡ ತೋಡುಗಳಿಗೆ ತಡೆ ಕೃತಕ ನೆರೆಗೆ ಕಾರಣ
ಕಳೆದ 22 ವರ್ಷಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುವುದು ಶೇ. 6 ಮಾತ್ರ. ಒಂದು ಸಣ್ಣ ಮಳೆ ಬಂದರೂ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದೆ. ಇಲ್ಲಿ ಬೆಂಗಳೂರಿನ ಮಾದರಿಯಲ್ಲಿ ರಾಜ ಕಾಲುವೆ ವ್ಯವಸ್ಥೆ ಇಲ್ಲ. ಇಂದ್ರಾಣಿ ನದಿಯಲ್ಲೆ ಮಳೆ ನೀರು ಹರಿದು ಸಮುದ್ರ ಸೇರಬೇಕು. ಇಂದ್ರಾಣಿ ನದಿ ಉಕ್ಕಿ ಹರಿದು ಕೆಲವೆಡೇ ನೆರೆ ಸೃಷ್ಟಿಸುತ್ತದೆ. ಹಿಂದಿನ ಕಾಲದ ಅಡ್ಡ ತೋಡುಗಳಿಗೆ ತಡೆಯಾಗಿರುವ ಕಾರಣ ಇಲ್ಲಿ ಕೃತಕ ನೆರೆ ಸಂಭವಿಸುತ್ತಿದೆ. ಈ ಮಳೆ ನೀರು ತೋಡುಗಳನ್ನು ಸರಿಪಡಿಸುವ ಕೆಲಸವಾಗಬೇಕು. ಇದಕ್ಕೊಂದು ವೈಜ್ಞಾನಿಕವಾಗಿ ದೂರದೃಷ್ಟಿ ಯೋಜನೆ ಅಗತ್ಯವಿದೆ. – ರಾಘವೇಂದ್ರ ಕಿಣಿ, ಸಿವಿಲ್ ಎಂಜಿನಿಯರ್