Advertisement
ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ ಎಂಬುದಾಗಿ ಭಾರ ತೀಯ ಹವಾಮಾನ ಇಲಾಖೆ (ಐಎಂಡಿ)ಯ ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈ ತಿಂಗಳಿಡೀ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಮುನ್ಸೂಚನೆಗೆ ಪೂರಕ ಎಂಬಂತೆ ರವಿವಾರ ಸಂಜೆಯ ಬಳಿಕ ಕರಾವಳಿಯಾದ್ಯಂತ ಮಳೆ ಚುರುಕಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿರುವುದು ಭರವಸೆ ಮೂಡಿಸಿದೆ. ವೈಜ್ಞಾ ನಿಕ ಹವಾಮಾನ ಮುನ್ಸೂಚನೆಗೆ ಪೂರಕವಾಗಿ ಜು. 6ರಂದು ಇನ್ನೊಂದು ಮಹಾಮಳೆ ನಕ್ಷತ್ರ ಪುನರ್ವಸು ಕೂಡ ಆರಂಭಗೊಳ್ಳಲಿದೆ.