Advertisement

ಚಾಮುಂಡೇಶ್ವರಿ ಅತಿ ಎತ್ತರದ ವಿಗ್ರಹ ಲೋಕಾರ್ಪಣೆ

04:26 PM Aug 09, 2021 | Team Udayavani |

ಮದ್ದೂರು: ಮದ್ದೂರು-ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮ ಮಳೂರು ಹೋಬಳಿ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದಲ್ಲಿ ವಿಶ್ವದ ಅತಿ ಎತ್ತರದ (ಭೂಮಟ್ಟದಿಂದ60 ಅಡಿ)ಸೌಮ್ಯಭಾವದ 18 ಬಾಹುಗಳುಳ್ಳ ಶ್ರೀ ಚಾಮುಂಡೇಶ್ವರಿ ದೇವಿಯ ಸ್ವರ್ಣಲೇಪಿತ ಪಂಚಲೋಹದ ವಿಗ್ರಹ ಭಾನುವಾರ ಪ್ರಾತಃಕಾಲ ಭಕ್ತಾದಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

Advertisement

ಅತೀ ಎತ್ತರದ ವಿಗ್ರಹ: ದಕ್ಷಿಣಾ ಏಷ್ಯಾದಲ್ಲೇ ಎತ್ತರದ ವಿಗ್ರಹವೆಂಬ ಖ್ಯಾತಿ ಹೊಂದಿರುವ ಶ್ರೀ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳೊಡನೆ ಅನಾವರಣಗೊಂಡು ಭಕ್ತರ ಹರ್ಷೋದ್ಘಾರಕ್ಕೆ ಕಾರಣವಾಯಿತು.

ಕ್ಷೀರಾಭಿಷೇಕ: ಭಾನುವಾರ ಬೆಳಗ್ಗೆ ಅಮ್ಮನವರಿಗೆ ರುದ್ರಾಭಿಷೇಕ, ಶ್ರೀಚಕ್ರಕ್ಕೆ ಚಕ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿದ ಬಳಿಕ ಕ್ಷೇತ್ರದಲ್ಲಿನ ಬನ್ನಿಮಂಟಪದಿಂದ ಪೂಜಾಕುಣಿತ, ಡೊಳ್ಳು ಕುಣಿತ, ವೀರಗಾಸೆ, ಹೆಸರಾಂತ ಗುಗ್ಗಳ ಕುಣಿತ, ತೆಂಗಿನ ಕಾಯಿ ಪವಾಡ ಇನ್ನಿತರೆ ಜಾನಪದ ಕಲಾ ಮೇಳಗಳೊಂದಿಗೆ 108 ಹಾಲರವಿಯನ್ನು ಕ್ಷೇತ್ರ ಪಾಲಕರಾದ ಪವಾಡ ಬಸವಪ್ಪ
ಅವರಿಗೆ ಕ್ಷೀರಾಭಿಷೇಕ ಜರುಗಿತು.

ಇದನ್ನೂ ಓದಿ:ಆಗಸ್ಟ್ 9 ಮಲೆ(ಳೆ)ನಾಡಿಗರ ಪಾಲಿಗೆ ಕರಾಳ ದಿನ.! ಇನ್ನೂ ತಪ್ಪಲಿಲ್ಲ ಸಂತ್ರಸ್ಥರ ಕಣ್ಣೀರು.. !

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವಿರಳವೆನ್ನಬಹುದಾದ ಭಕ್ತ ಸಮೂಹ ಭಾನುವಾರ ದಿನವಿಡೀ ಶ್ರೀಚಾಮುಂಡೇಶ್ವರಿ ಬಸವಪ್ಪ ನವರ ಕ್ಷೇತ್ರದಲ್ಲಿ ಜರುಗಿದ ವಿವಿಧ ಪೂಜಾ ಕೈಂಕರ್ಯಗಳ ವೇಳೆ ಕೋವಿಡ್‌ ನಿಯಮಾನುಸಾರ ಮುಂಜಾಗ್ರತಾ ಕ್ರಮವಾಗಿ ಪಾಲ್ಗೊಳ್ಳುವ ಜತೆಗೆ ಆಗಮಿಸಿದ ಭಕ್ತರಿಗೆ ಕ್ಷೇತ್ರದ ಬಸವಪ್ಪ ದರ್ಶನ ನೀಡುವ ಮೂಲಕ ಗಮನಸೆಳೆಯಿತು.

Advertisement

ಆಶೀರ್ವಚನ : ಬೇವೂರು ಮಠದ ಮೃತ್ಯುಂಜಯ್ಯ ಶಿವಾಚಾರ್ಯ ಶ್ರೀಗಳು ನೂತನ ಪ್ರತಿಮೆಯ ಅನಾವರಣ ಮತ್ತು ಇತರೆ ಕಾರ್ಯಕ್ರಮಗಳ ವೇಳೆ ಪಾಲ್ಗೊಂಡು ಆಶೀರ್ವಚನ ನೀಡಿದರು..‌ ಕಳೆದ ದಶಕದಿಂದೀಚೆಗೆ ಶ್ರೀಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಭಕ್ತರ ನೆರವಿನೊಂದಿಗೆ ಸಾಗಿದ್ದು, ಶಕ್ತಿ ದೇವತೆ ಚಾಮುಂಡೇಶ್ವರಿ ಶಾಂತ ಸ್ವರೂಪಿ ಮೂರ್ತಿ ಪ್ರತಿಷ್ಠಾಪನೆ ಭಕ್ತರ ಅಭೀಕ್ಷೆಯಂತೆ ನೆರೆವೇ ರಿರುವುದಾಗಿ ಸಂಸ್ಥೆ ಧರ್ಮದರ್ಶಿ ಜಿ.ಬಿ. ಮಲ್ಲೇಶ್‌ ಪತ್ರಿಕೆಗೆ ತಿಳಿಸಿದರು.

ವಿಗ್ರಹದ ವಿಶೇಷತೆ
ಭೂಮಟ್ಟದಿಂದ 60 ಅಡಿ ಎತ್ತರವಿದ್ದು,24 ಅಡಿ ಪೀಠವುಳ್ಳ 36 ಅಡಿ ಲೋಹದ ಮೂರ್ತಿಗೆ ಸ್ವರ್ಣ ಲೇಪನ ಕಾರ್ಯ ಪೂರ್ಣಗೊಂಡಿದ್ದು, ಪುಷ್ಪಲಂಕಾರಗಳ ನಡುವೆ ಅಲಂಕೃತಗೊಂಡಿದ್ದ ಮೂರ್ತಿ ನೋಡುಗರ ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next