Advertisement

ಪ್ರತಿಭಾ ಅನಾವರಣಕ್ಕೆ ಅವಕಾಶ: ಭಾಸ್ಕರ್‌ ಜೋಯಿಸ್‌

10:36 PM Jul 17, 2017 | Team Udayavani |

ಹೆಬ್ರಿ: ಗ್ರಾಮೀಣ ಪ್ರದೇಶದಲ್ಲಿ ಕೂಡ ಪ್ರತಿಭೆಗಳು ಇವೆ. ಆದರೆ ಸೂಕ್ತ ತರಬೇತಿ ಕೊರತೆಯಿಂದ ಅವಕಾಶ ವಂಚಿತರಾಗಿದ್ದಾರೆ. ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಹಾಗೂ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹೆಬ್ರಿ ಚಾಣಕ್ಯ ಟ್ಯೂಟೋರಿಯಲ್‌ ಕಾಲೇಜು ಈಗಾಗಲೇ ಚಿತ್ರಕಲೆ, ಟ್ರ್ಯಾಕ್‌ ಸಂಗೀತ, ಶಾಸ್ತ್ರೀಯ ಸಂಗೀತ ಮೊದಲಾದ ತರಬೇತಿಯನ್ನು ಆರಂಭಿಸಿದ್ದು ಇದೀಗ  ಜಾನಪದ, ಫಿಲ್ಮಿ ನೃತ್ಯ ತರಗತಿ ಆರಂಭಿಸಿರುವುದರೊಂದಿಗೆ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಉದ್ಯಮಿ ಎಚ್‌. ಭಾಸ್ಕರ್‌ ಜೋಯಿಸ್‌ ಹೇಳಿದರು. ಅವರು ಜು. 16ರಂದು ಹೆಬ್ರಿ ಶ್ರೀರಾಮ್‌ ಟವರ್‌ನಲ್ಲಿರುವ ಚಾಣಕ್ಯ ಟ್ಯುಟೋರಿಯಲ್‌ ಕಾಲೇಜಿನಲ್ಲಿ ಆರಂಭಗೊಂಡ ಜಾನಪದ ಹಾಗೂ ಫಿಲ್ಮಿ ನೃತ್ಯ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಪ್ರಶಸ್ತಿ ಪುರಸ್ಕೃತ ಗಾಯಕ ಮುಟ್ಲಪಾಡಿ ಉದಯ ಶೆಟ್ಟಿ, ಸಂಗೀತ ತರಬೇತುದಾರ ಸಪ್ತಸ್ವರ ಉದಯ್‌ ಅಜೆಕಾರು ಅವರ 3 ನಿಮಿಷದ ಭಕ್ತಿ ಸಂಗೀತ ಹಾಡು ಮುಗಿಯುವುದರ ಒಳಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕಲಾವಿದ ಪುನೀತ್‌ ಎಸ್‌. ಮೈಸೂರು ಅವರಿಂದ ಬಜರಂಗಿ ಚಿತ್ರದ ರಚನೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಈ ಸಂದರ್ಭ ಅವಶ್ಯ ಹೆಗ್ಡೆ ಅವರಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ಹೆಬ್ರಿ ಸ.ಪ್ರಾ. ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸತೀಶ್‌ ಬಚ್ಚಪ್ಪು, ನೃತ್ಯ ನಿರ್ದೇಶಕ ಹರೀಶ್‌ ಕುಂಜಾಲ್‌, ಉದ್ಯಮಿ ದಿನಕರ ಪ್ರಭು, ಸುನೀತಾ ಆರ್‌. ಹೆಗ್ಡೆ, ಅರುಣ್‌ ಹೆಗ್ಡೆ ಉಪಸ್ಥಿತರಿದ್ದರು. ಚಾಣಕ್ಯ ಟ್ಯುಟೋರಿಯಲ್‌ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಸ್ವಾಗತಿಸಿದರು. ರಮ್ಯಾ ಕಾಪೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next