Advertisement

ಚಾಮುಂಡೇಶ್ವರಿಯ ಮತದಾರರು ಸಿದ್ದರಾಮಯ್ಯ ಚಡ್ಡಿ,ಪಂಚೆ ಕಳಚಿದ್ದಾರೆ: ಸಚಿವ ಜೋಶಿ

02:33 PM Jun 06, 2022 | Team Udayavani |

ವಿಜಯಪುರ : ಉತ್ತರಪ್ರದೇಶ, ಮಧ್ಯಪ್ರದೇಶ, ಆಸ್ಸಾಂ, ಛತ್ತೀಸಗಢ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ ನಾಯಕರ ಚಡ್ಡಿ ಕಳಚಿ ಕಳುಹಿಸಿದ್ದು, ದೇಶದಲ್ಲೇ ಕಾಂಗ್ರೆಸ್ ಚಡ್ಡಿ ಕಳಚಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಸಿದ್ದರಾಮಯ್ಯನ ಚಡ್ಡಿ ಮಾತ್ರವಲ್ಲ ಪಂಚೆಯನ್ನೂ ಕಳಚಿ ಕಳುಹಿಸಿದ್ದಾರೆ. ಇದರಿಂದ ಹರಿದ ಚಡ್ಡಿ ಸಡಿಲವಾಗಿರುವ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬೇರೆಯವರ ಚಡ್ಡಿ ಸುಡಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕ ಚಡ್ಡಿ ಅಭಿಮಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಸೋಮವಾರ ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿಗಳಾದ ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಪರ ಪ್ರಚಾರ ನಡೆಸಿದ ಅವರು, ಅವರು ಹರುಕು ಚಡ್ಡಿ ಹಾಕಿದ್ದರಿಂದ ಬೇರೆಯವರ ಚೆಡ್ಡಿ ಸುಡಲು ಹೊರಟಿದ್ದಾರೆ. ಜನರು ಕಾಂಗ್ರೆಸ್ ನಾಯಕರ ಚಡ್ಡಿ ಸುಟ್ಟಿರುವ ಸಿಟ್ಟಿನಿಂದ ನಮ್ಮ ವಿರುದ್ದ ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಎಲ್ಲೆಡೆ ಚಡ್ಡಿ ಕಳೆದುಕೊಂಡಿರುವ ನೀವು, ನಿಮ್ಮ ಚಡ್ಡಿ ಕಳೆದುಕೊಂಡಿರುವ ಆತಂಕದಲ್ಲಿ ಆರ್ ಎಸ್ಎಸ್ ಚಡ್ಡಿ ಸುಡಲು ಮುಂದಾಗಿದ್ದೀರಿ. ಭವಿಷ್ಯದಲ್ಲಿ ದೇಶದ ಜನರು ಅಳಿದುಳಿದ ನಿಮ್ಮ ಚಡ್ಡಿಯನ್ನು ಕಸಿದು ಬೆತ್ತಲೆ ಮಾಡುತ್ತಾರೆ. ಹೀಗಾಗಿ ತಕ್ಷಣ ಕಾಂಗ್ರೆಸ್ ನಾಯಕರು ಇಂಥ ಹುಚ್ಚು ಚಟುಚಟಿಕೆ ನಿಲ್ಲಿಸಬೇಕು ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಮುಖ್ಯಂಂತ್ರಿಯಾಗಿದ್ದ ನೀವು 30 ಸಾವಿರ ಮತಗಳ ಅಂತರದಿಂದ ಸೋಲಿಸಿ ಜನರು ನಿಮ್ಮ ಚಡ್ಡಿ ಕಳಚಿದ್ದಾರೆ. ತವರು ಕ್ಷೇತ್ರದಲ್ಲಿ ಸೋತರೂ ಉತ್ತರ ಕರ್ನಾಟಕ ಬದಾಮಿ ಕ್ಷೇತ್ರದ ಮತದಾರ ಕೈಹಿಡಿದ್ದಾರೆ. ಅಲ್ಲಿಯೂ ಕೇವಲ ಸಾವಿರ ಮತಗಳ ಅಂತರದಿಂದ ಪಾರಾಗಿ ವಿಧಾನಸಭೇಯಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆದಿದ್ದೀರಿ. ಇದಕ್ಕಾಗಿ ನೀವು ಬದಾಮಿ ಜನರಿಗೆ ಋಣಿಯಾಗಿರಬೇಕು ಎಂದು ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮೊದಲು ನಿಮ್ಮ ಚೆಡ್ಡಿ ಗಟ್ಟಿ ಮಾಡಿಕೊಳ್ಳೋ ಪ್ರಯತ್ನ ಮಾಡಿ ಎಂದು ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿರುವ ಜೋಶಿ, ಬಳಿಕ ಆರ್
ಎಸ್‍ಎಸ್ ಚಡ್ಡಿ ಸುಡೋ ಕೆಲಸ ಮಾಡಿ. ನಿಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಅವರ ತಂದೆ, ಅಜ್ಜಆರ್
ಎಸ್‍ಎಸ್ ನ್ನು ಒಳಗಿನಿಂದ ಸುಡಲು ಹೋಗಿ ರಾಜಕೀಯವಾಗಿ ಏನಾಗಿದೆ ನೋಡಿದ್ದೀರಿ ಎಂದರು.

Advertisement

ವಾಯವ್ಯ ಶಿಕ್ಷಕರ ಮೇಲ್ಮನೆ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ, ಪದವೀಧರರ ಕ್ಷೇತ್ರದ ಅಭ್ಯರ್ಥಿ ಹಣಮಂತ ನಿರಾಣಿ, ಸಚಿವರಾದ ಉಮೇಶ ಕತ್ತಿ, ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next