Advertisement
ನಾವು ತಿನ್ನುವ ಊಟದಲ್ಲಿ ದಿನನಿತ್ಯ ಕನಿಷ್ಠ 80 ಗ್ರಾಂ.ಗಳಷ್ಟಾದರೂ ದ್ವಿದಳ ಧಾನ್ಯದ ಕಾಳುಗಳು ಇರಲೇಬೇಕು!ಹೌದು, ದ್ವಿದಳ ಧಾನ್ಯಗಳಿಗೆ ಇರುವ ಮಹತ್ವವೇ ಅಂಥದ್ದು. ಆಹಾರದಲ್ಲಿ ಮುಖ್ಯವಾಗಿ ಇರಬೇಕಾದ ಪ್ರೊಟೀನ್/ ಸಸಾರಜನಕ ಅಂಶವನ್ನು ಇವು ಒದಗಿಸುತ್ತವೆ. ಕಾಳುಗಳಲ್ಲಿ 39; ಸಿ39; ಜೀವಸತ್ವ ಹೆಚ್ಚಾಗಿದ್ದು, ಇವುಗಳನ್ನು ನಿರಂತರವಾಗಿ ಸೇವಿಸಿದರೆ ಅನಾರೋಗ್ಯ ನಿಮ್ಮ ಹತ್ತಿರವೂ ಸುಳಿಯಲ್ಲ. ಈ ಹಿನ್ನೆಲೆಯಲ್ಲಿಯೇ ಜಗತ್ತಿನಾದ್ಯಂತ ದ್ವಿದಳ ಧಾನ್ಯಗಳಿಗೆ ಅಧಿಕ ಬೇಡಿಕೆ ಇದೆ.
ಕಡಲೆಯಲ್ಲಿ ಕಂದು, ಹಳದಿ, ಕಪ್ಪು, ಬಿಳಿ ಹೀಗೆ ನಾಲ್ಕು ಬಣ್ಣದವುಗಳಿವೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದ ಕಡಲೆ ಬೆಳೆಯುತ್ತಾರೆ. ಆದರೂ ಅಣ್ಣಿಗೇರಿ- 1 ಕಡಲೆ ಅತ್ಯಂತ ಜನಪ್ರಿಯ ತಳಿ. ಜೊತೆಗೆ ಬಿ.ಜಿ.ಡಿ – 103 ಹಾಗೂ ಜೆ.ಜಿ – 11 ಕೂಡ ಅಧಿಕ ಇಳುವರಿ ಕೊಡುವ ತಳಿಗಳು.
Related Articles
Advertisement
ನಿರ್ವಹಣೆ ಹೇಗೆ?ಕಡಲೆಯ ಹೊಲದಲ್ಲಿ ಮಾಮೂಲಾಗಿ ಹೆಚ್ಚಿನ ಕಳೆಯ ಕಾಟ ಇರಲ್ಲ. ಆದರೂ ಎರಡೂರು ಸಲ ಎಡೆಕುಂಟೆ ಹೊಡೆದು ಮಣ್ಣು ಸಡಿಲ ಮಾಡಿ, ಬಿರುಕುಗಳಿದ್ದರೆ ಮುಚ್ಚುವ ಹಾಗೆ ಮಾಡಿ. ಹಾಗೆಯೇ ಕೊನೆಯ ಸಲ ಎಡೆಕುಂಟೆ ಹೊಡೆಯುವಾಗ ಮಳೆ ಬಂದರೆ ನೀರು ಸಂಗ್ರಹವಾಗುವಂತೆ ಸ್ವಲ್ಪ ಮಣ್ಣನ್ನು ಗಿಡದ ಬುಡಕ್ಕೆ ಒತ್ತಿರಿ. ಪ್ರತಿ ಸಲ ಎಡೆಕುಂಟೆ ಹೊಡೆಯುವಾಗ ತಂಪಾದ ವಾತಾವರಣದಲ್ಲಿ ಇಟ್ಟ ಒಳ್ಳೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಮುಂಗಾರಿನ ಬೆಳೆಗಾಗಿ ತಂದ ಇತರ ಸೂಕ್ಷ್ಮ ಪೋಷಕಾಂಶಗಳು ಉಳಿದಿದ್ದರೆ ಅವುಗಳನ್ನು ಮಿಕ್ಸ್ ಮಾಡಿ ಎರಚಬೇಕು. ತೀರ ರಾಸಾಯನಿಕ ಗೊಬ್ಬರ ಕೊಡಲೇಬೇಕು ಅನಿಸಿದರೆ ಎಕರೆಗೆ ಹೆಚ್ಚೆಂದರೆ ಹತ್ತು ಕೇಜಿಯಷ್ಟು ಡಿ.ಎ.ಪಿ ಗೊಬ್ಬರ ಮಾತ್ರ ಕೊಡಿ ಸಾಕು. ಇದರ ನಿವಾರಣೆಗಾಗಿ ಒಂದೆರಡು ಕೀಟಗಳು ಕಂಡಕೂಡಲೇ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯ ಸಿಂಪಡಿಸಬೇಕು. ಜೊತೆಗೆ ಕಡಲೆ ಬಿತ್ತುವಾಗ ಕಡಲೆ ಜೊತೆ ಒಂದಿಷ್ಟು ಸೂರ್ಯಕಾಂತಿ ಹಾಗೂ ಜೋಳದ ಬೀಜಗಳನ್ನು ಮಿಕ್ಸ್ ಮಾಡಿ ಬಿತ್ತಬೇಕು. ಆಗ ಪರಭಕ್ಷಕ ಪಕ್ಷಿಗಳು ಇದರ ಮೇಲೆ ಕುಳಿತು ಕೀಟಗಳನ್ನು ಹುಡುಕಿ ತಿನ್ನುತ್ತವೆ. ರೋಗ ಬಂದಾಗ…
ಕಡಲೆ ಬೆಳೆಗೆ ಸಿಡಿರೋಗ, ಬೂದಿರೋಗ, ಗೊಡ್ಡುರೋಗ ಬರುವುದು ಸಾಮಾನ್ಯ. ಬಿತ್ತುವ ಮೊದಲು ಬೀಜಗಳಿಗೆ ಟ್ರೈಕೊಡಮಾರ್ ಜೈವಿಕ ಶಿಲಿಂದ್ರದಿಂದ ಬೀಜೋಪಚಾರ ಮಾಡಿ ಬಿತ್ತಿದರೆ, ಸಿಡಿ ರೋಗ ಬರುವುದಿಲ್ಲ. ಬೂದಿರೋಗ ಬಂದಾಗ, 1 ಲೀ. ನೀರಿಗೆ ಅರ್ಧ ಗ್ರಾಮ್‌ನಷ್ಟು ಕಾರ್ಬನ್ ಡೈಜಿಮ್ ಬೆರೆಸಿ ಸಿಂಪಡಿಸಬೇಕು. ಗೊಡ್ಡು ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅಂಥ ಗಿಡಗಳನ್ನು ಕಿತ್ತೆಸೆಯುವುದೇ ಸೂಕ್ತ. ಆದಷ್ಟು ಒಳ್ಳೆಯ ಬೀಜಗಳನ್ನು ನೆಟ್ಟರೆ ಇದರ ತಲೆಬಿಸಿ ಇರದು.
-ಎಸ್.ಕೆ. ಪಾಟೀಲ್